ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ಯಾರಿಸ್ ಒಪ್ಪಂದ (ಹವಾಮಾನ ಬದಲಾವಣೆ ಕುರಿತ)ವನ್ನು ಗಾಂಧಿ ಜಯಂತಿ ದಿನವಾದ 2016ರ ಅಕ್ಟೋಬರ್ 2ರಂದು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
2015ರ ಡಿಸೆಂಬರ್ 12ರಂದು 185 ರಾಷ್ಟ್ರಗಳು ಈ ಪ್ಯಾರಿಸ್ ಒಪ್ಪಂದವನ್ನು ಅಂಗೀಕರಿಸಿದ್ದವು ಮತ್ತು ಭಾರತವು 2016ರ ಏಪ್ರಿಲ್ 22ರಂದು ನ್ಯೂಯಾರ್ಕ್ ನಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಅಂಕಿತ ಹಾಕಿತ್ತು. ಈವರೆಗೆ 191 ರಾಷ್ಟ್ರಗಳು ಪ್ಯಾರಿಸ್ ಒಪ್ಪಂದಕ್ಕೆ ಅಂಕಿತ ಹಾಕಿವೆ. ಪ್ಯಾರಿಸ್ ಒಪ್ಪಂದದ ನಿಬಂಧನೆಗಳಂತೆ ಯಾವಾಗ 55 ರಾಷ್ಟ್ರಗಳು ಒಟ್ಟಾರೆ ಜಾಗತಿಕ ಇಂಗಾಲದ ಹೊರಸೂಸುವಿಕೆ ತಡೆಗೆ ಶೇಕಡ 55ರಷ್ಟು ಕೊಡುಗೆ ನೀಡುವುದನ್ನು ಸ್ಥಿರೀಕರಣ ಮಾಡುತ್ತವೋ ಆಗ ಈ ಒಪ್ಪಂದ ಜಾರಿಗೆ ಬರಲಿದೆ. ಈವರೆಗೆ 61 ರಾಷ್ಟ್ರಗಳು ಜಾಗತಿಕ ಒಟ್ಟಾರೆ ಹಸಿರು ಮನೆ ಅನಿಲ ಹೊರಸೂಸುವಿಕೆಗೆಯ ಶೇ.47.79ಕ್ಕೆ ಅನುಮೋದನೆ ಅಥವಾ ಅಂಗೀಕಾರ ನೀಡಿ ತಮ್ಮ ಒಪ್ಪಿಗೆಯನ್ನು ಖಾತ್ರಿ ಪಡಿಸಿವೆ.
ಒಪ್ಪಂದದ ಸ್ಥಿರೀಕರಣಕ್ಕೆ ಭಾರತ ಕೈಗೊಂಡಿರುವ ನಿರ್ಧಾರವು ದೇಶಗಳ ಒಟ್ಟು ಹೊಸಸೂಸುವಿಕೆಯ ಮಿತಿಯನ್ನು ಶೇ.51.89ರ ಸ್ಥಿರೀಕರಣಕ್ಕೆ ಒಯ್ಯಲಿದೆ. ಅದು ಪಡೆದುಕೊಂಡಿರುವ ಚಾಲನೆ ಮತ್ತು ಇತರ ಹಲವು ರಾಷ್ಟ್ರಗಳು ಈ ವರ್ಷಾಂತ್ಯದೊಳಗೆ ಒಪ್ಪಂದ ಸ್ಥಿರೀಕರಿಸುವ ಸಂಬಂಧ ವ್ಯಕ್ತಪಡಿಸಿರುವ ಇಚ್ಛೆಯನ್ನು ನೋಡಿದಾಗ ಈ ಒಪ್ಪಂದವವು ಶೀಘ್ರವೇ ಅನುಷ್ಠಾನಕ್ಕೆ ಬರಲಿದೆ ಎಂಬ ನಿರೀಕ್ಷೆ ಇದೆ ಮತ್ತು ಹವಾಮಾನ ಬದಲಾವಣೆ ಸಮಸ್ಯೆ ನಿವಾರಣೆಗೆ ಒಂದು ಜಾಗತಿಕ ಕ್ರಮದ ಭರವಸೆ ನೀಡಿದೆ.
ಒಪ್ಪಂದದ ಸ್ಥಿರೀಕರಣದ ತನ್ನ ನಿರ್ಧಾರದಿಂದಾಗಿ ಭಾರತವು, ಪ್ಯಾರಿಸ್ ಒಪ್ಪಂದವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ ದೇಶಗಳಲ್ಲಿ ಒಂದಾಗಲಿದೆ. ಪ್ಯಾರಿಸ್ ಒಪ್ಪಂದಕ್ಕೆ ಅಂತಾರಾಷ್ಟ್ರೀಯವಾಗಿ ಒಮ್ಮತ ಮೂಡಿಸಲು ಮಹತ್ವದ ಪಾತ್ರ ವಹಿಸಿದ ಭಾರತದ ಇಂದಿನ ನಿರ್ಧಾರವು, ಹವಾಮಾನ ನ್ಯಾಯ ಮತ್ತು ಪರಿಸರ ಸಂರಕ್ಷಣೆಯ ಜಾಗತಿಯ ಕಾಳಜಿಯ ಬದ್ಧತೆಯ ವಿಚಾರದಲ್ಲಿ ಭಾರತದ ಸ್ಪಂದನೆಯನ್ನು ಒತ್ತಿ ಹೇಳಲಿದೆ.
ಪ್ಯಾರಿಸ್ ಒಪ್ಪಂದದ ಸ್ಥಿರೀಕರಣಕ್ಕೆ ಒಪ್ಪಿಗೆ ಸೂಚಿಸುವ ಮೂಲಕ, ಸಂಪುಟವು, ಭಾರತದ ಅಭಿವೃದ್ಧಿ ಕಾರ್ಯಸೂಚಿ, ತನ್ನ ರಾಷ್ಟ್ರೀಯ ಕಾನೂನು, ಅನುಷ್ಠಾನ ಸಾಧನಗಳ ಲಭ್ಯತೆ,ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ತನ್ನ ಜಾಗತಿಕ ಬದ್ಧತೆ ಮತ್ತು ಊಹಿಸಬಹುದಾದ ಮತ್ತು ಕೈಗೆಟಕುವ ದರದಲ್ಲಿ ಶುದ್ಧ ಮೂಲದ ಇಂಧನ ಲಭ್ಯತೆಯ ನಿಟ್ಟಿನಲ್ಲಿ ಈ ಒಪ್ಪಂದವನ್ನು ಸ್ಥಿರೀಕರಿಸುತ್ತಿದೆ.
ಪ್ಯಾರಿಸ್ ಒಪ್ಪಂದವು 2020ರ ನಂತರದ ಹವಾಮಾನ ಕ್ರಮಗಳಿಗೆ ಸಂಬಂಧಿಸಿದ್ದಾಗಿದೆ. 2020ಕ್ಕೆ ಮುಂಚಿನ ಅವಧಿಯಲ್ಲಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕ್ಯೋಟೋ ಶಿಷ್ಟಾಚಾರದಂತೆ ನಡೆದುಕೊಳ್ಳಬೇಕು ಮತ್ತು ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವಯಂ ಸಂಕಲ್ಪ ಕೈಗೊಳ್ಳಬೇಕು.
AKT/VBA/SH