Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಲ್ಕು ಔಷಧ ಪಿ.ಎಸ್.ಯು.ಗಳ ಹೆಚ್ಚುವರಿ ಭೂಮಿಯನ್ನು ಅಗತ್ಯಕ್ಕನುಗುಣವಾಗಿ ಮಾರಾಟ ಮಾಡಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್.), ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ (ಐಡಿಪಿಎಲ್), ರಾಜಾಸ್ತಾನ್ ಡ್ರಗ್ಸ್ ಅಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ (ಆರ್.ಡಿ.ಪಿ.ಎಲ್.) ಮತ್ತು ಬೆಂಗಾಲ್ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ (ಬಿಸಿಪಿಎಲ್)ಗಳ ಹೆಚ್ಚುವರಿ ಜಮೀನನ್ನು ಋಣ ಬಾಕಿ ತೀರಿಸಲು ತಮಗೆ ಅಗತ್ಯ ಕಂಡು ಬಂದಾಗ ಮಾರಾಟ ಮಾಡಲು ತನ್ನ ಅನುಮೋದನೆ ನೀಡಿದೆ. ಈ ಹಾದಿಯಲ್ಲಿ ರಾಷ್ಟ್ರೀಯ ಆಸ್ತಿಯನ್ನು ದೇಶದ ಉತ್ತಮ ಹಿತದೊಂದಿಗೆ ಬಳಸಬಹುದಾಗಿದೆ.

ಈ ಮಾರಾಟವು ಸರ್ಕಾರದ ಸಂಸ್ಥೆಗಳಿಗೆ ಮುಕ್ತ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಮಾಡಬೇಕು ಮತ್ತು ಬಾಕಿ ಇರುವ ಋಣಗಳನ್ನು ಈ ಮಾರಾಟದಿಂದ ತೀರಿಸಬೇಕು. ಸ್ವಯಂ ನಿವೃತ್ತಿ ಯೋಜನೆ (ವಿ.ಆರ್.ಎಸ್.)/ಸ್ವಯಂ ಪ್ರತ್ಯೇಕತೆ ಯೋಜನೆ (ವಿ.ಎಸ್.ಎಸ್.)ಯನ್ನು ಸಹ ಈ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಜಾರಿ ಮಾಡಲಾಗುತ್ತದೆ.

ಉಳಿದ ಜಮೀನಿನ ಭಾಗವನ್ನು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ)ಮತ್ತು ಸಾರ್ವಜನಿಕ ಉದ್ದಿಮೆ ಇಲಾಖೆ (ಡಿಪಿಇ) ಮಾರ್ಗಸೂಚಿಯಂತೆ ನಿರ್ವಹಿಸಲಾಗುತ್ತದೆ.

ಋಣಗಳನ್ನು ತೀರಿಸಿದ ಬಳಿಕ, ಐಡಿಪಿಎಲ್ ಮತ್ತು ಆರ್.ಡಿ.ಪಿ.ಎಲ್.ಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ. ಎಚ್.ಎ.ಎಲ್. ಮತ್ತು ಬಿಸಿಪಿಎಲ್ ಗಳಿಗೆ ವ್ಯೂಹಾತ್ಮಕ ಮಾರಾಟದ ಆಯ್ಕೆ ಬಳಸಿಕೊಳ್ಳಲಾಗುತ್ತದೆ. ಔಷಧ ಇಲಾಖೆ, ಈ ಉದ್ದಿಮೆಗಳ ಆಡಳಿತ್ಮಾತ್ಮಕ ಇಲಾಖೆ ಕಾಲಮಿತಿಯಲ್ಲಿ ಅನುಸರಣಾ ಕ್ರಮ ಕೈಗೊಳ್ಳಲಿದೆ.

***

VBA/SH