ಪಿಎಂಇಂಡಿಯಾ

ರಷ್ಯಾದ ಉಪ ಪ್ರಧಾನಮಂತ್ರಿ ಶ್ರೀ ಡಿಮಿಟ್ರಿ ರೊಗೋಜಿನ್ ಅವರು ಇಂದು ಮಧ್ಯಾಹ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಿಯವರು, ಈ ವರ್ಷ ಮೂರನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ರಷ್ಯಾದ ಉಪ ಪ್ರಧಾನಿ ರೊಗೋಜಿನ್ ಅವರನ್ನು ಸ್ವಾಗತಿಸಿದರು. ಈ ವರ್ಷ ಉನ್ನತ ಮಟ್ಟದ ಮಾತುಕತೆಯಲ್ಲಿನ ಹೆಚ್ಚಳದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಕಳೆದ ಜೂನ್ ತಿಂಗಳಿನಲ್ಲಿ ವಾರ್ಷಿಕ ದ್ವಿಪಕ್ಷೀಯ ಸಭೆಗಾಗಿ ತಾವು ಸೇಂಟ್ ಪೀಟರ್ಸ್ ಬರ್ಗ್ ಗೆ ನೀಡಿದ್ದ ಭೇಟಿಯನ್ನು ಆಪ್ತವಾಗಿ ಸ್ಮರಿಸಿದರು.
ಪ್ರಧಾನಮಂತ್ರಿಯವರು ಮತ್ತು ಉಪ ಪ್ರಧಾನಮಂತ್ರಿ ರೊಗೋಜಿನ್ ಅವರು ಸ್ಥಿರವಾದದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ ಮತ್ತು ವೈವಿಧ್ಯೀಕರಣ ಕುರಿತು, ಅದರಲ್ಲೂ ನಿರ್ದಿಷ್ಟವಾಗಿ ಇಂಧನ ಕ್ಷೇತ್ರದ ಅಸಾಧಾರಣ ಸಹಯೋಗ ಮತ್ತು ಉನ್ನತ ತಂತ್ರಜ್ಞಾನ ಸಹಕಾರದ ಸಮಾನ ಅನ್ವೇಷಣೆಗಳ ಬಗ್ಗೆ ಚರ್ಚಿಸಿದರು.
ಶ್ರೀ ಡಿಮಿಟ್ರಿ ರೊಗೋಜಿನ್ ಅವರು ಅಧ್ಯಕ್ಷ ಪುಟಿನ್ ಅವರ ಶುಭಾಶಯಗಳನ್ನು ಪ್ರಧಾನಮಂತ್ರಿಯವರಿಗೆ ಸಲ್ಲಿಸಿದರು, ಪ್ರಧಾನಮಂತ್ರಿಯವರೂ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.
*****
Had a productive meeting with the Deputy Prime Minister of Russia, Mr. Dmitry Rogozin. This year saw increased high-level exchanges between India and Russia, which benefits our nations. We discussed cooperation in areas including energy and technology. https://t.co/9entqNF01c
— Narendra Modi (@narendramodi) December 23, 2017