ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನಾಗರಿಕ ವಿಮಾನಯಾನ ನೀತಿಗೆ ತನ್ನ ಅನುಮೋದನೆ ನೀಡಿದೆ. ಸ್ವಾತಂತ್ರ್ಯ ಬಂದ ತರುವಾಯ ಇದೇ ಮೊದಲ ಬಾರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಸಮಗ್ರ ನಾಗರಿಕ ವಿಮಾನಯಾನ ನೀತಿಯನ್ನು ಹೊರತರಲಾಗಿದೆ.
ಮುಖ್ಯಾಂಶಗಳು
ನೀತಿಯ ಗುರಿಗಳು:
· ಭಾರತವು 2022ರಹೊತ್ತಿಗೆ 9ರಿಂದ 3ನೇ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಲಿದೆ.
· 2015ರಲ್ಲಿ 8 ಕೋಟಿ ಇದ್ದ ದೇಶೀಯ ಟಿಕೆಟ್ 2022ರಹೊತ್ತಿಗೆ 30 ಕೋಟಿ ಆಗಲಿದೆ.
· ವಾಣಿಜ್ಯ ವಿಮಾನಗಳ ಹಾರಾಟ ನಡೆಸುತ್ತಿರುವ ವಿಮಾನ ನಿಲ್ದಾಣಗಳು 2016ರಲ್ಲಿದ್ದ 77ರಿಂದ 2019ರಹೊತ್ತಿಗೆ 127 ಆಗಲಿವೆ.
· ಸರಕು ಗಾತ್ರವೂ 4 ಪಟ್ಟು ಏರಿಕೆ ಆಗಲಿದ್ದು, 2027ರವೇಳೆಗೆ 10 ದಶಲಕ್ಷ ಟನ್ ಗಳಾಗಲಿವೆ.
· ಸಮುದಾಯದ ಬಳಿಗೆ ವಿಮಾನ ಹಾರಾಟ ತೆಗೆದುಕೊಂಡು ಹೋಗುತ್ತಿದ್ದು, – ಇದು ಭಾರತೀಯರಿಗೆ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಸಾಧಾರಣ ವಿಮಾನ ನಿಲ್ದಾಣಗಳಿಗೆ ಒಂದು ಗಂಟೆಯ ಪ್ರಯಾಣವನ್ನು ರೂ.2500ರಲ್ಲಿ ಮಾಡಬಹುದಾಗಿದೆ.
· ಅಂತಾರಾಷ್ಟ್ರೀಯ ಸೇವೆಯನ್ನು ಆರಂಭಿಸಲು 5 ವರ್ಷ ದೇಶೀಯ ಹಾರಾಟ ನಡೆಸಿರಬೇಕು ಎಂಬ ಅಗತ್ಯವನ್ನು ತೆಗೆದುಹಾಕಲಾಗಿದೆ.
· ಹೊಂದಿಕೊಳ್ಳುವ ಮತ್ತು ಉದಾರೀಕೃತ ‘ಮುಕ್ತ ಆಗಸ’ ಮತ್ತು ‘ಕೋಡ್ ಹಂಚಿಕೆ’ ಒಪ್ಪಂದಗಳು.
· ದಕ್ಷಿಣ ಏಷ್ಯಾದ ತಾಣವಾಗಿ ಅಭಿವೃದ್ಧಿಹೊಂದಲು ಎಂ.ಆರ್.ಓ. ವಲಯಕ್ಕೆ ಪ್ರೋತ್ಸಾಹಕ.
· 2025ರಹೊತ್ತಿಗೆ ಗುಣಮಟ್ಟ ಪ್ರಮಾಣಿತ 3.3ಲಕ್ಷ ಕೌಶಲಪೂರ್ಣ ಸಿಬ್ಬಂದಿಯ ಲಭ್ಯತೆಯ ಖಾತ್ರಿ.
· ಹಸಿರು ವಲಯ ವಿಮಾನನಿಲ್ದಾಣ ಮತ್ತು ಹೆಲಿಪೋರ್ಟ್ ಗಳ ಅಭಿವೃದ್ಧಿ.
· ಇ ಆಡಳಿತ ಮತ್ತು ಸರಳೀಕೃತ ಪ್ರಕ್ರಿಯೆ, ಅನಿಯಂತ್ರಣದೊಂದಿಗೆ ಸುಲಭವಾಗಿ ವಾಣಿಜ್ಯ ನಡೆಸಲು ಅವಕಾಶ ಹೆಚ್ಚಳ.
· ನಾಗರಿಕ ವಿಮಾನಯಾನ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ಉತ್ತೇಜನ.
ನೀತಿಯಲ್ಲಿ ಸೇರಿರುವ ವಲಯಗಳು:
i. ಪ್ರಾದೇಶಿಕ ಸಂಪರ್ಕ.
ii. ಸುರಕ್ಷತೆ
iii. ವಾಯು ಸಾರಿಗೆ ಕಾರ್ಯಾಚರಣೆ
iv. ಮಾರ್ಗ ಚದುರುವಿಕೆ ಮಾರ್ಗಸೂಚಿ.
v. ಅಂತಾರಾಷ್ಟ್ರೀಯ ಕಾರ್ಯಾಚರಣೆಗೆ 5/20 ಅಗತ್ಯಗಳು.
vi. ದ್ವಿಪಕ್ಷೀಯ ಸಂಚಾರದ ಹಕ್ಕು.
vii. ಕೋಡ್ – ಹಂಚಿಕೆ ಒಪ್ಪಂದಗಳು.
viii. ಹಣಕಾಸು ಬೆಂಬಲ.
ix. ರಾಜ್ಯಗಳು ಅಭಿವೃದ್ಧಿಪಡಿಸುವ ವಿಮಾನ ನಿಲ್ದಾಣಗಳು, ಖಾಸಗಿ ವಲಯ ಅಥವಾ ಪಿಪಿಪಿ ಮಾದರಿ.
x. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ.
xi. ವಾಯು ಪಥದರ್ಶಕ ಸೇವೆ.
xii. ವಾಯುಯಾನ ಸುರಕ್ಷತೆ, ವಲಸೆ ಮತ್ತು ಕಸ್ಟಮ್ಸ್.
xiii. ಹೆಲಿಕಾಪ್ಟರ್ ಗಳು
xiv. ಚಾರ್ಟರ್ ಗಳು
xv. ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ.
xvi. ಮೈದಾನ ನಿರ್ವಹಣೆ
xvii. ವಾಯು – ಸರಕು.
xviii. ಏರೋನಾಟಿಕಲ್ ಮೇಕ್ ಇನ್ ಇಂಡಿಯಾ
xix. ವೈಮಾನಿಕ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ
xx. ಸುಸ್ಥಿರ ವಿಮಾನ ಯಾನ
xxi. ಇತರ.
xxii. ಅಗತ್ಯ ಸೇವೆ ನಿರ್ವಹಣೆ ಕಾಯಿದೆ 1968,
ನೀತಿಯ ಪ್ರಮುಖ ಉದ್ದೇಶಗಳು
i. ಕಾರ್ಯಸಾಧ್ಯತೆ ಅಂತರದ ಆರ್ಥಿಕ ನೆರವ(ವಿಜಿಎಫ್)ನ್ನು ಸಚಿವಾಲಯ ಕಾಲಕಾಲಕ್ಕೆ ನಿಗದಿ ಮಾಡುವ ದರದ ಮೇಲೆ ಕ್ಯಾಟ್ II/ಕ್ಯಾಟ್ IIಎ, ಆರ್.ಸಿ.ಎಸ್. ಮಾರ್ಗಗಳು ಮತ್ತು ಸಣ್ಣ ವಿಮಾನ ಹೊರತುಪಡಿಸಿ ಎಲ್ಲ ದೇಶೀಯ ಮಾರ್ಗಗಳ ಪ್ರತಿ ನಿರ್ಗಮನದ ಮೇಲೆ ಒಂದು ಸಣ್ಣ ಲೆವಿ ಹಾಕುವ ಮೂಲಕ ಮಾಡಲಾಗುತ್ತದೆ. ಸವಿವರವಾದ ಯೋಜನೆಯನ್ನು ಬಾಧ್ಯಸ್ಥರ ಸಮಾಲೋಚನೆಗಾಗಿ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ.
ii. ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭಕ್ಕೆ 2004ರಿಂದ ಇದ್ದ 5/20 ನಿಯಮವನ್ನು ಸೂತ್ರೀಕರಣದ ಮೂಲಕ ಬದಲಾವಣೆ ಮಾಡಲಾಗಿದ್ದು, ಇದು ಹೊಸ ಮತ್ತು ಹಳೆಯ ವಿಮಾನಯಾನ ಸಂಸ್ಥೆಗಳಿಗೆ ಅವು ಕೆಲವು ದೇಶೀಯ ಕಾರ್ಯಾಚರಣೆ ಹೊಣೆಯನ್ನು ಪೂರೈಸುವುದಾದರೆ ಅಂತಾರಾಷ್ಟ್ರೀಯ ಕಾರ್ಯಾಚರಣೆಗೆ ಅವಕಾಶ ನೀಡುತ್ತದೆ. ಎಲ್ಲ ವಿಮಾನಯಾನ ಸಂಸ್ಥೆಗಳೂ ಅವು 20 ವಿಮಾನ ಅಥವಾ ಒಟ್ಟು ಸಾಮರ್ಥ್ಯದ ಶೇ.20ರಷ್ಟು (ಎಲ್ಲ ನಿರ್ಗಮನಗಳನ್ನೂ ಒಟ್ಟಿಗೆ ಸೇರಿಸಿದಾಗ ಬರುವ ಸರಾಸರಿ ಆಸನಗಳ ರೀತ್ಯ) ನಿಯೋಜಿಸುವುದಾದರೆ ಅವು ಅಂತಾರಾಷ್ಟ್ರೀಯ ಕಾರ್ಯಾಚರಣೆ ಆರಂಭಿಸಬಹುದಾಗಿದೆ
iii. ಸಮರ್ಥ ವಿಮಾನಯಾನ ಸುರಕ್ಷತೆ ಮೇಲ್ವಿಚಾರಣೆ ವ್ಯವಸ್ಥೆ ಮತ್ತು ಎಲ್ಲ ವಿಮಾನಯಾನ ಸುರಕ್ಷತೆ ಕುರಿತ ವಿಚಾರಗಳಲ್ಲಿ ಪಾರದರ್ಶಕ ಏಕ ಗವಾಕ್ಷಿ ಯೋಜನೆ ವ್ಯವಸ್ಥೆಗಾಗಿ ಅಗತ್ಯ ಆಡಳಿತಾತ್ಮಕ ಮತ್ತು ಹಣಕಾಸಿನ ಕಾರ್ಯಸಾಧ್ಯತೆಯನ್ನು ನಾಗರಿಕ ವಿಮಾನಯಾನ ಇಲಾಖೆಯ ಮಹಾ ನಿರ್ದೇಶಕರಿಗೆ (ಡಿಡಿಸಿಎ) ಒದಗಿಸುತ್ತದೆ.
iv. ಒಂದು ಮಾರ್ಗವನ್ನು ವರ್ಗ 1 (ಟ್ರಂಕ್ ಮಾರ್ಗ) ಹೆಚ್ಚು ಪಾರದರ್ಶಕ ಎಂದು ಘೋಷಿಸುವ ಮಾನದಂಡ ರೂಪಿಸುವ ಮೂಲಕ ಮಾರ್ಗ ಚದುರುವಿಕೆ ಮಾರ್ಗಸೂಚಿ (ಆರ್.ಡಿ.ಜಿ)ಯನ್ನು ತರ್ಕಬದ್ಧಗೊಳಿಸಲಾಗಿದೆ, ಹಾಗೆಯೇ ಕ್ಯಾಟ್ II ಮತ್ತು IIಎಯಲ್ಲಿ ನಿಯೋಜಿಸಬಹುದಾದ ಸಂಚಾರವನ್ನು ಕ್ಯಾಟ್ Iರ ಶೇಕಡಾವಾರಿನಲ್ಲಿ ವ್ಯಕ್ತಪಡಿಸುವುದನ್ನು ಹಾಗೆಯೇ ಉಳಿಸಲಾಗಿದೆ. ಕ್ಯಾಟ್ I ಮಾರ್ಗಕ್ಕೆ 700 ಕಿ.ಮೀ.ಗಿಂತ ಹೆಚ್ಚಿನ ದೂರದ ಹಾರಾಟಕ್ಕೆ ಸರಾಸರಿ ಆಸನಗಳ ಶೇ.70ರಷ್ಟು ಅಂಶ ಮತ್ತು ವಾರ್ಷಿಕ ಸಂಚಾರದಟ್ಟಣೆಯಾದ 5 ಲಕ್ಷ ಪ್ರಯಾಣಿಕರ ಮಾನದಂಡ ಪ್ರಸ್ತಾಪಿಸಲಾಗಿದೆ. ಕ್ಯಾಟ್ III ಕ್ಕೆ ಶೇಕಡವಾರನ್ನು ಕಾರ್ಯಾಚರಣೆಗೆ ಬರಲಿರುವ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಕಡಿತ ಮಾಡಲಾಗಿದೆ. ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶಗಳನ್ನು IIನೇ ವರ್ಗದ ಮಾರ್ಗದಲ್ಲಿ ಸೇರಿಸಲಾಗಿದೆ.
v. ದ್ವಿಪಕ್ಷೀಯ ಹಕ್ಕುಗಳು ಮತ್ತು ಕೋಡ್ ಹಂಚಿಕೆ ಒಪ್ಪಂದಗಳ ಆಡಳಿತವನ್ನು ಸುಲಭವಾಗಿ ವ್ಯಾಪಾರ ಮಾಡುವ ಮತ್ತು ಪ್ರಯಾಣಿಕರಿಗೆ ವ್ಯಾಪಕ ಆಯ್ಕೆ ಒದಗಿಸುವ ಸಲುವಾಗಿ ಉದಾರೀಕರಣಗೊಳಿಸಲಾಗಿದೆ. ಸಾರ್ಕ್ ರಾಷ್ಟ್ರಗಳಿಗೆ ಮತ್ತು ದೆಹಲಿಯಿಂದ 5000 ಕಿ.ಮೀ. ಆಚೆ ಇರುವ ರಾಷ್ಟ್ರಗಳಿಗೆ “ಮುಕ್ತ ಆಕಾಶ”ವನ್ನು ಪರಸ್ಪರ ಆಧಾರದ ಮೇಲೆ ಜಾರಿಗೊಳಿಸಲಾಗುತ್ತದೆ. ಎಲ್ಲೆಲ್ಲಿ ನಿಯೋಜಿತ ಭಾರತೀಯ ವಿಮಾನಗಳು ತಮ್ಮ ದ್ವಿಪಕ್ಷೀಯ ಹಕ್ಕಿನ ಶೇಕಡ 80ರಷ್ಟು ಬಳಸಿಕೊಳ್ಳುವುದಿಲ್ಲವೋ ಆದರೆ ವಿದೇಶೀ ವಿಮಾನಯಾನ ಸಂಸ್ಥೆ/ರಾಷ್ಟ್ರಗಳು ತಮ್ಮ ಪಾಲು ಬಳಸಿಕೊಂಡರೆ ಮತ್ತು ಅವು ತಮ್ಮ ಸಾಮರ್ಥ್ಯ ಹೆಚ್ಚಳಕ್ಕೆ ಒತ್ತಾಯಿಸಿದರೆ ಹೆಚ್ಚುವರಿ ಸಾಮರ್ಥ್ಯ ಅಧಿಕಾರವನ್ನು ಹಂಚಿಕೆ ಮಾಡುವ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯು ಪದ್ಧತಿಯೊಂದನ್ನು ಶಿಫಾರಸು ಮಾಡಲಿದೆ.
vi. ಸಚಿವಾಲಯವು ರಾಜ್ಯ ಸರ್ಕಾರ, ಖಾಸಗಿ ಅಥವಾ ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ಮತ್ತು ನಿಯಂತ್ರಕ ನಿಶ್ಚಿತತೆ ಒದಗಿಸುವ ಪ್ರಯತ್ನಗಳನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತದೆ. ಭವಿಷ್ಯದಲ್ಲಿ ಹಸಿರು ವಲಯ ಮತ್ತು ಬ್ರೌನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸುರಕ್ಷೆ ಮತ್ತು ಭದ್ರತೆಯಲ್ಲಿ ಯಾವುದೇ ರಾಜಿ ಇಲ್ಲದೆ ವೆಚ್ಚ ದಕ್ಷಗೊಳಿಸುತ್ತದೆ.
vii. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎ.ಎ.ಐ) ತನ್ನ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಮತ್ತು ಆಧುನಿಕರಿಸುವುದನ್ನು ಮುಂದುವರಿಸುತ್ತದೆ ಮತ್ತು ತನ್ನ ಸೇವೆಯ ಗುಣಮಟ್ಟವನ್ನು ಮೇಲ್ದರ್ಜೆಗೇರಿಸುತ್ತಿರುತ್ತದೆ. ಹಾಲಿ ಕಾರ್ಯಾಚರಣೆ ನಡೆಸುತ್ತಿರುವ ಹಾಗೂ ಇನ್ನೂ ಪೂರ್ಣ ಬೇಡಿಕೆ ಪೂರೈಸದ ಎ.ಎ.ಐ. ವಿಮಾನ ನಿಲ್ದಾಣಗಳ 150 ಕಿಲೋ ಮೀಟರ್ ದೂರದಲ್ಲಿ ಹೊಸ ಹಸಿರು ವಲಯ ವಿಮಾನ ನಿಲ್ದಾಣಗಳಿಗೆ ಅನುಮೋದನೆ ನೀಡಿದಲ್ಲಿ ಎ.ಎ.ಐ. ಅದಕ್ಕೆ ಸೂಕ್ತವಾದ ಪರಿಹಾರೋಪಾಯಗಳನ್ನೂ ಒದಗಿಸಲಿದೆ.
viii. ವಾಯು ಪಥದರ್ಶಕ ಸೇವೆಯನ್ನು ಮೇಲ್ದರ್ಜೆಗೇರಿಸುವ ಮತ್ತು ಆಧುನೀಕರಿಸುವ ಕಾರ್ಯವು ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿ ಮುಂದುವರಿಯುತ್ತದೆ. ಎ.ಎ.ಐ. ಸಂಪೂರ್ಣ ಸೌಹಾರ್ದಯುತವಾದ ವಾಯು ಪಥದರ್ಶಕ ವ್ಯವಸ್ಥೆಯನ್ನು ತಂತ್ರಜ್ಞಾನ ಮತ್ತು ಪ್ರಕ್ರಿಯೆಗಳ ಮೂಲಕ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಸಂಘಟನೆ (ಐ.ಸಿ.ಎ.ಓ) ಜಾಗತಿಕ ವಾಯು ಪಥದರ್ಶಕ ಯೋಜನೆ, ವಾಯುಯಾನ ವ್ಯವಸ್ಥೆ ವಿಭಾಗ ಮೇಲ್ದರ್ಜೆ ಮತ್ತು ಆಧುನೀಕರಣಗೊಳಿಸಲಿದೆ.
ix. ಹೆಲಿಕಾಪ್ಟರ್ ಗಳಿಗೆ ಪ್ರತ್ಯೇಕ ನಿಯಮಗಳನ್ನು ಹೊರಡಿಸುವ ಮತ್ತು ನಾಲ್ಕು ಹೆಲಿ-ತಾಣಗಳನ್ನು ಆರಂಭದಲ್ಲಿ ಅಭಿವೃದ್ಧಿಪಡಿಸುವ ಮೂಲಕ ಸರ್ಕಾರವು ಹೆಲಿಕಾಪ್ಟರ್ ಗಳ ಬಳಕೆಯನ್ನು ಉತ್ತೇಜಿಸಲಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ ಒದಗಿಸಲು ಎಲ್ಲ ಏಜೆನ್ಸಿಗಳು ಮತ್ತು ಸಂಬಂಧಿತ ಸಹಭಾಗಿಗಳೊಂದಿಗೆ ಸಹಯೋಗ ಇಟ್ಟುಕೊಳ್ಳಲಿದೆ.
x. 2016-17ನೇ ಸಾಲಿನ ಬಜೆಟ್ ನಲ್ಲಿ ಎಂ.ಆರ್.ಓ.ಗಳ ಕಸ್ಟಂಸ್ ಸುಂಕವನ್ನು ತರ್ಕಬದ್ಧಗೊಳಿಸಲಾಗಿದೆ ಮತ್ತು ವಸ್ತುಗಳ ಅದರಲ್ಲೂ ಸಾಧನಗಳು ಮತ್ತು ಸಾಧನ ಕಿಟ್ ಗಳ ಅನುಮೋದನೆ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. ಈ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡಲು ಹೆಚ್ಚಿನ ಪ್ರೋತ್ಸಾಹಕಗಳನ್ನೂ ನೀತಿಯಲ್ಲಿ ಸೇರಿಸಲಾಗಿದೆ:-
· ನಾಗರಿಕ ವಿಮಾನ ಯಾನ ಸಚಿವಾಲಯವು ಎಂ.ಆರ್.ಓ. ಚಟುವಟಿಕೆಗಳ ಮೇಲಿನ ವ್ಯಾಟ್ ಅನ್ನು ಶೂನ್ಯ ದರಗೊಳಿಸಲು ರಾಜ್ಯ ಸರ್ಕಾರಗಳ ಮನವೊಲಿಸಲಿದೆ.
· ಎಂ.ಆರ್.ಓ. ಸೇವೆ ಒದಗಿಸುವವರಿಗೆ ಹಾಗೂ ಎಲ್ಲಿ ಎಂ.ಆರ್.ಓ. ಸೇವೆ ಸಾಮರ್ಥ್ಯ ಇದೆಯೋ ಅಲ್ಲಿ ಅಗತ್ಯ ಭೂಮಿ ನೀಡಲು ಅವಕಾಶವನ್ನು ಎಲ್ಲ ಭವಿಷ್ಯದ ವಿಮಾನ ನಿಲ್ದಾಣ/ಹೆಲಿಪೋರ್ಟ್ ಯೋಜನೆಗಲ್ಲಿ ಮಾಡಲಾಗುತ್ತದೆ.
· ವಿಮಾನನಿಲ್ದಾಣ ರಾಯಧನ ಮತ್ತು ಹೆಚ್ಚುವರಿ ಶುಲ್ಕಗಳನ್ನು ಎಂ.ಆರ್.ಓ. ಸೇವೆಗಳನ್ನು ಒದಗಿಸುವವರ ಮೇಲೆ ನೀತಿಯಡಿ ಅನುಮೋದನೆ ನೀಡಿದ ದಿನದಿಂದ 5 ವರ್ಷಗಳವರೆಗೆ ಹಾಕುವುದಿಲ್ಲ.
· ಮುಕ್ತ ಸ್ಪರ್ಧೆಯ ಖಾತ್ರಿಗಾಗಿ ಹಾಲಿ ಇರುವ ಮೈದಾನ ನಿರ್ವಹಣೆ (ಗ್ರೌಂಡ್ ಹ್ಯಾಂಡಲಿಂಗ್) ನೀತಿಯನ್ನು ಹೊಸ ಚೌಕಟ್ಟಿನೊಂದಿಗೆ ಬದಲಾಯಿಸಲಾಗುತ್ತಿದೆ. ವಿಮಾನ ನಿಲ್ದಾಣ ನಿರ್ವಹಣೆ ಮಾಡುವವರು 2008ರ ಎ.ಇ.ಆರ್.ಎ. ಕಾಯಿದೆಯಲ್ಲಿ ವ್ಯಾಖ್ಯಾನಿಸಿರುವಂತೆ ಏರ್ ಇಂಡಿಯಾದ ಅಂಗಸಂಸ್ಥೆ / ಜಂಟಿ ಉದ್ಯಮದ ಮೂರು ಗ್ರೌಂಡ್ ಹ್ಯಾಂಡಲಿಂಗ್ ಸಂಸ್ಥೆಗಳು (ಜಿ.ಎಚ್.ಎ) ಕಾರ್ಯಾಚರಣೆ ಖಾತ್ರಿ ನೀಡಬೇಕು. ಪ್ರಮುಖವಲ್ಲದ ವಿಮಾನ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣ ನಿರ್ವಹಣೆದಾರರು ಗ್ರೌಂಡ್ ಹ್ಯಾಂಡಲಿಂಗ್ ಏಜೆನ್ಸಿಗಳ ಸಂಖ್ಯೆಯನ್ನು ಸಂಚಾರದಟ್ಟಣೆ, ಏರ್ ಸೈಡ್ ಮತ್ತು ಟರ್ಮಿನಲ್ ನಿರ್ಮಾಣ ಸಾಮರ್ಥ್ಯದ ಆಧಾರದ ಮೇಲೆ ನಿರ್ಧರಿಸಬಹುದು. ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸುವವರೂ ಸೇರಿದಂತೆ ಎಲ್ಲ ದೇಶೀಯ ನಿಗದಿತ ವಿಮಾನಯಾನ ಕಾರ್ಯಾಚರಣೆದಾರರು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸ್ವಯಂ ನಿರ್ವಹಣೆ ಕೈಗೊಳ್ಳಲು ಮುಕ್ತರಾಗಿರುತ್ತಾರೆ. ಮಾನವಶಕ್ತಿ ಸರಬರಾಜುದಾರರ ಮೂಲಕ ಸಿಬ್ಬಂದಿಯನ್ನು ಪಡೆಯಲು ಅವಕಾಶ ಇರುವುದಿಲ್ಲ.