Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಇಂಧನ ಪರಿವರ್ತನೆ, ವ್ಯಾಪಕ ಲಭ್ಯತೆ ಮತ್ತು ಇಂಧನ ಸುರಕ್ಷತೆಯನ್ನು ಪ್ರಮುಖವಾಗಿ ಬಿಂಬಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಭಾರತದ ಇಂಧನ ಯಶೋಗಾಥೆಯನ್ನು ಪ್ರಮುಖವಾಗಿ ಬಿಂಬಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ವ್ಯಾಪಕ ಲಭ್ಯತೆ, ವೇಗದ ನವೀಕರಿಸಬಹುದಾದ ಬೆಳವಣಿಗೆ ಮತ್ತು ಹೆಚ್ಚಿನ ಇಂಧನ ಸುರಕ್ಷತೆಯ ಅಂಶಗಳನ್ನು ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ.

ವಿದ್ಯುತ್ ಮತ್ತು ಶುದ್ಧ ಅಡುಗೆ ಇಂಧನದಿಂದ ಹಿಡಿದು ಸೌರಶಕ್ತಿ, ಪರಮಾಣು ವಿದ್ಯುತ್ ಹಾಗೂ ಜೈವಿಕ ಇಂಧನಗಳವರೆಗೆ ಭಾರತವು ಹೆಚ್ಚು ವೈವಿಧ್ಯಮಯ ಮತ್ತು ಸದೃಢ ಇಂಧನ ವ್ಯವಸ್ಥೆಯನ್ನು ಸ್ಥಿರವಾಗಿ ನಿರ್ಮಿಸುತ್ತಿದೆ ಎಂಬುದನ್ನು ಲೇಖನ ವಿವರಿಸುತ್ತದೆ. ಇದೇ ವೇಳೆ, ಜಾಗತಿಕ ಇಂಧನ ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಭಾರತವು ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಲೇಖನ ತಿಳಿಸುತ್ತದೆ.

ಪ್ರಧಾನಮಂತ್ರಿಗಳ ಕಚೇರಿ ತನ್ನ  X ಪೋಸ್ಟ್ ನಲ್ಲಿ ಹೀಗೆ ಹೇಳಿದೆ:

“ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ @narendramodi ಅವರ ನಾಯಕತ್ವದಡಿಯಲ್ಲಿ ಭಾರತದ ಇಂಧನ ಕಥೆಯು ವ್ಯಾಪಕ ಲಭ್ಯತೆ, ವೇಗದ ನವೀಕರಿಸಬಹುದಾದ ಬೆಳವಣಿಗೆ ಮತ್ತು ಹೆಚ್ಚಿನ ಇಂಧನ ಸುರಕ್ಷತೆಯನ್ನು ಹೊಂದಿದೆ.

ವಿದ್ಯುತ್ ಮತ್ತು ಶುದ್ಧ ಅಡುಗೆಯಿಂದ ಸೌರ, ಪರಮಾಣು ಶಕ್ತಿ ಮತ್ತು ಜೈವಿಕ ಇಂಧನಗಳವರೆಗೆ, ಭಾರತವು ಹೆಚ್ಚು ವೈವಿಧ್ಯಮಯ ಮತ್ತು ಬಲವಾದ ಇಂಧನ ವ್ಯವಸ್ಥೆಯನ್ನು ಸ್ಥಿರವಾಗಿ ನಿರ್ಮಿಸುತ್ತಿದೆ.

ಈ ಪಯಣವು ಜಾಗತಿಕ ಇಂಧನ ವ್ಯಾಪಾರ ಮತ್ತು ತಂತ್ರಜ್ಞಾನದಲ್ಲಿ ಭಾರತಕ್ಕೆ ದೊಡ್ಡ ಪಾತ್ರವನ್ನು ನೀಡುತ್ತಿದೆ.”

 

*****