ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರ ಲೇಖನವನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿಯವರ 25 ವರ್ಷಗಳ ನಾಯಕತ್ವವು ಭಾರತದ ಅಭಿವೃದ್ಧಿ ಮತ್ತು ಅದರ ಜನರ ಸಬಲೀಕರಣದ ಮೇಲೆ ಹೇಗೆ ಗಮನ ಹರಿಸಿದೆ ಎಂಬುದನ್ನು ಈ ಲೇಖನವು ತಿಳಿಸುತ್ತದೆ.
ಮೂಲಸೌಕರ್ಯ ಮತ್ತು ಕಲ್ಯಾಣದಿಂದ ತಂತ್ರಜ್ಞಾನ, ನಾವೀನ್ಯತೆ ಮತ್ತು ಭಾರತದ ಜಾಗತಿಕ ಸ್ಥಾನಮಾನದವರೆಗೆ, ಈ ವರ್ಷಗಳು ವಿಶಾಲವಾದ ಪರಿವರ್ತನೆಯನ್ನು ಕಂಡಿವೆ, ಇದು ಭಾರತದ ಪ್ರಗತಿಶೀಲತೆಯಿಂದ ಮಹತ್ವಾಕಾಂಕ್ಷೆ ಮತ್ತು ವಿಶ್ವಾಸದವರೆಗಿನ ಪ್ರಯಾಣವನ್ನು ಗುರುತಿಸುತ್ತದೆ ಎಂದು ಶ್ರೀ ನಾಯ್ಡು ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:
“ಪ್ರಧಾನಮಂತ್ರಿ @narendramodi ಅವರ 25 ವರ್ಷಗಳ ನಾಯಕತ್ವವು ಭಾರತದ ಅಭಿವೃದ್ಧಿ ಮತ್ತು ಅದರ ಜನರ ಸಬಲೀಕರಣದ ಮೇಲೆ ಕೇಂದ್ರೀಕರಿಸಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ @ncbn ಬರೆದಿದ್ದಾರೆ. ಮೂಲಸೌಕರ್ಯ ಮತ್ತು ಕಲ್ಯಾಣದಿಂದ ತಂತ್ರಜ್ಞಾನ, ನಾವೀನ್ಯತೆ ಮತ್ತು ಭಾರತದ ಜಾಗತಿಕ ಸ್ಥಾನಮಾನದವರೆಗೆ, ಈ ವರ್ಷಗಳಲ್ಲಿ ದೇಶವು ವಿಶಾಲವಾದ ರೂಪಾಂತರವನ್ನು ಕಂಡಿವೆ.
ಪ್ರಗತಿಶೀಲತೆಯಿಂದ ಮಹತ್ವಾಕಾಂಕ್ಷೆ ಮತ್ತು ವಿಶ್ವಾಸದವರೆಗಿನ ಭಾರತದ ಪ್ರಯಾಣವನ್ನು ವಿವರಿಸುವ ಈ ಲೇಖನವನ್ನು ಓದಿ.”
*****
PM @narendramodi's 25 years in leadership have focused on India's development and the empowerment of its people, writes Andhra Pradesh CM Shri @ncbn. From infrastructure and welfare to technology, innovation and India's global stature, these years have seen a broad transformation. Do read this article on India's journey from incrementalism to ambition and confidence. https://t.co/oeMXuMBEz5
— PMO India (@PMOIndia) October 7, 2026