Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವ ದೆಹಲಿಯ ಏಮ್ಸ್ ಕ್ಯಾಂಪಾಸ್ ನ ಆಯುರ್ ವಿಜ್ಞಾನ ನಗರ ಮತ್ತು ಪಶ್ಚಿಮ ಅನ್ಸಾರಿಯ ವಸತಿ ಕಾಲೋನಿಗಳ ಮರು ಅಭಿವೃದ್ಧಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನವ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಕ್ಯಾಂಪಾಸ್ ನ ಆಯುರ್ ವಿಜ್ಞಾನ ನಗರ ಮತ್ತು ಪಶ್ಚಿಮ ಅನ್ಸಾರಿಯ ವಸತಿ ಕಾಲೋನಿಗಳ ಮರು ಅಭಿವೃದ್ಧಿಗೆ ತನ್ನ ಅನುಮೋದನೆ ನೀಡಿದೆ. ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ ನಿಯಮಿತ (ಎನ್.ಬಿ.ಸಿ.ಸಿ.) ಹಾಲಿ ಇರುವ ಸುಮಾರು 0.87 ಲಕ್ಷ ಚದರ ಮೀಟರ್ ನಿರ್ಮಾಣ ಪ್ರದೇಶವುಳ್ಳ 1,444 I ರಿಂದ IVರ ವಿಧದ ವಾಸದ ಮನೆಗಳ ಘಟಕಗಳನ್ನು ಸುಮಾರು 4.02 ಲಕ್ಷ ಚದರ ಮೀಟರ್ ನಿರ್ಮಾಣ ಪ್ರದೇಶ (ಬಿ.ಯು.ಎ.)ಯ 3,928 II ರಿಂದ VI ವಿಧದವಾಸದ ಮನೆಗಳ ಘಟಕವನ್ನಾಗಿ ಬದಲಾಯಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ಅಲ್ಲದೆ ಇದು 0.94 ಲಕ್ಷ ಚದರ ಮೀಟರ್ ಗಳ ನಿರ್ಮಾಣ ಪ್ರದೇಶದ ವಾಣಿಜ್ಯ ಮತ್ತು ಸುಮಾರು 0.65 ಲಕ್ಷ ಚದರ ಮೀಟರ್ ಗಳ ಧರ್ಮಶಾಲಾ ಒಳಗೊಂಡ ಸಾಮಾಜಿಕ ಮೂಲಸೌಕರ್ಯ ವ್ಯವಸ್ಥೆ ರೂಪಿಸುವುದನ್ನೂ ಒಳಗೊಂಡಿರುತ್ತದೆ.

ಈ ಯೋಜನೆಯ ಒಟ್ಟು ಅಂದಾಜು ವೆಚ್ಚ 30 ವರ್ಷಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚ ಸೇರಿ 4441 ಕೋಟಿ ರೂಪಾಯಿಗಳಾಗಿರುತ್ತದೆ. ಈ ಯೋಜನೆಯನ್ನು ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆ ಬೀಳದಂತೆ ಮುಕ್ತವಾಗಿ ವಾಣಿಜ್ಯ ಜಾಗವನ್ನು ಮಾರಾಟ ಮಾಡುವ ಮೂಲಕ ಸ್ವಯಂ ಹಣಕಾಸು ಹೊಂದಾಣಿಕೆಯೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಯನ್ನು ಹಂತ ಹಂತವಾಗಿ 5 ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸಲಾಗುತ್ತದೆ.

ಹಿನ್ನೆಲೆ:

ಪಶ್ಚಿಮ ಅನ್ಸಾರಿ ನಗರ ಮತ್ತು ಆಯುರ್ ವಿಜ್ಞಾನ ನಗರ ಆವರಣದಲ್ಲಿನ ವಸತಿ ಕಟ್ಟಡಗಳು ಸುಮಾರು 50-60ವರ್ಷಗಳಷ್ಟು ಹಳೆಯದಾಗಿವೆ ಮತ್ತು ತಮ್ಮ ಜೀವಿತಾವಧಿಯನ್ನು ಪೂರೈಸಿವೆ. ಹೀಗಾಗಿ ಅವು ವಾಸಕ್ಕೆ ಅಸುರಕ್ಷಿತವಾಗಿವೆ. ತ್ವರಿತವಾಗಿ ಹಳೆಯ ಮನೆಗಳು ಹಾಳಾಗುತ್ತಿದ್ದು, ಅವುಗಳ ನಿರ್ವಹಣೆಗೆ ಅಪಾರವಾದ ವೆಚ್ಚವಾಗುತ್ತಿದೆ. ನವದೆಹಲಿಯಲ್ಲಿರುವ ಏಮ್ಸ್ ನಲ್ಲಿ ಹಾಲಿ ಇರುವ ಮನೆಗಳು ಕೂಡ ಭೂಮಿಯನ್ನು ಅತಿ ಅಸಮರ್ಥವಾಗಿ ಬಳಕೆ ಮಾಡಿಕೊಂಡಿರುವುದನ್ನು ತೋರಿಸುತ್ತವೆ. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಲಭ್ಯ ಜಾಗವನ್ನು ದೆಹಲಿಯ 2021ರ ಮಾಸ್ಟರ್ ಪ್ಲಾನ್ ನಂತೆ ಮತ್ತು ಆಧುನಿಕ ನಿರ್ಮಾಣ ತಂತ್ರಜ್ಞಾನದೊಂದಿಗೆ ಹಸಿರು ಕಟ್ಟಡ ನಿಬಂಧನೆಗಳಿಗೆ ಅನುಗುಣವಾಗಿ ಭೂಮಿಯನ್ನು ಸಮರ್ಥವಾಗಿ ಗರಿಷ್ಠಮಟ್ಟದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಆಂತರಿಕವಾಗಿ ಘನ ಮತ್ತು ಹಸಿ ತ್ಯಾಜ್ಯ ವಿಲೇವಾರಿಯ ಸೌಲಭ್ಯದೊಂದಿಗೆ ಹಾಲಿ ಇರುವ ವಸತಿ ಕಟ್ಟಡಗಳನ್ನು ಮರು ಅಭಿವೃದ್ಧಿ ಪಡಿಸುವ ಪ್ರಸ್ತಾಪವನ್ನು ಮಾಡಿತ್ತು.

*****

AKT/SH