ಪಿಎಂಇಂಡಿಯಾ
ಪೆಸಿಫಿಕ್ ಪಿಂಚಣಿ ಮತ್ತು ಹೂಡಿಕೆ (ಪಿಪಿಐ) ಸಂಸ್ಥೆಯ ಅಧ್ಯಕ್ಷ ಶ್ರೀ ಲಿಯೋನೆಲ್ ಸಿ ಜಾನ್ಸನ್ ನೇತೃತ್ವದ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.
ನಿಯೋಗದ ಸದಸ್ಯರು ಭಾರತದಲ್ಲಿ ಆಗುತ್ತಿರುವ ಆರ್ಥಿಕ ಸುಧಾರಣೆಯ ವೇಗವನ್ನು ಪ್ರಶಂಸಿಸಿದರು, ಮತ್ತು ದೇಶದಲ್ಲಿರುವ ಪ್ರಗತಿಯ ಸಾಮರ್ಥ್ಯವನ್ನು ಒತ್ತಿ ಹೇಳಿದರು. ಎಫ್.ಡಿ.ಐ, ಜಿಎಸ್ಟಿಯಂಥ ವಿವಿಧ ಆರ್ಥಿಕ ವಿಚಾರಗಳು ಈ ಭೇಟಿಯ ವೇಳೆ ಚರ್ಚೆಗೆ ಬಂದವು.
ಪ್ರಧಾನಮಂತ್ರಿಯವರು ಭಾರತದಲ್ಲಿರುವ ವಿವಿಧ ಹೂಡಿಕೆಯ ಸಾಧ್ಯತೆಗಳ ಬಗ್ಗೆ ಒತ್ತಿ ಹೇಳಿದರು. ಸುಗಮವಾಗಿ ವಾಣಿಜ್ಯ ನಡೆಸುವುದಕ್ಕೆ ಕೈಗೊಂಡಿರುವ ಕ್ರಮಗಳು ಮತ್ತು ಇತ್ತೀಚಿನ ಸುಧಾರಣೆಗಳ ಕುರಿತೂ ಅವರು ಮಾತನಾಡಿದರು. ಭಾರತದ ಜನರ ಹೆಚ್ಚುತ್ತಿರುವ ಆಕಾಂಕ್ಷೆಗಳೊಂದಿಗೆ ದೃಢವಾದ ಆರ್ಥಿಕ ಮೂಲಭೂತತ್ವಗಳು ಹೂಡಿಕೆಯಲ್ಲಿ ಮಹತ್ವದ ಅವಕಾಶವನ್ನು ಪ್ರತಿನಿಧಿಸುತ್ತವೆ ಎಂದು ಅವರು ಹೇಳಿದರು. ನವೀಕರಿಸಬಹುದಾದ ಇಂಧನ ಮತ್ತು ಸಾವಯವ ಕೃಷಿ ವಲಯದಲ್ಲಿ ಹೂಡಿಕೆಯ ಸಾಮರ್ಥ್ಯವನ್ನು ಅವರು ಪ್ರತಿಪಾದಿಸಿದರು. ಪಿಪಿಐ ಸಂಸ್ಥೆ ಟ್ರಸ್ಟಿಯಾಗಿ ಬಂಡವಾಳ ಹೂಡುವ ಹಣವನ್ನು ಇಟ್ಟುಕೊಂಡಿರುವ ಅಂಶದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಟ್ರಸ್ಟಿತನದ ಪರಿಕಲ್ಪನೆಯನ್ನು ಭಾರತದಲ್ಲಿ ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ ಮತ್ತು ಇದನ್ನು ಮಹಾತ್ಮಾ ಗಾಂಧಿಯವರು ಕೂಡ ಪ್ರತಿಪಾದಿಸಿದ್ದರು ಎಂದರು.
****
A delegation from Pacific Pension and Investment Institute called on PM @narendramodi. PM highlighted various possibilities for investment in India. He spoke of the recent reforms and steps taken for ease of doing business. https://t.co/jJ1ni67odj pic.twitter.com/E1wbN4vtzb
— PMO India (@PMOIndia) November 6, 2017