ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನಾಗರಿಕ ವಿಮಾನ ಯಾನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರದ ಅನುಷ್ಠಾನಕ್ಕಾಗಿ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎ.ಎ.ಐ.) ಮತ್ತು ಪ್ರೆಂಚ್ ಸಹವರ್ತಿ ನಾಗರಿಕ ವಿಮಾನಯಾನ ಪ್ರಾಧಿಕಾರ, ಫ್ರಾನ್ಸ್ (ಡಿಜಿಎಸಿ) ನಡುವೆ ತಿಳಿವಳಿಕೆ ಒಪ್ಪಂದ(ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ.
ಈ ತಾಂತ್ರಿಕ ಸಹಕಾರ ಕಾರ್ಯಕ್ರಮವು ಎ.ಎ.ಐ. ಅಧಿಕಾರಿಗಳ ತಜ್ಞತೆ ಮತ್ತು ಕೌಶಲವರ್ಧನೆಗೆ ನೆರವಾಗಲಿದೆ. ಈ ತಿಳಿವಳಿಕೆ ಒಪ್ಪಂದವು ಎಂಜಿನಿಯರುಗಳು, ತಂತ್ರಜ್ಞರು ಮತ್ತು ವ್ಯವಸ್ಥಾಪಕರು ಇತ್ಯಾದಿ..ಗಳಿಗೆ ತರಬೇತಿ ಕೊಡಿಸಲೂ ಸಹಕಾರಿಯಾಗಿದೆ.
AKT/VBA/SH