Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರಿಂದ ರಷ್ಯಾ ಅಧ್ಯಕ್ಷರಿಗೆ ಸ್ವಾಗತ

ಪ್ರಧಾನಮಂತ್ರಿ ಅವರಿಂದ ರಷ್ಯಾ ಅಧ್ಯಕ್ಷರಿಗೆ ಸ್ವಾಗತ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರಿಗೆ ಭಾರತದಲ್ಲಿ ಸ್ವಾಗತ ನೀಡಿದ್ದಾರೆ.
 
“ಇಂದು ಸಂಜೆ ಮತ್ತು ನಾಳೆಯ ನಮ್ಮ ಸಂವಾದಗಳಿಗಾಗಿ ಎದುರು ನೋಡುತ್ತಿದ್ದೇನೆ. ಭಾರತ-ರಷ್ಯಾ ಮೈತ್ರಿಯು ಸಮಯ ಪರೀಕ್ಷಿತವಾದ ನಮ್ಮ ಜನರಿಗೆ ಹೆಚ್ಚು ಅನುಕೂಲಕರವಾದ ಬಾಂಧವ್ಯವಾಗಿದೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರಾದ ಪುಟಿನ್ ಅವರಿಗೆ ರಷ್ಯನ್ ಭಾಷೆಯ ಭಗವದ್ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು. ಗೀತೆಯ ಬೋಧನೆಗಳು ಪ್ರಪಂಚದಾದ್ಯಂತದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ನನ್ನ ಸ್ನೇಹಿತ ಅಧ್ಯಕ್ಷರಾದ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗಿದೆ. ಇಂದು ಸಂಜೆ ಮತ್ತು ನಾಳೆಯ ನಮ್ಮ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತ-ರಷ್ಯಾ ಸ್ನೇಹವು ಕಾಲಾತೀತವಾಗಿದ್ದು, ನಮ್ಮ ಜನರಿಗೆ ಹೆಚ್ಚು ಅನುಕೂಲಕರವಾಗಿದೆ.”

@KremlinRussia_E

“Я рад приветствовать в Дели своего друга – Президента Путина. С нетерпением жду наших встреч сегодня вечером и завтра. Дружба между Индией и Россией проверена временем; она принесла огромную пользу нашим народам.”

“ನನ್ನ ಸ್ನೇಹಿತ, ಅಧ್ಯಕ್ಷರಾದ ಪುಟಿನ್ ಅವರನ್ನು 7, ಲೋಕ ಕಲ್ಯಾಣ್ ಮಾರ್ಗಕ್ಕೆ ಸ್ವಾಗತಿಸಿದೆ.”

“Поприветствовал моего друга, Президента Путина, на Лок Калян Марг, 7.”

“ಅಧ್ಯಕ್ಷರಾದ ಪುಟಿನ್ ಅವರಿಗೆ ರಷ್ಯನ್ ಭಾಷೆಯಲ್ಲಿರುವ ಗೀತೆಯ ಪ್ರತಿಯನ್ನು ನೀಡಿದೆ. ಗೀತೆಯ ಬೋಧನೆಗಳು ಪ್ರಪಂಚದಾದ್ಯಂತದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲಿವೆ.” 

@KremlinRussia_E

“Подарил Президенту Путину экземпляр Бхагавад-гиты на русском языке. Учения Гиты вдохновляют миллионы людей по всему миру.”

@KremlinRussia_E

 

*****