Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುಣೆಯಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಮತ್ತು ಅಮೃತ್ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ

ಪುಣೆಯಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಮತ್ತು ಅಮೃತ್ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪುಣೆಯಲ್ಲಿ ನಡೆದ ಸ್ಮಾರ್ಟ್ ಸಿಟಿ ಮಿಷನ್ ಮತ್ತು ಅಮೃತ್ ಪ್ರಥಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ನಗರಗಳು ಅಭಿವೃದ್ಧಿಯ ಪಥದಲ್ಲಿ ಸಾಗಲು ಸ್ಪರ್ಧೆಗೆ ಇಳಿದಿರುವ ಹೊಸ ಪ್ರವೃತ್ತಿಯನ್ನು ನಾವು ಕಾಣಬಹುದಾಗಿದೆ ಎಂದರು. ಜನರ ಪಾಲ್ಗೊಳ್ಳುವಿಕೆಯೊಂದಿಗೆ ಅಭಿವೃದ್ಧಿಯ ಕಾರ್ಯಗಳಲ್ಲಿ ಧನಾತ್ಮಕವಾಗಿ ಸ್ಪರ್ಧಿಸುವ ವಾತಾವರಣ ಮೂಡಿದೆ ಎಂದು ಹೇಳಿದರು. ನಗರದಲ್ಲಿರುವ ಜನರು ತಮ್ಮ ನಗರ ಪ್ರದೇಶದ ಅಭಿವೃದ್ಧಿಯ ಬಗ್ಗೆ ನಿರ್ಧಾರ ಮಾಡಬೇಕು ಎಂದು ಪ್ರತಿಪಾದಿಸಿದ ಅವರು, ಈ ನಿರ್ಧಾರಗಳನ್ನು ದೆಹಲಿಯಲ್ಲಿ ಕೈಗೊಳ್ಳಬಾರದು ಎಂದರು. ಪಾಲ್ಗೊಳ್ಳುವಿಕೆ ಆಡಳಿತದ ಸ್ಫೂರ್ತಿ ಅತಿ ಮುಖ್ಯ ಎಂದು ಹೇಳಿದರು.

ನಗರೀಕರಣವನ್ನು ಒಂದು ಸಮಸ್ಯೆ ಎಂದು ಕಾಣುತ್ತಿದ್ದ ದಿನಗಳು ಈಗ ಮುಗಿದಿವೆ. ಈಗ ಇದನ್ನು ಒಂದು ಅವಕಾಶ ಎಂದು ಕಾಣಲಾಗುತ್ತಿದೆ ಎಂದರು. ನಗರಗಳು ಪ್ರಗತಿಯ ಕೇಂದ್ರಗಳಾಗಿದ್ದು, ಜನರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯ ಅದಕ್ಕಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ನಗರಗಳು ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಗಮನ ಹರಿಸುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇದಕ್ಕೂ ಮುನ್ನ ಆಂಧ್ರಪ್ರದೇಶ, ಒಡಿಶಾ ಮತ್ತು ರಾಜಾಸ್ಥಾನದ ಮುಖ್ಯಮಂತ್ರಿಗಳು ವಿಶಾಖಪಟ್ಟಣಂ, ಭುವನೇಶ್ವರ ಮತ್ತು ಜೈಪುರದಿಂದ ಅನುಕ್ರಮವಾಗಿ ನೇರ ವಿಡಿಯೋ ಸಂವಾದದ ಮೂಲಕ ಭಾಗಿಯಾದರು. ಅವರು ತಮ್ಮ ಅಭಿಪ್ರಾಯಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಪ್ರಧಾನಮಂತ್ರಿಯವರು ಸ್ಮಾರ್ಟ್ ನೆಟ್ ಪೋರ್ಟಲ್ ಮತ್ತು ಪುಣೆಯ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಸಹ ಉದ್ಘಾಟಿಸಿದರು. “ನಿಮ್ಮ ನಗರವನ್ನು ಸ್ಮಾರ್ಟ್ ಮಾಡಿ” ಎಂಬ ಸ್ಪರ್ಧೆಗೂ ಪ್ರಧಾನಿ ಚಾಲನೆ ನೀಡಿದರು.