Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರೊಂದಿಗೆ ಶ್ರೀಲಂಕಾದ ಅಧ್ಯಕ್ಷ ಶ್ರೀ ಮೈತ್ರಿಪಾಲ ಸಿರಿಸೇನಾ ಮಾತುಕತೆ, ಉರಿ ಭಯೋತ್ಪಾದಕ ದಾಳಿಗೆ ಸಂತಾಪ


ಶ್ರೀಲಂಕಾದ ಅಧ್ಯಕ್ಷ ಶ್ರೀ ಮೈತ್ರಿಪಾಲ ಸಿರಿಸೇನಾ ಅವರು ಈಗ್ಗೆ ಸ್ವಲ್ಪ ಹೊತ್ತಿನ ಮೊದಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯ ಮೂಲಕ ಮಾತುಕತೆ ನಡೆಸಿ, ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂತಾಪ ಸೂಚಿಸಿದ್ದಾರೆ.

ಅಧ್ಯಕ್ಷ ಸಿರಿಸೇನಾ ಅವರು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿದರು ಮತ್ತು ಘಟನೆಯಲ್ಲಿ ಬಲಿಯಾದವರ ಕುಟುಂಬಕ್ಕೆ ಸಾಂತ್ವನ ಸಲ್ಲಿಸಿದರು.

ವಲಯದಲ್ಲಿ ಭಯೋತ್ಪಾದನೆಯ ಉಪದ್ರವವನ್ನು ಕೊನೆಗಾಣಿಸಲು ವಲಯದ ಎಲ್ಲ ರಾಷ್ಟ್ರಗಳ ನಡುವೆ ಸುಸ್ಥಿರ ಸಹಕಾರದ ಅಗತ್ಯದ ಬಗ್ಗೆ ನಾಯಕರು ಮಾತನಾಡಿದರು.

AKT/AK