ಪಿಎಂಇಂಡಿಯಾ
ಸಮಸ್ತ ವರಿಷ್ಠ ಮಹಾನುಭಾವರೆ,
ಇಂದು ಪ್ರಶಸ್ತಿ ಪಡೆದ ಎಲ್ಲರಿಗೂ ನನ್ನ ಕಡೆಯಿಂದ ಬಹಳ-ಬಹಳ ಅಭಿನಂದನೆಗಳು. ಮತ್ತು ಬಹಳಷ್ಟು ಜನರು ಬಹುಶಃ ಪ್ರಶಸ್ತಿಯವರೆಗೆ ತಲುಪದೆ ಇರುವವರು ಇರಬಹುದು, ಆದರೆ ಅದಕ್ಕೆ ಬಹಳ ಹತ್ತಿರವಿರಬಹುದು. ನಾನು ಅವರನ್ನೂ ಅಭಿನಂದಿಸುತ್ತೇನೆ. ಹೀಗೆ ಈ ಪರಂಪರೆ ನಡೆಯುತ್ತಾ ಇರಬೇಕು. ಪ್ರತಿಯೊಂದು ರೀತಿಯ ಲೇಖನಿ, ಪ್ರತಿಯೊಬ್ಬರ ವಿಚಾರ ಮತ್ತು ಅವರ ಪರಿಶ್ರಮಗಳು ದೇಶವನ್ನು ಮುನ್ನಡೆಸುವುದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ನೀಡುತ್ತಿರಬೇಕು. ಬಹಳ ಜನರು ತಮ್ಮ ಜೀವನ ಕಾಲದಲ್ಲಿ ತಮ್ಮ ಕ್ಷೇತ್ರದಲ್ಲಿ ಒಂದು ಜಾಗವನ್ನು ಮಾಡಿಕೊಂಡಿರುತ್ತಾರೆ. ಕೆಲವು ಜನರು ತಮ್ಮ ಜೀವನ ಕಾಲದಲ್ಲಿ ತಮ್ಮ ಕ್ಷೇತ್ರದ ಹೊರಗೂ ತಮ್ಮದೇ ಸ್ಥಾನವನ್ನು ಮಾಡಿಕೊಂಡಿರುತ್ತಾರೆ. ಆದರೆ ತಮ್ಮ ಜೀವಿತ ಕಾಲದ ನಂತರವೂ ತಮ್ಮ ಕ್ಷೇತ್ರದಲ್ಲಿ ತಮ್ಮ ಕ್ಷೇತ್ರದ ಪರಿಧಿಯಲ್ಲಿ ತಮ್ಮದೇ ಜಾಗವನ್ನು ಮಾಡಿಕೊಳ್ಳುವ ಅಮರರೆನಿಸಿಕೊಳ್ಳುವಂತಹ ಜನರು ಬಹಳ ಕಡಿಮೆ. ಇಂತಹವರಲ್ಲಿ ರಾಮನಾಥ ಗೋಯಂಕಾರವರ ಹೆಸರೂ ಒಂದು.
ನನಗೆ ರಾಮನಾಥ ಗೋಯಂಕಾರವರನ್ನು ದರ್ಶನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಅವರು ಗುಜರಾತಿಗೆ ಬಂದಿದ್ದರು. ಅವರು ಎಂತಹ ಸ್ಥಾನದಲ್ಲಿದ್ದರೆಂದರೆ ಅವರನ್ನು ಭೇಟಿ ಮಾಡುವವರ ವಲಯದಲ್ಲಿ ಯಾವುದಾದರೂ ರಾಜಕೀಯ ಪಕ್ಷದ ಅಧ್ಯಕ್ಷರಾಗಿರಬಹುದು ಅಥವಾ ಮುಖ್ಯಮಂತ್ರಿ ಆಗಿರಬಹುದು ಅಥವಾ ಮಾಧ್ಯಮಕ್ಕೆ ಇವರು ಮುಂದೆ ಬಹಳ ದೊಡ್ಡ ಸಂಪಾದಕರಾಗಬಹುದು ಎನಿಸಿರಬೇಕು ಅಂತಹವರು ಇದ್ದದ್ದು ಸಹಜವಾಗಿತ್ತು. ನಾನು ಏನೂ ಆಗಿರಲಿಲ್ಲ. ಬಹುಶಃ ನಗರದ ಯಾರಾದರೂ ಸಂಪಾದಕರನ್ನು ನಾನು ಭೇಟಿಗೆ ಸಮಯ ಕೇಳಿದ್ದರೆ ತಿಂಗಳಾದರೂ ಕೊಡುತ್ತಿರಲಿಲ್ಲವೇನೋ. ಆದರೆ ರಾಮನಾಥರವರ ದರ್ಶನ ನನಗೆ ಸಿಕ್ಕಿತ್ತು. ಆ ಕಾಲವು ಜಯ ಪ್ರಕಾಶ ಜೀ ಆಂದೋಲನದ ಕಾಲವಾಗಿತ್ತು. ಮತ್ತು ರಾಮನಾಥರವರ ಒಳಗೆ ಇದ್ದ ಜ್ವಾಲೆಯನ್ನು ನಾವು ಅನುಭವ ಪಡೆಯಬಹುದಾಗಿತ್ತು. ಅವರು ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಗಾಗಿ ಇದ್ದರು ಅಂತ ಇರಲಿಲ್ಲ. ಪತ್ರಿಕೆಗಳ ಮೂಲಕ ಪ್ರಕಟವಾಗುತ್ತಿದ್ದುದು ಅವರಿಗೆ ಸಂತೋಷವನ್ನು ಕೊಡುತ್ತಿರಲಿಲ್ಲ. ಅವರ ಭಾವನೆಗಳಿಗೆ ಪತ್ರಿಕೆಯು ಚಿಕ್ಕದೆನಿಸುತ್ತಿತ್ತು. ಆದ್ದರಿಂದ ಅವರು ಪತ್ರಿಕೆಯ ಪರಿಧಿಯ ಹೊರಗೂ ಏನನ್ನಾದರೂ ಮಾಡಲು ಇಚ್ಛಿಸುತ್ತಿದ್ದರು ಮತ್ತು ಮಾಡುತ್ತಲೂ ಇರುತ್ತಿದ್ದರು. ಜಯಪ್ರಕಾಶರವರ ಹಿಂದೆ ಒಂದು ಶಕ್ತಿಯಾಗಿ ನಿಂತುಕೊಳ್ಳುವ ಕೆಲಸವನ್ನು ಆ ಸಮಯದಲ್ಲಿ ಯಾರಾದರೂ ಮಾಡಿದ್ದರೆಂದರೆ ಅದು ಗೋಯಂಕಾರವರು. ತಮ್ಮ ಸಿದ್ಧಾಂತಗಳಿಗೆ ಎಷ್ಟು ಪ್ರ್ರಾಮಾಣಿಕರಾಗಿದ್ದರು, ಯಾವ ಎಲ್ಲೆಯೊಳಗಿದ್ದರು ಎಂಬುದು ಪರಿವಾರದ ಎಲ್ಲ ಜನರಿಗೂ ಗೊತ್ತಿತ್ತು. ಅವರ ಜೊತೆ ನಿಕಟ ಸಂಬಂಧವಿದ್ದರೆ ವ್ಯಕ್ತಿಯು ಎಲ್ಲಿಂದ ಎಲ್ಲಿಗೆ ತಲುಪುತ್ತಾನೋ ಗೊತ್ತಾಗುವುದಿಲ್ಲ. ಏನೇನೆಲ್ಲಾ ಪಡೆದುಕೊಳ್ಳುತ್ತಾನೆ. ಅವರ ಪರಿವಾರದವರ ಕೃಪೆಗಾಗಿ ಪ್ರಯತ್ನ ಮಾಡುವವರು ಕಡಿಮೆ ಏನೂ ಇರಲಿಲ್ಲ. ಸಿದ್ಧಾಂತಗಳ ಆಧಾರವು ಈ ಪರಿವಾರದ ಜೊತೆ ನಿಕಟವಾಗಿತ್ತು. ಆದರೆ ಸಿದ್ಧಾಂತಗಳ ಆಧಾರದ ಮೇಲೆ ಪರಿವಾರದ ಜೊತೆ ಸಂಬಂಧ ಮುರಿಯುವಂತಹ ಸಾಹಸ ಯಾರಾದರೂ ತೋರಿಸಿದ್ದರೆಂದರೆ ಅದು ಶ್ರೀ ಗೋಯಂಕಾ ರು ತೋರಿಸಿದ್ದರು, ಸಿದ್ಧಾಂತಗಳ ಮೇಲೆ ಮತ್ತು ಆದರ್ಶಗಳ ಮೇಲೆ.
ಪತ್ರಿಕೋದ್ಯಮವು ಲೇಖನಿಯ ಮಾಧ್ಯಮದಿಂದ ಯಾವುದು ಪ್ರಕಟವಾಗುತ್ತದೋ ಮತ್ತು ಯಾವುದನ್ನು ಮರುದಿನ ಪತ್ರಿಕೆಯಲ್ಲಿ ಜನರು ಓದುತ್ತಾರೋ ಇಷ್ಟಕ್ಕೇ ಸೀಮಿತವಾಗಿರಲಿಲ್ಲ. ಭಾರತದ ಪೂರಾ ಇತಿಹಾಸವನ್ನು ನೋಡಿದರೆ ಈಗ ಪತ್ರಿಕೋದ್ಯಮದ ವಿದ್ಯಾರ್ಥಿಯ ಪಠ್ಯಕ್ರಮ ಏನೇನಿದೆಯೋ ನನಗೆ ಗೊತ್ತಿಲ್ಲ, ಆದರೆ ನಾವು ಭಾರತದ ಪತ್ರಿಕೋದ್ಯಮದ ಇತಿಹಾಸ ನೋಡಿದರೆ ಅದರ ಪೂರಾ ಬೆಳವಣಿಗೆ ಪಯಣವು ಸ್ವಾತಂತ್ರ್ಯ ಚಳುವಳಿಯ ವಿಕಾಸದ ಪಯಣದ ಜೊತೆ ಬೆಸೆದುಕೊಂಡಿದ್ದನ್ನು ಕಾಣುತ್ತೇವೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯಾವುದೇ ಚಳವಳಿಗಾರ ಒಂದಲ್ಲ ಒಂದು ಪತ್ರಿಕೆಯ ಜೊತೆ ಬೆಸೆದುಕೊಂಡಿರದೇ ಇರುತ್ತಿರಲಿಲ್ಲ. ಇಂಗ್ಲೀಷ್ ಸಾಮ್ರಾಜ್ಯದ ವಿರುದ್ಧ ಹೋರಾಡುವುದಾದರೆ ನನ್ನ ಬಳಿ ಇದೂ ಒಂದು ಸಾಧನ ಇದೆ ಎಂದು ತಿಳಿದುಕೊಂಡ ಪ್ರತಿಯೊಬ್ಬರೂ ಹೋರಾಡುತ್ತಿದ್ದರು ಮತ್ತು ಪತ್ರಿಕೋದ್ಯಮ ಕ್ಷೇತ್ರದ ಮೂಲಕ ಸೇವಾ ಭಾವದಿಂದ ದೇಶದ ಸ್ವಾತಂತ್ರ್ಯ ಆಂದೋಲನ ನಡೆಸುತ್ತಿದ್ದ ಹೆಚ್ಚಿನ ಜನರಿಗೆ ಅನೇಕ ವರ್ಷಗಳ ತನಕ ಜೈಲುಗಳಲ್ಲಿ ಜೀವನ ನಡೆಸಬೇಕಾಗಿ ಬರುತ್ತಿತ್ತು. ಆದರೆ ಅವರು ಹೋರಾಡುವುದನ್ನು ಬಿಡಲಿಲ್ಲ. ನಮ್ಮ ದೇಶದ ಪ್ರತಿಯೊಬ್ಬ ದೊಡ್ಡ ಮನುಷ್ಯರ ಹೆಸರು ತಿಲಕ್ ರವರದಾಗಲಿ, ಗಾಂಧೀಜಿಯವರದಾಗಲಿ, ಪ್ರತಿಯೊಬ್ಬರು, ಶ್ರೀ ಅರವಿಂದೋರವರದು ಕೂಡ ತಮ್ಮ ಜೀವಮಾನದಲ್ಲಿ ಪತ್ರಿಕೆಯ ಮಾಧ್ಯಮದಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಬಹಳ ದೊಡ್ಡ ಶಕ್ತಿಯಾಗಿ ಕಾಣಿಸಿಕೊಂಡಿತ್ತು. ಭಾರತದ ಇನ್ನೊಂದು ವಿಶೇಷವೆಂದರೆ ನಮ್ಮ ಜನರು ತಾಯಿ ಸರಸ್ವತಿಯ ಸಂತಾನವೆಂದು ನಾವು ಅನುಭವ ಪಡೆಯುತ್ತೇವೆ. ಕವಿತೆ ಸಹಜವಾಗಿ ಬರುತ್ತದೆ. ಸಾಹಿತ್ಯ ಅವರ ರಚನೆ ಮತ್ತು ಅದು ಸಹಜವಾಗಿರುತ್ತದೆ. ತಾಯಿ ಸರಸ್ವತಿಯ ಆಶೀರ್ವಾದ ಅವರ ಮೇಲಿರುತ್ತದೆ. ಆದರೆ ಒಂದು ಕಾಲವೂ ಇತ್ತು, ಭಾರತದ ಹತ್ತಿರ ಹತ್ತಿರ ಎಲ್ಲಾ ದೊಡ್ಡ ಸಾಹಿತ್ಯಕಾರರು ಪತ್ರಿಕೋದ್ಯಮದ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಪತ್ರಿಕೋದ್ಯಮವನ್ನು ಕಲಿಸಲಾಗುವುದಿಲ್ಲ. ಅವರು ಕವಿತೆಯಿಂದ ಭಾವವನ್ನು ಜಾಗೃತಗೊಳಿಸುತ್ತಿದ್ದರು. ಪತ್ರಿಕೋದ್ಯಮದಿಂದ ಉತ್ಸಾಹವನ್ನು ತುಂಬುತ್ತಿದ್ದರು. ಚಳವಳಿಗೆ ಪ್ರೇರಕ ಶಕ್ತಿಯಾಗಿದ್ದರು. ಕವಿತೆಯ ಶಕ್ತಿಗಿಂತ ಹೆಚ್ಚಾಗಿ ಅವರಿಗೆ ಆ ಸಮಯದಲ್ಲಿ ಪತ್ರಿಕೋದ್ಯಮ ಶಕ್ತಿಯ ಅನುಭವ ಆಗುತ್ತಿತ್ತು. ಕವಿತೆಯ ಮಾರ್ಗ ಅವರ ಸಂತೋಷಕ್ಕಾಗಿ ಇರುತ್ತಿತ್ತು. ಆದರೆ ರಾಷ್ಟ್ರ ಕಲ್ಯಾಣಕ್ಕಾಗಿ ಪತ್ರಿಕೋದ್ಯಮದ ಮಾರ್ಗ ಇತ್ತು. ಇಂತಹ ಸಾಹಿತ್ಯ ಜೀವಿಗಳ ಪೀಳಿಗೆಯೇ ನಮಗಾಗಿ ಇದೆ. ಅಂದರೆ ಇದು ಒಂದು ರೀತಿಯಲ್ಲಿ ಭಾರತದ ಯಾತ್ರೆಯೇ ಆಗಿತ್ತು. ಇಂಗ್ಲೀಷರು ಆಪತ್ತು ತರುವ ಕೆಲವು ಕ್ಷೇತ್ರಗಳನ್ನು ನೋಡಿದ್ದರು. ಅವುಗಳಲ್ಲಿ ಒಂದು ಕ್ಷೇತ್ರ ಈ ಬರೆಯುವ – ಓದುವ ಜನರು. ಅವರಿಗೆ ಅನ್ನಿಸುತ್ತಿತ್ತು, ಇವರಿದ್ದಾರೆ ಅಂದ ಮೇಲೆ ಇವರ ವಿರುದ್ಧ ಯಾವುದಾದರೂ ವ್ಯವಸ್ಥೆಗಳನ್ನು ಮಾಡಬೇಕು ಹೋರಾಟ ನಡೆಸಬೇಕು ಎಂದು.
ದೇಶ ಸ್ವತಂತ್ರ ವಾಯಿತು. ಸ್ವಾತಂತ್ರ್ಯದ ನಂತರ ಭಾರತದ ಲೋಕತಂತ್ರವನ್ನು ಬಲಪಡಿಸುವುದರಲ್ಲಿ, ಲೋಕತಂತ್ರವನ್ನು ಸರಿಯಾದ ಮಾರ್ಗದಲ್ಲಿ ನಡೆಸುವುದರಲ್ಲಿ ಭಾರತದ ಪತ್ರಿಕೋದ್ಯಮದ ಮುಖ್ಯ ಪಾತ್ರವಿದೆ. ಯಾರನ್ನಾದರೂ ವಿಮರ್ಶೆ ಮಾಡುವುದಕ್ಕಲ್ಲ, ಯಾರಿಗಾದರೂ ಕೆಟ್ಟದ್ದನ್ನು ಹೇಳಿ ಆಡಿಕೊಳ್ಳುವುದಕ್ಕಲ್ಲ, ಯಾವುದಾದರೂ ದೊಡ್ಡ ಸಾಂಕ್ರಾಮಿಕ ರೋಗ ಬಂತು ಎಂದಿಟ್ಟು ಕೊಳ್ಳಿ. ಯಾವುದೋ ಕಾಯಿಲೆ ಬಂತು, ಆಗ ಎಲ್ಲರೂ ಮೊದಲು ಬಂದ ದೊಡ್ಡ ರೋಗವನ್ನು ನೆನಪು ಮಾಡಿಕೊಳ್ಳುತ್ತಾರೆ, ಕೆಲವರು ಆಗ ಹೀಗಾಗಿತ್ತು ಎನ್ನುತ್ತಾರೆ, ಏಕೆಂದರೆ ತಿಳಿದಿರುವುದರಿಂದ ತಿಳಿಯದೇ ಇರುವುದಕ್ಕೆ ಹೋಗುವುದು ಸುಲಭವಾಗಿರುತ್ತದೆ. ಆದ್ದರಿಂದ ಲೋಕತಂತ್ರಕ್ಕೆ ಯಾವ ಅಪಾಯಗಳು ಇವೆ, ಅವು ಎಷ್ಟು ಮುಖ್ಯವಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಭಾರತದ ತುರ್ತು ಪರಿಸ್ಥಿತಿಯ ಸಮಯ ಬಹಳ ಸಹಾಯವಾಗುತ್ತದೆ. ತುರ್ತು ಪರಿಸ್ಥಿತಿಯ ಮಾತನಾಡಿದರೆ ಜನಗಳಿಗೆ ಕೆಟ್ಟದೆನಿಸುತ್ತದೆ. ಅದನ್ನು ರಾಜಕಾರಣದ ತಕ್ಕಡಿಯಲ್ಲಿ ತೂಗಲಾಗುತ್ತದೆ. ರಾಜಕೀಯದ ಆಟ ಮುಗಿದಿದೆಯೆಂದು ನಾನು ತಿಳಿದು ಕೊಂಡಿದ್ದೇನೆ. ಇಂದು ನಿಷ್ಪಕ್ಷಪಾತದಿಂದ ಅದರ ಮೀಮಾಂಸೆ –ವಿಮರ್ಶೆ ಎಂಬ ಪದವನ್ನು ನಾನು ಬಳಸುತ್ತಿಲ್ಲ, ಮೀಮಾಂಸೆ ಶಬ್ದವನ್ನು ಬಳಸುತ್ತಿದ್ದೇನೆ. ಇದು ಪ್ರತಿ ಪೀಳಿಗೆಯಲ್ಲೂ ಇರಬೇಕು. ಆಗ ಈ ದೇಶದಲ್ಲಿ ಯಾರೇ ರಾಜಪುರುಷ ಹುಟ್ಟಬಾರದು, ಇಂತಹ ಪಾಪಕಾರ್ಯ ಮಾಡುವ ಇಚ್ಛೆಯೂ ಅವನಿಗೆ ಇರಬಾರದು. ನಮಗೆ, ನಮ್ಮ ವರ್ಗಕ್ಕೆ ಸೇರಿದ ಜನರಿಗೆ, ಮತ್ತೆ ಮತ್ತೆ ಎಚ್ಚರಿಕೆ ವಹಿಸುವುದಕ್ಕೆ ಕೂಡ ತುರ್ತು ಪರಿಸ್ಥಿತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಅಗತ್ಯ. ಮಾಧ್ಯಮದ ಸಾಮರ್ಥ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಯಾವ ಮಾಧ್ಯಮದಿಂದ ಪ್ರಪಂಚ ಹೆದರುತ್ತಿತ್ತೆಂದು ಹೇಳುತ್ತಾರೋ ಅದೂ ಸರಿ. ಆ ಕಾಲವು ನೀವೇನು ಕೇಳುತ್ತೀರೋ, ಏನನ್ನು ನೋಡುತ್ತೀರೋ, ಅದು ಹೀಗಿಲ್ಲ ಬೇರೇನೋ ಇದೆ ಎಂದು ತೋರಿಸಿಕೊಟ್ಟಿದೆ. ಬಹಳ ಕಡಿಮೆ ಅಪರೂಪದ ಜನ ಇದ್ದರು, ಬಹಳ ಕಡಿಮೆ ಜನ. ಇವರು ತುರ್ತು ಪರಿಸ್ಥಿತಿಗೆ ಸವಾಲು ಹಾಕುವ ಮಾರ್ಗವನ್ನು ಆಯ್ದುಕೊಂಡಿದ್ದರು. ಅದರ ನಾಯಕತ್ವವನ್ನು ರಾಮನಾಥ ಗೋಯಂಕಾರವರು ವಹಿಸಿದ್ದರು. ಇಂಡಿಯನ್ ಎಕ್ಸ್ಪ್ರೆಸ್ ವಹಿಸಿಕೊಂಡಿತ್ತು ಮತ್ತು ಅವರು ನಿಶ್ಚಿಂತರಾಗಿ ವಹಿಸಿಕೊಂಡಿದ್ದರು. ಇತಿಹಾಸದ ಈ ಪುಟಗಳು ಲೋಕತಂತ್ರದ ರಕ್ಷಣೆಗೆ ಅವಶ್ಯವೆಂದು ನಾನು ತಿಳಿಯುತ್ತೇನೆ. ಲೋಕತಂತ್ರವನ್ನು ಎಲ್ಲಾ ಕಾಲದಲ್ಲೂ ಎಲ್ಲಾ ಯುಗದಲ್ಲೂ ಹರಿತವಾಗಿಸುವ ಅವಶ್ಯಕತೆ ಇದೆ. ಬಹುಶಃ ಕಳೆದ ಪೂರಾ ಶತಮಾನದಲ್ಲಿ ಮಾಧ್ಯಮಗಳಿಗೆ ಯಾವ ಸವಾಲುಗಳಿರಲಿಲ್ಲವೋ ಆ ಸವಾಲುಗಳೆಲ್ಲಾ ಇಂದು ಇವೆ ಎಂದು ನಾನು ತಿಳಿಯುತ್ತೇನೆ. ಬಹುಶಃ ಇಡೀ ಶತಮಾನದಲ್ಲಿ ಯಾವಾಗಲೂ ಇರಲಿಲ್ಲ, ಅದಕ್ಕೆ ಮೂಲಕಾರಣ ತಂತ್ರಜ್ಞಾನ. ತಂತ್ರಜ್ಞಾನವು ಬಹಳ ದೊಡ್ಡ ಸವಾಲನ್ನು ವಿಶೇಷವಾಗಿ ಮಾಧ್ಯಮದವರಿಗೆ ಹುಟ್ಟು ಹಾಕಿದೆ, ಮೊದಲು ಸಮಾಚಾರವು 24 ಗಂಟೆಗಳ ನಂತರ ಬಂದರೂ ಸುದ್ದಿ ಸುದ್ದಿಯೆಂದೇ ಅನಿಸುತ್ತಿತ್ತು. ಈಗ 24 ಸೆಕೆಂಡುಗಳು ಕಳೆದರೂ ಹೌದಾ ಹೌದಾ ನಿನಗಿನ್ನೂ ಗೊತ್ತಿಲ್ಲವಾ? ಅರೆ, ಏನಾಗಿದೆಯೆಂದರೆ ಅವರ ಕೈನಲ್ಲಿ ಫೋನ್, ಮೊಬೈಲ್ ಫೋನ್ ಇದೆ. ವಿಶ್ವದ ಯಾವುದೇ ಮೂಲೆಯ ಇಲ್ಲಿಯದು ಈ ಸುದ್ದಿ ಇದೆ ಎಂದು ತಿಳಿಯುತ್ತದೆ. ಟಿವಿ ಮಾಧ್ಯಮ ಬಂದಾಗ ಸರ್ಕಾರಗಳು ಚಿಂತೆಗೀಡಾಗಿದ್ದವು. ಒಂದು ಕಡೆ ಟಿವಿಯಲ್ಲಿ ಸುದ್ದಿ ಬಂದರೆ ಸರ್ಕಾರಕ್ಕೆ ಪ್ರತಿಕ್ರಿಯಾ ಸಮಯ ಬೇಕಾಗುತ್ತದೆ. ಸಾಂಕ್ರಾಮಿಕ ರೋಗ ಬಂತು ಎಂದಿಟ್ಟುಕೊಳ್ಳಿ ಆಗ ಜನರನ್ನು ಎಚ್ಚರಿಸಬೇಕಾಗುತ್ತದೆ. ಎಲ್ಲಾದರೂ ಯಾವುದಾದರೂ ದಂಗೆಯಾದರೆ ಅಲ್ಲಿಗೆ ಪೊಲೀಸರನ್ನು ಕಳುಹಿಸಬೇಕಾಗುತ್ತದೆ. ಮೀಡಿಯಾ ಅಷ್ಟು ಕಾಲವನ್ನು ಕೊಡುವುದಿಲ್ಲ. ಅವರಿಗೆ ಇರುವುದು ಒಂದೇ ಸುದ್ದಿ-ಸುದ್ದಿ, ಬ್ರೇಕಿಂಗ್ ನ್ಯೂಸ್, ಏನು ಗೊತ್ತಾ, ಗೊತ್ತಿಲ್ಲವಾ, ಆದರೆ ಅದನ್ನು ಎದುರಿಸಲು ಸರ್ಕಾರದ ಸಾಮರ್ಥ್ಯ ವನ್ನು ಬಳಸುವ ಸೋಶಿಯಲ್ ಮೀಡಿಯಾ ಬಂತು. ಇದಕ್ಕಂತೂ ಸೆಕೆಂಡುಗಳ ಭಾಗವೇ ಸಾಕು. ಮೊದಲು ಪತ್ರಿಕೋದ್ಯಮದಲ್ಲಿ ಯಾರಾದರೂ ವಿದ್ಯಾವಂತ ಜನ, ಯಾವುದಾದರೂ ವ್ಯವಸ್ಥೆಯಲ್ಲಿ ಸೇರಿಕೊಂಡ ಜನರು ಇರುತ್ತಿದ್ದರು. ಈಗ ಅಂಥದ್ದೇನೂ ಇಲ್ಲ ಸಾಹೇಬರೆ, ಹಳ್ಳಿಯ ವ್ಯಕ್ತಿ ಕೂಡ ತನಗೆ ಸರಿ ಎನಿಸಿದ್ದರ ಫೋಟೋ ತೆಗೆಯುತ್ತಾನೆ, ಕೊಡುತ್ತಾನೆ. ಇದಕ್ಕೆ ಕಾರಣ ಜನರ ಬಳಿ ಸುದ್ದಿಗಳು ಬಹಳ ಇರುತ್ತವೆ. ಹೀಗಿರುವಾಗ ಇಲ್ಲಿ ವಿಶ್ವಾಸಾರ್ಹತೆ ಬಹಳ ದೊಡ್ಡ ವಿಷಯವಾಗಿರುತ್ತದೆ. ಅಭ್ಯಾಸ ಬಲದಿಂದ ಜನ ದಿನಾ ಬೆಳಿಗ್ಗೆ ಪತ್ರಿಕೆಯನ್ನು ಎತ್ತಿಕೊಳ್ಳುತ್ತಾರೆ. ಈ ಅಭ್ಯಾಸ ಚಹಾ ಕುಡಿಯುವ ಅಭ್ಯಾಸ ಇದೆಯಲ್ಲ ಆ ರೀತಿಯ ಅಭ್ಯಾಸ. ಅವರು ಎಷ್ಟೇ ಟಿವಿಯನ್ನು ನೋಡಲಿ ಪತ್ರಿಕೆಯನ್ನು ಒಂದು ಬಾರಿಯಂತೂ ಎತ್ತಿಕೊಳ್ಳುತ್ತಾರೆ. ಈಗ ಅವರು ಪತ್ರಿಕೆಯನ್ನು ಓದುವುದಿಲ್ಲ. ನೆನ್ನೆ ಮೊಬೈಲ್ ನಲ್ಲಿ ನೋಡಿದ್ದೇ ಸುದ್ದಿ ಇದೆಯಾ ಅಥವಾ ಬೇರೆ ಇದೆಯಾ ಅಂತ ಸತ್ಯಾಸತ್ಯತೆ ಪರೀಕ್ಷಿಸುತ್ತಾರೆ. ನಂತರ ಅವರು ಲೆಕ್ಕಹಾಕಿ ಒಳ್ಳೆಯದಾಯ್ತಣ್ಣ ಇವತ್ತಿನದು ಎರಡು ರೂಪಾಯಿ ಹೋಯಿತು ಹೋಗಲಿ ಬಿಡು ಅಂತ ಅಂದುಕೊಳ್ಳುತ್ತಾರೆ. ಆದ್ದರಿಂದ ಸವಾಲು ಬಹಳ ದೊಡ್ಡದು ಎಂದು ನಾನು ತಿಳಿದುಕೊಂಡಿದ್ದೇನೆ ಮತ್ತು ಈ ಸವಾಲನ್ನು ನಾವು ಹೇಗೆ ಎದುರಿಸುತ್ತೇವೆ? ಆದರೆ ಇದರ ಜೊತೆಗೆ ದೇಶದಲ್ಲಿ ಎಂಥೆಂತಹ ಪ್ರತಿಭೆಗಳು ಇವೆ, ಎಂತೆಂತಹ ಸಂವೇದನೆಗಳು ತುಂಬಿದ ಮಾನವ ಸಮೂಹ ಇದೆ ಎಂಬುದು ನಮ್ಮ ಅನುಭವಕ್ಕೆ ಬರುತ್ತದೆ.
ನಾನು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಆಗಾಗ ನಾಯಕ ಜನರ ಮಾತುಗಳು ಪತ್ರಿಕೆಗಳಲ್ಲಿ ಮುದ್ರಿತವಾಗುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ಯಾರದಾದರೂ ವಿಷಯ ವರ್ಷದಲ್ಲಿ ಒಂದು ಸಲ, ಇನ್ಯಾರದ್ದೊ ಎರಡು ಸಲ, ಮತ್ಯಾರದ್ದೊ ಹತ್ತು ಸಲ ಹೀಗೆ. ಈ ವಿಐಪಿ ಸಂಸ್ಕೃತಿಯಿಂದಾಗಿ ಇಷ್ಟು ಗಾಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅತಿರಂಜಿತಗೊಳಿಸುವುದು ಬಹಳ ಆಸಕ್ತಿಯ ವಿಷಯವಾಗಿರುತ್ತದೆ.
ಯಾವುದೇ ಸುದ್ದಿ ಇಲ್ಲದಿದ್ದರೆ ತಯಾರಾಗಿರುವ ಸುದ್ದಿ ಸಿಕ್ಕೇ ಸಿಗುತ್ತದೆ. ನಾವು ಕೂಡ ಓದುತ್ತಿದ್ದೆವು, ನಾನು ಕೂಡ ನಮ್ಮ ಅಧಿಕಾರಿಗಳಿಗೆ ಹೇಳುತ್ತಿದ್ದೆ. ಏನಪ್ಪಾ ಇದು, ಇದ್ಯಾವ ವಿಷಯ ತೆಗೆದುಕೊಂಡು ಹೋಗ್ತೀಯಾ . ಇಲ್ಲ ಸಾಹೇಬರೆ, ಇದು ರಾಜತಾಂತ್ರಿಕ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. ನಾವು ಇದರ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದರು. ನಮಗೂ ಅವರನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಒಂದು ಸಲ ನಾನು ಅಹಮದಾಬಾದ್ ನಿಂದ ನನ್ನ ಮೈಗಾವಲಿನವರ ಜೊತೆ ಸಾಗುತ್ತಿದ್ದೆ. ಸಂಜೆಯ ಸಮಯ ಯಾರೋ ಯುವಕ ತನ್ನ ಮೊಬೈಲ್ನಲ್ಲಿ ಕಾರ್ಡಿಂಗ್ ಶುರುಮಾಡಿದ. ಗಾಡಿಗಳು ಸಾಗುತ್ತಿದ್ದಂತೆ ಒಂದು, ಎರಡು, ಮೂರು ಎಂದು ಎಣಿಸುತ್ತಾ ಇದ್ದ ಗಾಡಿಗಳು ಹೋಗುತ್ತಾ ಇದ್ದವು. ಅವನ್ನು ಅಪ್ಲೋಡ್ ಮಾಡಿದ . ನಾನು ಸ್ವತಹ ಸಾಮಾಜಿಕ ಮೀಡಿಯಾದಲ್ಲಿ ಬಹಳ ಸಕ್ರಿಯನಾಗಿದ್ದೆ. ಎರಡು ಮೂರು ಗಂಟೆಗಳಲ್ಲಿ ನನ್ನ ಬಳಿ ಅವುಗಳು ಬಂದವು. ಪತ್ರಿಕೆಗಳಲ್ಲಿ ವಿಮರ್ಶೆಗಳು ಬಂದಾಗ ಎಷ್ಟು ಪ್ರಭಾವ ಆಗುತ್ತಿತ್ತೋ ಅದಕ್ಕೂ ಜಾಸ್ತಿ ಆಯಿತು. ಒಬ್ಬ ಯುವಕ ಅಪ್ಲೋಡ್ ಮಾಡಿದನಲ್ಲ ಅದರ ಪ್ರಭಾವ ಆಗಿತ್ತು. ಇದಕ್ಕೆ ಎಷ್ಟು ಶಕ್ತಿ ಬಂದಿದೆ ಎಂದು ತಿಳಿಸುವುದಕ್ಕಾಗಿ ನಾನು ನನ್ನ ವಿಷಯವನ್ನು ಹೇಳಿದೆ. ಜನರ ಸಬಲೀಕರಣ ಒಳ್ಳೆಯದು. ಇಂತಹ ಸಮಯದಲ್ಲಿ ವಿಶ್ವಾಸಾರ್ಹತೆ ಸ್ಥಿರವಾಗಿಟ್ಟುಕೊಳ್ಳುವುದು ಕಾಲದ ದೊಡ್ಡ ಬೇಡಿಕೆಯಾಗಿದೆ ಎಂದು ನಾನು ತಿಳಿಯುತ್ತೇನೆ.
ಎರಡು ವಿಷಯಗಳು ಹೀಗಿವೆ. ಇದು ಇಂತಹ ಶ್ರೇಣಿಯದಾಗಿದೆ ಮತ್ತು ಈ ಕ್ಷೇತ್ರ ಹೀಗಿದೆ .ಎಲ್ಲರಿಗೂ ಮಾತನಾಡುವ ಹಕ್ಕಿದೆ, ಯಾರಿಗೂ ಮಾತನಾಡುವ ಹಕ್ಕಿಲ್ಲ. ಅವರೇನಾದರೂ ಮಾತನಾಡಿದರೆ ಏನಾಗುತ್ತದೆ? ಇದು ನನಗೂ ಗೊತ್ತು, ನಿಮಗೂ ಬಹಳ ಚೆನ್ನಾಗಿ ಗೊತ್ತು. ನಾನು ಮೀಡಿಯಾಗೆ ಜೀವನ ಪೂರ್ತಿ ಕೃತಜ್ಞನಾಗಿರುತ್ತೇನೆ. ಇಲ್ಲದಿದ್ದರೆ ನನ್ನನ್ನು ಯಾರು ತಾನೆ ತಿಳಿದಿದ್ದರು. ಸ್ವಾತಂತ್ರ್ಯದ ನಂತರ ಯಾರಾದರೂ ರಾಜಕೀಯ ನಾಯಕನಿಗೆ ಇಂತಹ ಸೌಭಾಗ್ಯ ದೊರೆತಿದೆಯೆಂದರೆ ಅದು ನಾನೊಬ್ಬನೇ. ಆದ್ದರಿಂದ ನನ್ನ ಮನದಲ್ಲಿ ಎರಡು ವಿಚಾರಗಳು ಸದಾ ಇರುತ್ತವೆ. ಯಾರಾದರೂ ನೋಡಿ’, ಪ್ರಪಂಚ ಬದಲಾಗಿದೆ ಕೇವಲ ಆರ್ಥಿಕ ಜಾಗತೀಕರಣ ಆಗಿದೆ ಅಂತಲ್ಲ. ಪೂರಾ ಜೀವನ ಜಾಗತಿಕ ಆಗಿದೆ. ಇಡೀ ವಿಶ್ವ ಅಂತರ ಸಂಪರ್ಕ ಹೊಂದಿದೆ ಪರಸ್ಪರ ಅವಲಂಬಿತವಾಗಿದೆ. ಇಡೀ ವಿಶ್ವದ ಮೀಡಿಯಾ ಪ್ರಪಂಚವಿದೆಯಲ್ಲ ಅಲ್ಲಿ ಭಾರತೀಯ ಮೂಲಗಳಿಗೆ ಸ್ಥಾನ ಇಲ್ಲದಿರುವುದಕ್ಕೆ ಕಾರಣವೇನು? ಎಂದು ಯೋಚಿಸಲಿ ಎಂದು ನಾನು ಇಚ್ಚಿಸುತ್ತೇನೆ.
ಈಗಲೂ ಕೆಲವರು ಸಿಗುತ್ತಾರೆ. ಅರೆ ನಾನು ಬಿಬಿಸಿಯಲ್ಲಿ ಕೇಳಿದೆ ಅನ್ನುವವರು. ಈಗ ಅಲ ಜಜೀರಾ ತನಕ ತಲುಪಿದೆ ವಿಷಯ. ಸಿಎನ್ಏನ್ , ಬಿಬಿಸಿ, ಅಲ ಜಜೀರಾ ಈ ಕ್ಷೇತ್ರದಲ್ಲಿರುವ ಜನರು ಈ ಸವಾಲನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದ ಮೂಲಗಳು ವಿಶ್ವ ಸ್ತರದ್ದಾಗಿದೆ. ನಾವು ಈ ಪ್ರಪಂಚದಲ್ಲಿ ಪಾತ್ರಧಾರಿಗಳಾಗಿದ್ದರೆ ನಮ್ಮ ಪ್ರತಿ ದೃಷ್ಟಿಕೋನದ ಪ್ರಭಾವವು ವಿಶ್ವದಲ್ಲಿ ಉಂಟಾಗಬೇಕು, ಯಾರಿಗಾದರೂ ಕೆಟ್ಟದ್ದೆನಿಸಬಹದು, ಅನಿಸದೆಯೂ ಇರಬಹುದು. ನನಗೆ ಅನಿಸವುದಿಲ್ಲ, ನನಗನ್ನಿಸುತ್ತದೆ ನನ್ನ ದೇಶದ ಪ್ರಭಾವ ಆಗಲೇಬೇಕು. ನಮ್ಮೊಳಗೆ ಬಹಳ ಶಕ್ತಿ ಇದೆ, ಈಗ ತಾನೆ ಪರಿಸರಕ್ಕೆ ಪ್ರಶಸ್ತಿ ಸಿಕ್ಕಾಗ ನಾನು ವಿವೇಕ್ ರನ್ನು ಕೇಳಿದೆ, ವಿವೇಕ್ ಇದು ಮಾಲಿನ್ಯದ ವರದಿಯೋ, ಇಲ್ಲವೇ ಪರಿಸರದ ಮೇಲೋ ಎಂದು ಕೇಳಿದೆ. ಹೀಗೆ ನಾನು ತಮಾಷೆಗಾಗಿ ಕೇಳುತ್ತಿದ್ದೆ.
ಇಂದು ಇಡೀ ವಿಶ್ವ ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರದ ಚರ್ಚೆ ಮಾಡುತ್ತಿದೆ. ಪ್ರಕೃತಿಯ ಜೊತೆ ಜೀವಿಸುವುದು ಹೇಗೆ, ಪ್ರಕೃತಿಯ ಮಹತ್ವಗಳೇನು, ಪ್ರಕೃತಿಯ ಸಾಮರ್ಥ್ಯಗಳನ್ನು ಸ್ವೀಕರಿಸುವುದು ಇವೆಲ್ಲಾ ನಾವು ಭಾರತೀಯರ ನಾಡಿಗಳಲ್ಲೇ ಇವೆ. ನಮ್ಮ ಬಳಿ ಈ ಮಟ್ಟದ ಯಾವುದಾದರೂ ಮೀಡಿಯಾ ಇದ್ದಿದ್ದರೆ ‘ನಾಶಕ್ಕೆ ಕಾರಣ ನೀವು. ರಕ್ಷಿಸುವ ಸಲುವಾಗಿ ನಾವು ನಮ್ಮನ್ನು ನಾವೇ ನಾಶ ಮಾಡಿಕೊಂಡಿದ್ದೇವೆ’, ಎಂಬುದನ್ನು ಪ್ರಪಂಚಕ್ಕೆ ಅರ್ಥ ಮಾಡಿಸುತ್ತಿದ್ದೆವು. ನಾವು ನಮಗೆ ನಾವೇ ನಷ್ಟವನ್ನು ಮಾಡಿಕೊಂಡಿದ್ದೇವೆ. ಮಹಾತ್ಮಾ ಗಾಂಧಿಯವರು ಸಬರಮತಿಯ ದಡದಲ್ಲಿ ಇರುತ್ತಿದ್ದ ಸಮಯ. 1930ರ ದಶಕದಲ್ಲಿ ನದಿಯು ತುಂಬಿ ಹರಿಯುತ್ತಿತ್ತು. ಆದರೆ ಗಾಂಧೀಜಿಯವರಿಗೆ ನೀರಿನ ಲೋಟವನ್ನು ಕೊಟ್ಟಾಗ ಅವರು ತಮ್ಮ ಅರ್ಧ ಲೋಟ ತೆಗೆದುಕೊಂಡು ಬಾ ಅರ್ಧವನ್ನು ಆ ಮಡಕೆಗೆ ವಾಪಸು ಹಾಕು, ನೀರನ್ನು ಹಾಳು ಮಾಡಬೇಡ ಎನ್ನುತ್ತಿದ್ದರು. ತುಂಬಿ ಹರಿಯುತ್ತಿರುವ ನದಿಯ ದಡದ ಮೇಲೆ ಕುಳಿತಿದ್ದರು. ಪ್ರಾಕೃತಿಕ ಸಾಮಗ್ರಿಗಳ ರಕ್ಷಣೆ ನಮ್ಮ ನಾಡಿಗಳಲ್ಲಿ ಇದೆ. ಬಾಲ್ಯದಲ್ಲಿ ಮಕ್ಕಳಿಗೆ ಮಗು ನೀನು ಹಾಸಿಗೆಯಿಂದ ಕಾಲುಗಳನ್ನು ಕೆಳಗೆ ಇಟ್ಟಾಗ ಭೂಮಿಯ ಮೇಲೆ ಕಾಲು ಇಡುತ್ತಿರುವುದಕ್ಕಾಗಿ ಆ ಭೂಮಾತೆಯ ಕ್ಷಮೆಯನ್ನು ಕೇಳು ಎಂದು ಕಲಿಸುವಂತಹ ದೇಶ ನಮ್ಮದು. ತಾಯಿ ಎಷ್ಟೆ ಓದು ಬರಹ ತಿಳಿದವಳಾಗಿದ್ದರೂ ಮಕ್ಕಳಿಗೆ ಈ ಸೂರ್ಯ ನಿನ್ನ ತಾತ, ಈ ಚಂದ್ರ ನಿನ್ನ ಮಾಮಾ ಇಡೀ ಬ್ರಹ್ಮಾಂಡವು ನಿನ್ನ ಪರಿವಾರ ಎಂದು ಹೇಳುತ್ತಿದ್ದಳು. ಇದೆಲ್ಲವೂ ನಮ್ಮ ನಾಡಿಗಳಲ್ಲಿ ತುಂಬಿಸಲಾಗಿದೆ. ವಿಶ್ವವನ್ನು ಜಾಗತಿಕ ತಾಪಮಾನ ಏರಿಕೆಯಿಂದ ರಕ್ಷಿಸಲು ನಮ್ಮ ಬಳಿ ಆ ಪತ್ರಿಕೋದ್ಯಮದ ಶಕ್ತಿ, ಯಾವುದಾದರೂ ಜಾಗತಿಕ ಸಂಸ್ಥೆ ಇದ್ದಿದ್ದರೆ ಪ್ರಪಂಚಕ್ಕೆ ಅಯ್ಯಾ ರಸ್ತೆ ಇಲ್ಲಿದೆ ಎಂದು ಹೇಳಬಹುದು ಆದರೆ ಇದು ಬಹಳ ಕಷ್ಟ. ಈ ದಿಸೆಯಲ್ಲಿ ನಾವು ಏನಾದರೂ ಮಾಡಲು ಸಾಧ್ಯವೇ?
ಬಹುಶಃ ಯಾರಾದರೂ ಮಾರ್ಗ ಕಂಡು ಹಿಡೀತಾರೆ ಎಂದು ನಾನು ಒಪ್ಪುತ್ತೇನೆ. ಆದರೆ ಇದು ಸರ್ಕಾರದ್ದಾಗಿರಬಾರದು. ಖಡಾ ಖಂಡಿತವಾಗಿ ಸರ್ಕಾರದ್ದಾಗಿರಬಾರದು ವಿನೋಬಾಜಿ – ರವರು ಹೇಳುತ್ತಿದ್ದರು. ಆ ಮಂತ್ರ ನನಗೆ ಯಾವಾಗಲೂ ಚೆನ್ನಾಗನಿಸುತ್ತಿತ್ತು. ವಿನೋಬ ಜೀರವರು ಶಬ್ದಗಳ ಆಟ ಆಡಿಸುವುದರಲ್ಲಿ ಬಹಳ ನಿಷ್ಣಾತರು. ನನಗೆ ವಿನೋಬಾಜಿ ಅವರ ಮಾತುಗಳನ್ನು ಕೇಳುವುದು, ಓದುವುದು ಬಹಳ ಚೆನ್ನಾಗೆನಿಸುತ್ತಿತ್ತು. ಅವರು ಒಂದು ಕಡೆ ಬರೆದಿದ್ದರು, ಅ-ಸರ್ಕಾರಿ-ಅಸರ್ಕಾರಿ ಶಬ್ದವು ಅದೇ, ಅ-ಸರ್ಕಾರಿ–ಅಸರ್ಕಾರಿ(ಪರಿಣಾಮಕಾರಿ) ಪ್ರಪಂಚದಲ್ಲಿ ನಾವೂ ಆ ಮಟ್ಟದ ಮೀಡಿಯಾ ಪ್ರಪಂಚದಲ್ಲಿ ಜಾಗ ಮಾಡಿಕೊಳ್ಳಬೇಕೆಂಬ ಒಂದು ಕನಸು ನಮ್ಮದೂ ಆಗಬೇಕು. ಮೀಡಿಯಾ ಪ್ರಪಂಚದ ಜನ ಸಂಶೋಧನೆ ಮಾಡುತ್ತಿರಬಹುದು. ಅಂತಹವರಿಗೆ ಪ್ರಪಂಚದ ಎಲ್ಲಾ ಅಗ್ರ ರಾಷ್ಟ್ರಗಳು ಈಗ ಒಂದೇ ಕೆಲಸದಲ್ಲಿ ತೊಡಗಿಕೊಂಡಿವೆ ಎಂಬುದು ಬಹುಶಃ ತಿಳಿದಿರಬಹುದು. ಅದು ಆಯವ್ಯಯ ಪಟ್ಟಿ, ಅರ್ಥ ವ್ಯವಸ್ಥೆ ಮಾಡುತ್ತಾ ಈ ಮಟ್ಟದ ಸಂವಹನಾ ಏಜೆನ್ಸಿಗಳನ್ನು ಹೇಗೆ ತಯಾರು ಮಾಡುವುದು ಎಂಬುದು ಸರ್ಕಾರಗಳೇ ಸರ್ಕಾರಗಳು ಇದರಲ್ಲಿ ಮಗ್ನವಾಗಿವೆ. ಪ್ರತಿಯೊಬ್ಬರಿಗೂ ಇದು ಜಾಗತಿಕ ಅರ್ಥ ವ್ಯವಸ್ಥೆ ಮಾತ್ರವಲ್ಲ ಇಡೀ ವಿಶ್ವವು ಈ ರೀತಿಯಾಗಿ ರೂಪುಗೊಳ್ಳುತ್ತಿದೆ ಎಂದು ಅನಿಸುತ್ತದೆ. ಅದರಲ್ಲಿ ನಾವು ಕಾಣಿಸಿಕೊಳ್ಳುವುದು ಬಹಳ ಅಗತ್ಯವಿದೆ. ಇದೊಂದು ಅವಕಾಶವೂ ಹೌದು, ಸವಾಲೂ ಹೌದು ಈ ಬಗ್ಗೆ ನಾವು ಯೋಚನೆ ಮಾಡಬೇಕು.
ಇತರ ಸರ್ಕಾರಗಳ ವಿಮರ್ಶೆ ಎಷ್ಟೇ ಆಗಲಿ ಅಷ್ಟೂ ಒಳ್ಳೆಯದೆ. ನನಗೆ ಇದರಲ್ಲಿ ಯಾವ ಸಮಸ್ಯೆಯೂ ಇಲ್ಲ ಹಾಗಾದರೆ ವರದಿ ಮಾಡುವುದರಲ್ಲಿ ತಪ್ಪು ಮಾಡಬೇಡಿ. ಭಾರತವು ವೈವಿಧ್ಯತೆಯಿಂದ ಕೂಡಿದ ದೇಶ. ದೇಶದ ಒಗ್ಗಟ್ಟು ನಿಮಗೆ ಒಂದು ಸುದ್ದಿ. ಅದು ಅಚ್ಚಾದ ತಕ್ಷಣವೇ ನೀವು ಇನ್ನೊಂದು ಸುದ್ದಿಯನ್ನು ಹುಡುಕುವುದರಲ್ಲಿ ತೊಡಗಿಕೊಳ್ಳುತ್ತೀರಿ. ಆದರೆ ಯಾವಾಗಾದರೂ ಅದು ಆಳವಾದ ಗಾಯವನ್ನು ಉಂಟು ಮಾಡುತ್ತದೆ. ಇದರರ್ಥ ಇದು ಪಾಪ, ಜನರು ಇದನ್ನು ಮಾಡಲ್ಲ ಅಂತ ಅಲ್ಲ ನಿಮ್ಮೆಲ್ಲರಿಗಿಂತ ಹೆಚ್ಚು ನಾವು ಮಾಡುತ್ತಿರಬಹುದು, ನಮ್ಮ ವರ್ಗದ ಜನರು. ಆದರೆ ದೇಶದ ಒಗ್ಗಟ್ಟನ್ನು ವೃದ್ಧಿಸುವ ವಿಷಯಗಳಿಗೆ ಹೇಗೆ ಬಲ ನೀಡಬೇಕು? ಎಂಬುದೇ ಚಿಂತೆಯ ವಿಷಯವಾಗಿದೆ. ನಾನು ಉದಾಹರಣೆ ಕೊಡುತ್ತೇನೆ, ನಾನು ತಪ್ಪಾಗಿದ್ದರೆ ಇಲ್ಲಿ ಬಹಳಷ್ಟು ಜನ ಕುಳಿತಿದ್ದಾರೆ, ಈಗಲ್ಲದಿದ್ದರೂ ತಿಂಗಳ ಬಳಿಕ ಮಾತನಾಡುತ್ತಾರೆ. ಮೊದಲು ಯಾವುದಾದರೂ ಅಪಘಾತವಾದರೆ ಇಂತಹ ಊರಿನಲ್ಲಿ ಅಪಘಾತವಾಯಿತು ಒಂದು ಟ್ರಕ್ಕು ಮತ್ತು ಸೈಕಲ್ಲಿನ ನಡುವೆ ಸೈಕಲ್ ಸವಾರ ಗಾಯಗೊಂಡ, ಸತ್ತು ಹೋದ ಎಂದು ಸುದ್ದಿ ಬರುತ್ತಿತ್ತು. ನಿಧಾನವಾಗಿ ಬದಲಾವಣೆ ಬಂತು, ಬದಲಾವಣೆ ಏನೆಂದರೆ ಇಂತಹ ಊರಿನಲ್ಲಿ ಈ ದಿನ ಅಜಾಗರೂಕನಾಗಿ ವಾಹನ ಚಲಾಯಿಸಿದ್ದರಿಂದ ಮದ್ಯಸೇವನೆ ಮಾಡಿದ್ದ ಚಾಲಕ ನಿರಪರಾಧಿ ವ್ಯಕ್ತಿಯನ್ನು ತುಳಿದು ಹಾಕಿದ. ನಿಧಾನವಾಗಿ ವರದಿ ಬದಲಾಯಿತು. ಬಿಎಂಡಬ್ಲ್ಯೂ ಕಾರು ಒಬ್ಬ ದಲಿತನನ್ನು ತುಳಿದು ಹಾಕಿತು. ಸ್ವಾಮಿ ನನ್ನನ್ನು ಕ್ಷಮಿಸಿ, ಆ ಬಿಎಂಡಬ್ಲ್ಯೂ ಕಾರಿಗೆ ಆ ವ್ಯಕ್ತಿ ದಲಿತನೆಂದು ತಿಳಿದಿರಲಿಲ್ಲ. ಆದರೆ ನಾವು ಬೆಂಕಿಯನ್ನು ಹಚ್ಚುತ್ತೇವೆ., ಅಪಘಾತದ ವರದಿ ಆಗಬೇಕು, ಆಗಬೇಕಾ? ಆಗಬೇಕು. ಶೀರ್ಷಿಕೆ ಮಾಡುವಂತದ್ದಾಗಿದ್ದರೆ ಶೀರ್ಷಿಕೆ ಕೊಡಿ.
ಬಜೆಟ್ ಬರುತ್ತದೆ. ಬಜೆಟ್ನನ ವರದಿ ಏನಾಗಿರಬೇಕು ಅಣ್ಣಾ, ಸರ್ಕಾರದ ಬಜೆಟ್ ಬಂದಿದೆ. ಕೊರತೆಯಿದೆ ಅಥವಾ ಇಲ್ಲವೆ, ಎರಡು ಸಾವಿರ ಕೋಟಿಯ ತೆರಿಗೆ ಹಾಕಿದ್ದಾರ, ಸಾವಿರ ಕೋಟಿಯದು ಹಾಕಿದ್ದಾರ. ಇದು ಸುದ್ದಿ, ಆದರೆ ನಮಗೆ ಈ ಸುದ್ದಿ ಓದಲು ಸಿಗಲಿಲ್ಲ. ಸುದ್ದಿ ಏನು ಸಿಗುತ್ತದೆಯೆಂದರೆ ಮೋದಿಯವರ ಸರ್ಕಾರದ ಸೊಂಟ ಮುರಿಯುವ ಬಜೆಟ್! ಉತ್ತರಪ್ರದೇಶದ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡ ಮೋದಿಯವರ ಸರ್ಕಾರದ ಬಜೆಟ್. ಇರಲಿ, ಈ ವಿಷಯ ನಿಮಗೂ ಗೊತ್ತಾಗುತ್ತದೆ, ನನಗೂ ಗೊತ್ತಾಗುತ್ತದೆ. ಇದು ಯಾವುದೇ ವಿಮರ್ಶೆಗಾಗಿ ಇಲ್ಲ. ನಮಗೆ ಬಹಳ ಅವಶ್ಯಕವಾದದ್ದು.
ಇಷ್ಟು ದೊಡ್ಡ ದೇಶವನ್ನು ಸರ್ಕಾರಗಳು ನಡೆಸುತ್ತಿಲ್ಲ. ದೇಶವನ್ನು ಒಂದಾಗಿ ಜೋಡಿಸಿಡುವಂತಹ ಎಷ್ಟೋ ಸಂಸ್ಥೆಗಳು, ದೇಶವನ್ನು ಮುಂದಕ್ಕೆ ಕರೆದೊಯ್ಯುವಂತಹ ಎಷ್ಟೋ ಸಂಸ್ಥೆಗಳು, ನಾವೆಲ್ಲರೂ ಸೇರಿಕೊಂಡು ಮಾಡೋಣ. ನಮ್ಮ ದೇಶ ಹಿಂದುಳಿಯಲು ಯಾವುದೇ ಕಾರಣವಿಲ್ಲ, ಪ್ರಪಂಚಕ್ಕೆ ನಾವು ಏನಾದರೂ ಕೊಡಲು ಸಾಧ್ಯವಿಲ್ಲ ಅನ್ನುವುದಕ್ಕೆ ಯಾವುದೇ ಕಾರಣವಿಲ್ಲ, ಪತ್ರಿಕೋದ್ಯಮವನ್ನು ತಮ್ಮ ಧರ್ಮವೆಂದು ತಿಳಿದುಕೊಂಡು ಉತ್ತಮದಿಂದ ಉತ್ತಮ ರೀತಿಯಲ್ಲಿ ತಮ್ಮ ಜೀವನವನ್ನು ಆರಂಭಿಸಿರುವ ನವ ಯುವ ಜನರಿಗೆ ನನ್ನ ಅನೇಕಾನೇಕ ಶುಭಾಶಯಗಳು, ಅವರಿಂದ ಪ್ರೇರಿತರಾಗಿ ಹೊಸ ಪೀಳಿಗೆಯೂ ಸಿದ್ಧವಾಗುತ್ತದೆ. ಅವರಿಗೂ ನನ್ನ ಶುಭಾಶಯಗಳು, ವಿವೇಕ್ ರವರು ನನ್ನನ್ನು ಕರೆದರು. ಈ ಕುಟುಂಬದವರ ಜೊತೆ ನನ್ನ ಸಂಬಂಧ ಬಹಳ ಹಳೆಯದು. ಇಂದು ಈ ಸಂದರ್ಭದಲ್ಲಿ ಬರುವ ಸೌಭಾಗ್ಯ ಸಿಕ್ಕಿತು, ನಾನು ಕುಟುಂಬದವರಿಗೆ ಬಹಳ ಬಹಳ ಕೃತಜ್ಞನಾಗಿದ್ದೇನೆ. ಧನ್ಯವಾದಗಳು.
***
Ramnath ji was always committed to his ideals: PM @narendramodi #PMatRNGAwards
— PMO India (@PMOIndia) 2 November 2016
During the freedom struggle, the newspapers became a very strong medium of expression: PM @narendramodi #PMatRNGAwards
— PMO India (@PMOIndia) 2 November 2016
The colonial rulers were scared of those who wrote and expressed themselves through the papers: PM @narendramodi
— PMO India (@PMOIndia) 2 November 2016
There were few in the media who challenged the Emergency and this was led by Ramnath Ji and the @IndianExpress: PM @narendramodi
— PMO India (@PMOIndia) 2 November 2016
Technology poses a challenge to the media. News that could earlier be disseminated in 24 hours now happens in 24 seconds: PM #PMatRNGAwards
— PMO India (@PMOIndia) 2 November 2016
I congratulate all those who have been awarded today: PM @narendramodi #PMatRNGAwards
— PMO India (@PMOIndia) 2 November 2016
Gave the Ramnath Goenka Excellence in Journalism Awards. Congratulations to the award winners.
— Narendra Modi (@narendramodi) 2 November 2016
Here is my speech at the Ramnath Goenka Excellence in Journalism Awards. https://t.co/2hk9CJzcer
— Narendra Modi (@narendramodi) 2 November 2016