ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುಣೆ ಮೆಟ್ರೋ ಯೋಜನೆಯ (ಪ್ರಥಮ ಹಂತಕ್ಕೆ) ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರದಲ್ಲಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ಅತಿ ವೇಗದಲ್ಲಿ ನಗರೀಕರಣವಾಗುತ್ತಿದೆ ಮತ್ತು ಹೀಗಾಗಿ ಎರಡೂ ದಿಕ್ಕಿನಲ್ಲಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ: ಹಳ್ಳಿಗಳಲ್ಲಿ ಜೀವನದ ಗುಣಮಟ್ಟ ಸುಧಾರಿಸುವುದು; ಮತ್ತು ದೀರ್ಘಾವಧಿಯ ಚಿಂತನೆ ಮಾಡುವುದು ಆ ಮೂಲಕ ನಗರ ಪ್ರದೇಶಗಳು ಎದುರಿಸುತ್ತಿರುವ ಸವಾಲುಗಳನ್ನು ಕಡಿಮೆ ಮಾಡುವುದು.
ಭವಿಷ್ಯಕ್ಕಾಗಿ ನಾವು ಯೋಜನೆ ರೂಪಿಸಲೇಬೇಕು ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಲ್ಲೇ ನೋಡಬಾರದು ಎಂದು ಹೇಳಿದರು. ನಾವು ನಮ್ಮ ನಗರಗಳ ಅಭಿವೃದ್ಧಿಗೆ ಸಾಕಷ್ಟು ಯೋಜನೆ ರೂಪಿಸಬೇಕು ಎಂದೂ ಹೇಳಿದರು.
ಕೇಂದ್ರ ಸರ್ಕಾರ ವಾಸ್ತವವಾಗಿ ರುರ್ಬನ್ ಅಭಿಯಾನದ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ಇದು ತ್ವರಿತವಾಗಿ ನಗರೀಕರಣಗೊಳ್ಳುತ್ತಿರುವ ಮತ್ತು ಬೆಳೆಯುತ್ತಿರುವ ಪ್ರದೇಶಗಳ ಅಗತ್ಯ ಪೂರೈಸುತ್ತದೆ ಎಂದರು.
ಪ್ರಸಕ್ತ ಲಾಭವೂ ಮಹತ್ವವಾದ್ದೆ ಆದರೆ, ಭವಿಷ್ಯದ ಆಶಯ ಹಾಗೂ ಅಗತ್ಯಗಳಗನ್ನು ಪೂರೈಸಬಲ್ಲಂತಹ ವ್ಯವಸ್ಥೆಯ ಅಗತ್ಯವೂ ಇದೆ ಎಂದು ಪ್ರಧಾನಮಂತ್ರಿ ಹೇಳಿದರು. ಯಾವುದೇ ಯೋಜನೆಯನ್ನು ಕೈಗೆತ್ತಿಕೊಂಡರೂ ಅದನ್ನು ಕಾಲಮಿತಿಯ ಚೌಕಟ್ಟಿನೊಳಗೆ ಪೂರ್ಣಗೊಳಿಸುವ ಸಂಕಲ್ಪ ಸರ್ಕಾರದ್ದಾಗಿದೆ ಎಂದು ಹೇಳಿದರು.
ಸರ್ಕಾರವು ಅನಿಲ ಗ್ರಿಡ್, ಜಲ ಗ್ರಿಡ್, ಡಿಜಿಟಲ್ ಜಾಲ, ಬಾಹ್ಯಾಕಾಶ ತಂತ್ರಜ್ಞಾನದ ಲಾಭ ಪಡೆಯುವುದು ಮತ್ತು ರೈತರ ಅನುಕೂಲಕ್ಕಾಗಿ ತಂತ್ರಜ್ಞಾನ ಬಳಕೆಯ ಬಗ್ಗೆ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಈ ದೇಶದಲ್ಲಿ ಕಾನೂನಿನ ಮುಂದೆ ಪ್ರತಿಯೊಬ್ಬರೂ ಸಮಾನರೇ ಮತ್ತು ಪ್ರತಿಯೊಬ್ಬರೂ ಕಾನೂನು ಪಾಲಿಸಲೇಬೇಕು ಎಂದರು. ಕಪ್ಪುಹಣ ಮತ್ತು ಭ್ರಷ್ಟಾಚಾರದ ಪಿಡುಗನ್ನು ಈ ಮೊದಲೇ ಕಿತ್ತೊಗೆದಿದ್ದರೆ, ತಾವು ಕೈಗೊಂಡಂತಹ ನಿರ್ಧಾರ ಕೈಗೊಳ್ಳುವ ಅಗತ್ಯ ಇರಲಿಲ್ಲ ಎಂದರು.
ಪುಣೆ ಶೈಕ್ಷಣಿಕ ನಗರಿಯಾಗಿ, ಆನ್ ಲೈನ್ ಬ್ಯಾಂಕಿಂಗ್ ಮತ್ತು ಸೌಲಭ್ಯಗಳನ್ನು ಶೋಧಿಸುವದಲ್ಲಿ ಮುಂದಾಳತ್ವ ವಹಿಸಬೇಕು ಎಂದರು.
ಈ ದೇಶದಲ್ಲಿ 125 ಕೋಟಿ ಭಾರತೀಯರ ಧ್ವನಿಯನ್ನೂ ಕೇಳಲಾಗುತ್ತದೆ; ಈ ದನಿಯನ್ನು ಆಯ್ದ ಕೆಲವರು ಮಾತ್ರ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ತಿಳಿಸಿದರು.
AD/SH