ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಅಂಚೆ ಇಲಾಖೆ ಮತ್ತು ಪೋರ್ಚುಗಲ್ ಅಂಚೆ ನಡುವೆ ಜಂಟಿ ಅಂಚೆ ಚೀಟಿ ಬಿಡುಗಡೆ ಕುರಿತಂತೆ ಮಾಹಿತಿ ನೀಡಲಾಯಿತು.
ಭಾರತ ಮತ್ತು ಪೋರ್ಚುಗಲ್ ಅದ್ಭುತವಾದ ದ್ವಿಪಕ್ಷೀಯ ಸಂಬಂಧವನ್ನು ಹೊಂದಿದ್ದು, ಪರಸ್ಪರರು ಆಗಿಂದ್ದಾಗ್ಗೆ ಮತ್ತು ಸಕ್ರಿಯವಾಗಿ ವಿವಿಧ ವೇದಿಕೆಗಳಲ್ಲಿ ಮಾತುಕತೆಗಳನ್ನು ನಡೆಸುತ್ತಿದ್ದು, ಅದು ಎರಡೂ ರಾಷ್ಟ್ರಗಳಿಗೆ ಹಲವು ಸಮಾನ ಕಳಕಳಿಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಸಹಯೋಗವು ಫಲಪ್ರದ ಮತ್ತು ಎರಡೂ ರಾಷ್ಟ್ರಗಳಿಗೆ ಲಾಭದಾಯಕವಾಗಿದೆ ಮತ್ತು ಎರಡೂ ರಾಷ್ಟ್ರಗಳ ಸಂಬಂಧ ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಾ ಸಾಗಿದೆ. ಈ ಜಂಟಿ ಬಿಡುಗಡೆಯು ಎರಡೂ ರಾಷ್ಟ್ರಗಳ ಅಂಚೆ ಇಲಾಖೆಗಳಿಗೆ ಅಂಚೆ ಚೀಟಿಗಳ ಸಂಗ್ರಹಣಾ ಉತ್ಪಾದನೆಗೂ ನೆರವಾಗಲಿದೆ.