Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದ್ದ ಸಿಪಿಎಸ್‍ಇ ಸಮ್ಮೇಳನ-2018 ಅನ್ನು ಉದ್ದೇಶಿಸಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ:


ನನ್ನ ಸಹೋದ್ಯೋಗಿಗಳಾದ ಭಾರೀ ಉದ್ಯಮ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಸಚಿವರಾದ ಶ್ರೀ ಅನಂತ್‍ ಗೀತೆ ಅವರೇ, ರಾಜ್ಯ ಸಚಿವರಾದ ಶ್ರೀ ಬಾಬುಲ್ ಸುಪ್ರಿಯೋ ಅವರೇ, ನನ್ನ ಸಹೋದ್ಯೋಗಿ ಶ್ರೀ ಪಿ.ಕೆ.ಮಿಶ್ರಾ ಮತ್ತು ಪಿ.ಕೆ.ಸಿನ್ಹಾ ಅವರೇ, ದೇಶದ ಎಲ್ಲೆಡೆಯಿಂದಲೂ ಬಂದಿರುವ ಕೇಂದ್ರೀಯ ಸಾರ್ವಜನಿಕ ಸೇವಾ ವಲಯದ ಹಿರಿಯ ಅಧಿಕಾರಿಗಳೇ, ಇಲ್ಲಿ ನೆರೆದಿರುವ ಇತರೆ ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ..

 

ಶ್ರೀ ಅನಂತ್ ಗೀತೆ ಅವರು ಹಾಡುವುದಿಲ್ಲ. ಆದರೆ ಶ್ರೀ ಬಾಬುಲ್ ಜೀ ಅವರು ಹಾಡುತ್ತಾರೆ. ಇದು ಸಾರ್ವಜನಿಕ ವಲಯದ ಸಣ್ಣ ಜಗತ್ತಿನ ಹೊಸ ಆರಂಭ. ನಾನು ನಿಮ್ಮೆಲ್ಲರನ್ನೂ ಸಿಪಿಎಸ್‍ಇ ಸಮ್ಮೇಳನಕ್ಕೆ ಸ್ವಾಗತಿಸುತ್ತೇನೆ. ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಏಕೆಂದರೆ ನಾನು ನಿಮ್ಮ ಶ್ರದ್ಧೆ, ಉತ್ಸಾಹ ಮತ್ತು ಕಳೆದ ಒಂದೂ-ಒಂದೂಕಾಲು ಗಂಟೆಗಳಲ್ಲಿ ತಾವುಗಳು ನೀಡಿದ ಚಿಂತನೆಗಳ ಪ್ರಸ್ತುತಿಯು ಒಟ್ಟಾರೆಯಾಗಿ ಸ್ಪಷ್ಟತೆಯಿಂದ ಕೂಡಿತ್ತು. ಕಾರ್ಪೊರೇಟ್ ಆಡಳಿತದಿಂದ ಅನ್ವೇಷಣೆ, ತಂತ್ರಜ್ಞಾನ ಮತ್ತು ನವಭಾರತದ ನಿರ್ಮಾಣ ನಿಟ್ಟಿನಲ್ಲಿ ತಮ್ಮ ದೃಷ್ಟಿಕೋನ ಮತ್ತು ಆಲೋಚನೆಗಳ ಹಲವು ಆಯಾಮಗಳನ್ನು ನಾನು ಅರಿತುಕೊಳ್ಳಲು ಸಾಧ್ಯವಾಯಿತು. ನನಗೆ ಈ ಹಿಂದೆ ಯಾವುದಾದರೂ ಮಾಜಿ ಪ್ರಧಾನಮಂತ್ರಿಗಳು ಇಂತಹ ಅವಕಾಶವನ್ನು ಪಡೆದುಕೊಂಡಿದ್ದರೇ ಎಂಬುದು ನನಗೆ ಗೊತ್ತಿಲ್ಲ.

 

ನಾನು ಈ ಚರ್ಚೆಯಲ್ಲಿ ಪಾಲ್ಗೊಂಡ ಮತ್ತು ಪ್ರಸ್ತುತಿಯ ತಂಡದಲ್ಲಿ ಒಳಗೊಂಡಿದ್ದವರನ್ನೆಲ್ಲಾ ಅಭಿನಂದಿಸಲು ಬಯಸುತ್ತೇನೆ. ಅವರುಗಳು ಅತ್ಯಂತ ಆಳವಾದ ಚರ್ಚೆ ಮತ್ತು ಹಲªವು ಉಲ್ಲೇಖಗಳನ್ನು ಸಂಗ್ರಹ ಮಾಡಿದ್ದಾರೆ. ಅವರು ವ್ಯಾಪ್ತಿಯಿಂದ ಆಚೆಗೆ ಆಲೋಚನೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

 

ಕಳೆದ ಹಲವು ತಿಂಗಳುಗಳಿಂದ ನೀವು ಅತ್ಯಂತ ವಿಸ್ತಾರವಾದ ಚರ್ಚೆಯನ್ನು ನೀವು ನಡೆಸಿದ್ದೀರಿ. ನಿಮ್ಮನಿಮ್ಮ ಸಂಬಂಧಿಸಿದ ವಲಯಗಳಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತರುವಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದೀರಿ. ನಾನು ಕೂಡಾ ನಿಮ್ಮ ಚರ್ಚೆ ಮತ್ತು ವಿಚಾರಗಳಲ್ಲಿ ನನ್ನ ಆಲೋಚನೆಗಳನ್ನೂ ಒಳಗೊಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ಆದ್ದರಿಂದ ನಿಮ್ಮ ಮತ್ತು ನನ್ನ ಆಲೋಚನೆಗಳ ಮಧ್ಯೆ ಒಂದಷ್ಟು ಸಮತೋಲನ ಇದೆ. ಚರ್ಚೆ ಮತ್ತು ಸಂವಾದದ ಸಂದರ್ಭದಲ್ಲಿ ಒಂದಲ್ಲಾ ಒಂದು ರೀತಿ ಎಲ್ಲರೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

 

ನಿತ್ಯವೂ ನೀವು ಎದುರಿಸುತ್ತಿರುವ ಒಂದಷ್ಟು ಹಲವು ಸವಾಲುಗಳ ಬಗ್ಗೆ ನೀವು ಚರ್ಚೆ ನಡೆಸಿದ್ದೀರಿ. ಈ ಸಮಸ್ಯೆಗಳಿಂದ ಹೊರಬರಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಾರ್ವಜನಿಕ ವಲಯಕ್ಕೆ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಲಿ ಎನ್ನುವ ಉದ್ದೇಶದಿಂದ ಸರ್ಕಾರವು ಕಾರ್ಯಾತ್ಮಕವಾದ ಸ್ವಾತಂತ್ರವನ್ನು ನೀಡಿದೆ.

 

ಸ್ನೇಹಿತರೇ,

 

ದೇಶ ಸ್ವಾತಂತ್ರ್ಯಗೊಂಡ ನಂತರ ದೇಶ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದಡಿಯಲ್ಲಿ ಕೆಲಸ ಮಾಡುವ ಸಾಕಷ್ಟು ಸಂಸ್ಥೆಗಳು ಸಾಕಷ್ಟು ಕೊಡುಗೆಯನ್ನು ನೀಡಿವೆ. ಅವತ್ತಿನ ಕಾಲದಲ್ಲಿ ವಿವಿಧ ವಲಯಗಳಿಗೆ ಭಾರತ ಅನುಧಾನ, ತಂತ್ರಜ್ಞಾನ ಮತ್ತು ಹೂಡಿಕೆಯ ಅಗತ್ಯಗಳನ್ನು ಬಯಸುತ್ತಿತ್ತು. ಈ ಎಲ್ಲವನ್ನೂ ಪಡೆದುಕೊಳ್ಳುವುದು ಅವತ್ತಿನ ಮಟ್ಟಿಗೆ ಅಷ್ಟು ಸುಲಭವೂ ಆಗಿರಲಿಲ್ಲ. ಆದ್ದರಿಂದ ಸಾರ್ವಜನಿಕ ವಲಯದ ಸಂಸ್ಥೆಗಳು ಈ ಅಗತ್ಯಗಳನ್ನು ಮುಟ್ಟುವಂತಹ ಅವಕಾಶಗಳನ್ನು ಮಾಡಿಕೊಟ್ಟವು. ಸಾಕಷ್ಟು ಪ್ರಮಾಣದ ಉತ್ತಮ ಬ್ರ್ಯಾಂಡ್‍ಗಳು ಬೆಳಕಿಗೆ ಬಂದವು. ಇಂಧನ ಉತ್ಪಾದನೆ, ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳ ತಯಾರಿಕೆ, ಉಕ್ಕು ಉತ್ಪಾದನೆ, ಕಲ್ಲಿದ್ದಲು ಮತ್ತು ಸಂಬಂಧಿತ ಉತ್ಪನ್ನಗಳು ಹೀಗೆ ಸಾಕಷ್ಟು ಕ್ಷೇತ್ರದಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಂಡಿದ್ದವು. ಅವತ್ತಿನ ಮಟ್ಟಿಗೆ ಸಾರ್ವಜನಿಕ ಉದ್ದಿಮೆಗಳು ಈ ಮಟ್ಟಿಗೆ ವಿಸ್ತರಿಸಿರಲಿಲ್ಲ. ನೀವೆಲ್ಲರೂ ದೇಶದ ಆರ್ಥಿಕ ಬೆಳವಣಿಗೆಯನ್ನು ಚುರುಕುಗೊಳಿಸಿದಿರಿ. ಇವತ್ತಿನ ದಿನದಲ್ಲೂ ನೀವು ಕೇವಲ ಭಾರತದ ಆರ್ಥಿಕ ವ್ಯವಸ್ಥೆಯನ್ನು ಮಾತ್ರ ಬಲಪಡಿಸುತ್ತಿಲ್ಲ. ಭಾರತದ ಕೈಗಾರಿಕೆಗೆ ವೇಗವರ್ಧಕದಂತೆ ಕೆಲಸ ಮಾಡುತ್ತಿದ್ದೀರಿ.

 

ಸ್ನೇಹಿತರೇ,

 

ಸಾಮಾನ್ಯವಾಗಿ ಖಾಸಗಿ ಕಂಪನಿಯ ಸಿಇಒ ಕೆಲಸವು ಅವನ ಪಾಲುದಾರರಿಗೆ ಬಂದ ಲಾಭದ ಆಧಾರದ ಮೇಲೆ ನಿಂತಿರುತ್ತದೆ. ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಲಾಭ ಎನ್ನುವುದು ಅಷ್ಟೇ ಮಹತ್ವದ್ದು. ಆದರೆ, ಅದೇ ಸಂದರ್ಭದಲ್ಲಿ ಅವು ತಮ್ಮ ಸಮಾಜದ ಕಲ್ಯಾಣವನ್ನೂ ನೋಡಬೇಕಾಗಿರುತ್ತದೆ.

 

ನಾನು ನಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ನಾವು ಇಡೀ ಸಮಾಜವನ್ನು ಪರಿಗಣನೆಗೆ ತಗೆದುಕೊಳ್ಳಬೇಕಿದೆ. ಪಿಎಸ್‍ಇ ಲಾಭ ಮತ್ತು ಸಾಮಾಜಿಕ ಅಭಿವೃದ್ಧಿ ಲಾಭಗಳನ್ನು ನೀಡುವ ಸಂಸ್ಥೆಗಳನ್ನು ಶಿಫಾರಸು ಮಾಡುತ್ತದೆ. ಇದರ ಅರ್ಥ ಅವು ಕೇವಲ ಲಾಭ ಮಾಡಿಕೊಳ್ಳುವುದು ಅಷ್ಟೇ ಅಲ್ಲ. ಸಮಾಜಕ್ಕೂ ತಮ್ಮ ಲಾಭವನ್ನು ಹರಿಸಬೇಕು ಎನ್ನುವುದು ಇದರ ಉದ್ದೇಶವಾಗಿದೆ.  

****