Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪೆಟ್ರಾಪೊಲೆ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ)ನ ಜಂಟಿ ಸಮರ್ಪಣೆ

ಪೆಟ್ರಾಪೊಲೆ ಇಂಟಿಗ್ರೇಟೆಡ್ ಚೆಕ್ ಪೋಸ್ಟ್  (ಐಸಿಪಿ)ನ ಜಂಟಿ ಸಮರ್ಪಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಮಂತ್ರಿ ಶ್ರೀಮತಿ ಶೇಖ್ ಹಸೀನಾ ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪೆಟ್ರಾಪೊಲೆಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ ಕೋಲ್ಕತ್ತಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದರು.

ಪೆಟ್ರಾಪೊಲೆ – ಬೆನಾಪೊಲೆ ಭಾರತ ಮತ್ತು ಬಾಂಗ್ಲಾದೇಶದ ವಾಣಿಜ್ಯಕ್ಕೆ ಮಹತ್ವದ ನೆಲ ಗಡಿ ದಾಟುವ ಪ್ರದೇಶವಾಗಿದೆ. ಭಾರತ- ಬಾಂಗ್ಲಾದೇಶದ ಶೇಕಡ 50ರಷ್ಟು ವ್ಯಾಪಾರ ಪೆಟ್ರಾಪೊಲೆ ಮೂಲಕವೆ ಸಾಗುತ್ತದೆ. 15000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವ್ಯಾಪಾರ ಪೆಟ್ರಾಪೊಲೆ ಐಸಿಪಿ ಮೂಲಕ ನಡೆಯುತ್ತದೆ. ಇದು ಭಾರತದ ಇತರ ಎಲ್ಲ ಭೂ ಪ್ರವೇಶ ದ್ವಾರ ಮತ್ತು ನೆಲ ಮಾರ್ಗದ ಕಸ್ಟಮ್ಸ್ ಠಾಣೆಗಳನ್ನು ಒಟ್ಟುಗೂಡಿಸಿದರೂ ಅದಕ್ಕಿಂತ ಹೆಚ್ಚಾಗುತ್ತದೆ. ಪ್ರತಿವರ್ಷ ಸುಮಾರು 15 ಲಕ್ಷ ಜನರು ಮತ್ತು 1,50,000 ಟ್ರಕ್ ಗಳು ಪೆಟ್ರಾಪೊಲೆ – ಬೆನಾಪೊಲೆ ಮೂಲಕ ಹಾದು ಹೋಗುತ್ತವೆ.

ಪೆಟ್ರಾಪೊಲೆ ಐ.ಸಿ.ಪಿ. ಭದ್ರತೆ, ವಸಲೆ, ಕಸ್ಟಂಸ್, ಪ್ರತ್ಯೇಕಿಸುವುದು ಇತ್ಯಾದಿ ಕಾರ್ಯಗಳನ್ನು ಸಮರ್ಥವಾಗಿ ಮತ್ತು ದಕ್ಷವಾಗಿ ನಿರ್ವಹಿಸುತ್ತದೆ ಜೊತೆಗೆ ಜನರು, ಸರಕು ಮತ್ತು ವಾಹನಗಳು ಸುಗಮವಾಗಿ ಗಡಿಯಲ್ಲಿ ಸಂಚರಿಸಲು ಇದು ಬೆಂಬಲ ಸೌಲಭ್ಯ ಒದಗಿಸುತ್ತದೆ.
ಪೆಟ್ರಾಪೊಲೆ ಐಸಿಪಿಯು ಅಗರ್ತಲಾ (ಭಾರತ)- ಅಕೌರಾ (ಬಾಂಗ್ಲಾದೇಶ) ನೆಲ ಗಡಿಯ ಬಳಿಕ ಭಾರತ-ಬಾಂಗ್ಲಾದೇಶ ಗಡಿಯ ಎರಡನೇ ಐಸಿಪಿ ಆಗಿದೆ. ಅಲ್ಲದೆ ಇದು ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡ ಭೂ ಪ್ರವೇಶದ್ವಾರವಾಗಿದೆ. .

ಪೆಟ್ರಾಪೊಲೆ ಐ.ಸಿ.ಪಿ. ಸಿದ್ಧಗೊಳ್ಳುವುದರೊಂದಿಗೆ ಇದರ ಸಾಮರ್ಥ್ಯ ದುಪ್ಪಟ್ಟು ಆಗಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಸ್ಥಳೀಯ ವಾಣಿಜ್ಯ ಸಮುದಾಯಗಳಿಗೆ ಇದರಿಂದ ಸಮಯ ಮತ್ತು ವೆಚ್ಚ ಎರಡೂ ಉಳಿತಾಯವಾಗಿ ದೊಡ್ಡ ಲಾಭವಾಗಲಿದೆ. ಪೆಟ್ರಾಪೊಲೆ ಐ.ಸಿ.ಪಿ. ತ್ವರಿತ ಬೃಹತ್ ಆರ್ಥಿಕ ಏಕೀಕರಣಕ್ಕೆ ಮತ್ತು ಭಾರತ ಮತ್ತು ಬಾಂಗ್ಲಾದೇಶಗಳ ಸಂಪರ್ಕ ಸೇವೆಯನ್ನೂ ಒದಗಿಸಲಿದೆ.

AKT/AK