ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ನವ ದೆಹಲಿಯಲ್ಲಿ ಆಡಳಿತ ಪರವಾದ ಮತ್ತು ಸಕಾಲದಲ್ಲಿ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ನಡೆದ ಹದಿನಾಲ್ಕನೇ ಸಂವಾದದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನಮಂತ್ರಿಯವರು ಶಾಲಾ ಶಿಕ್ಷಣ ಮತ್ತು ಸಾಕ್ಷರತೆಗೆ ಸಂಬಂಧಿಸಿದ ಕುಂದುಕೊರತೆಗಳ ನಿರ್ವಹಣೆ ಮತ್ತು ಪರಿಹಾರದ ಪ್ರಗತಿಯ ಬಗ್ಗೆ ಪರಾಮರ್ಶಿಸಿದರು. ಈಗ ಈ ಸಮಸ್ಯೆಗಳನ್ನು ಸರ್ಕಾರ ಪರಿಹರಿಸುತ್ತದೆ ಎಂಬ ನಿರೀಕ್ಷೆ ಜನರಲ್ಲಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳ ಕುಂದುಕೊರತೆ ನಿವಾರಿಸಲು ಕೈಗೊಂಡಿರುವ ಕ್ರಮಗಳನ್ನು ವ್ಯವಸ್ಥೀಕರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಪ್ರಧಾನಮಂತ್ರಿಯವರು ನಿರ್ದಿಷ್ಟವಾಗಿ ತಿಳಿಸಿದರು. ಶಾಲಾ ಮಕ್ಕಳು ಅನಾನುಕೂಲತೆ ಎದುರಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಲಭ್ಯ ತಂತ್ರಜ್ಞಾನ ಬಳಸಿಕೊಳ್ಳುವಂತೆ ಪ್ರಧಾನಿ ಸೂಚಿಸಿದರು. ಉದಾಹರಣೆ ನೀಡಿದ ಅವರು, ತಾವು ಈ ಹಿಂದೆ ಎಲ್ಲ ಸಚಿವಾಲಯಗಳಿಗೂ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಸೂಚಿಸಿದ್ದನ್ನು ಸ್ಮರಿಸಿದರು. ಇದು ಪರೀಕ್ಷಾ ಕೇಂದ್ರಗಳನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ ಮತ್ತು ಅದು ತೊಡಕನ್ನು ಕಡಿಮೆ ಮಾಡುತ್ತದೆ ಎಂದರು.
ಸುಗಮ್ಯ ಭಾರತ ಅಭಿಯಾನದ ಪ್ರಗತಿಯನ್ನು ಪರಾಮರ್ಶಿಸಿದ ಪ್ರಧಾನಮಂತ್ರಿಯವರಿಗೆ, ಶಾಲೆಗಳು, ಸಾರ್ವಜನಿಕ ಕಟ್ಟಡಗಳು ಮತ್ತು ರೈಲ್ವೆ ನಿಲ್ದಾಣ ಇತ್ಯಾದಿಯಲ್ಲಿ ಆಗಿರುವ ಪ್ರವೇಶ ಸೌಲಭ್ಯದ ಸುಧಾರಣೆಯ ಪ್ರಗತಿಯ ಬಗ್ಗೆ ವಿವರಿಸಲಾಯಿತು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ತೋರಲಾಗಿರುವ ಸಂವೇದನೆಗೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಆಧಾರ್ ನೋಂದಣಿಯ ಬಗ್ಗೆ ನೀಡಲಾದ ವಿವರಣೆಯ ವೇಳೆ, ಈಗ ಒಟ್ಟಾರೆ ನೋಂದಣಿ 105 ಕೋಟಿಯ ಸಮೀಪ ಇರುವುದನ್ನು ಗಮನಿಸಿದರು. ಮತ್ತು ಈ ನಿಟ್ಟಿನಲ್ಲಿ ಹಿಂದುಳಿದಿರುವ ಈಶಾನ್ಯ ರಾಜ್ಯಗಳಿಗೆ ಗಮನ ಹರಿಸುವಂತೆ ತಿಳಿಸಿದರು. ವಿದ್ಯಾರ್ಥಿ ವೇತನ ಮತ್ತು ಇತರ ಸೌಲಭ್ಯಗಳು ತ್ವರಿತವಾಗಿ ವಿದ್ಯಾರ್ಥಿಗಳಿಗೆ ದೊರಕಲು 5ರಿಂದ 18 ವರ್ಷ ವಯೋಮಾನದ ಮಕ್ಕಳ ನೋಂದಣಿಯನ್ನು ತ್ವರಿತಗೊಳಿಸುವಂತೆ ಪ್ರಧಾನಿಯವರು ರಾಜ್ಯಗಳಿಗೆ ಮನವಿ ಮಾಡಿದರು.
ಪಂಜಾಬ್, ಹಿಮಾಚಲ ಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ,ಉತ್ತರ ಪ್ರದೇಶ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಮಹಾರಾಷ್ಟ್ರ ಸೇರಿದಂತೆ ರಸ್ತೆ, ರೈಲ್ವೆ, ಇಂಧನ ವಲಯ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನೂ ಪ್ರಧಾನಮಂತ್ರಿಯವರು ಪರಾಮರ್ಶಿಸಿದರು. 1981-82ರಲ್ಲಿ ಮೊದಲ ಬಾರಿಗೆ ಮಂಜೂರಾದ ಮತ್ತು ಬಾಕಿ ಉಳಿದಿರುವ ನಂಗಲ್ ಧಾಮ್ –ತಲ್ವಾರಾ ರೈಲ್ವೆ ಮಾರ್ಗ ಯೋಜನೆಯ ಬಗ್ಗೆಯೂ ಪರಾಮರ್ಶಿಸಲಾಯಿತು.
ತಳಮಟ್ಟದಲ್ಲಿ ಕೆಲಸ ನೀಡುವ ಆ ಮೂಲಕ ಯೋಜನೆಯ ಜಾರಿಯಲ್ಲಿ ಮತ್ತಷ್ಟು ವಿಳಂಬವಾಗುವುದನ್ನು ತಪ್ಪಿಸುವ ಅಗತ್ಯದ ವಿಚಾರದ ಬಗ್ಗೆ ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಪ್ರಧಾನಿ ತಿಳಿಸಿದರು.
At the Pragati session today, reviewed progress of handling and resolution of grievances related to school education.
— Narendra Modi (@narendramodi) August 24, 2016
Discussed Aadhaar related matters. Glad that in Aadhaar enrolment, special attention is being given to Northeast. https://t.co/4eYqTbWvJC
— Narendra Modi (@narendramodi) August 24, 2016