Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರಿಂದ ಆ್ಯಂಟಿಯೋಕ್ ಮತ್ತು ಎಲ್ಲಾ ಪೂರ್ವ ಚರ್ಚ್ ಗಳ ಪರಮೋಚ್ಛ ಧರ್ಮ ಗುರು ಇಗ್ನೇಷಿಯಸ್ ಆಫ್ರೆಮ್ – II ಅವರ ಭೇಟಿ


ಆ್ಯಂಟಿಯೋಕ್ ಮತ್ತು ಎಲ್ಲಾ ಪೂರ್ವ ಚರ್ಚ್ ಗಳ ಧರ್ಮಗುರು ಹಾಗೂ ಸಾರ್ವತ್ರಿಕ ಸಿರಿಯಾಕ್ ಆರ್ಥೊಡಾಕ್ಸ್ ಚರ್ಚ್‌ ನ ಸರ್ವೋಚ್ಚ ಮುಖ್ಯಸ್ಥರಾದ ಪರಮಪೂಜ್ಯ ಮೋರನ್ ಮೋರ್ ಇಗ್ನೇಷಿಯಸ್ ಆಫ್ರೆಮ್ – II ಅವರನ್ನು ಭೇಟಿಯಾದುದು ತಮ್ಮ ಸೌಭಾಗ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಭೇಟಿಯ ಸಮಯದಲ್ಲಿ ಪ್ರಧಾನಮಂತ್ರಿಗಳು ಮತ್ತು ಪರಮಪೂಜ್ಯರು ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಉತ್ತಮ ಚರ್ಚೆ ನಡೆಸಿದರು.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ;

“ಆ್ಯಂಟಿಯೋಕ್ ಹಾಗೂ ಪೂರ್ವದ ಎಲ್ಲಾ ಭಾಗಗಳ ಚರ್ಚ್ ಮುಖ್ಯಸ್ಥರು ಹಾಗೂ ಸಾರ್ವತ್ರಿಕ ಸಿರಿಯಾಕ್ ಆರ್ಥೊಡಾಕ್ಸ್ ಚರ್ಚ್‌ ನ ಸರ್ವೋಚ್ಚ ಮುಖ್ಯಸ್ಥರಾದ ಪರಮಪೂಜ್ಯ ಮೋರನ್ ಮೋರ್ ಇಗ್ನೇಷಿಯಸ್ ಆಫ್ರೆಮ್ II ಅವರನ್ನು ಭೇಟಿ ಮಾಡಿದುದು ನನ್ನ ಸೌಭಾಗ್ಯ.

ವಿವಿಧ ವಿಷಯಗಳ ಕುರಿತು ನಾವು ಉತ್ತಮ ಚರ್ಚೆ ನಡೆಸಿದೆವು.

 

*****