ಪಿಎಂಇಂಡಿಯಾ
ಗೌರವಾನ್ವಿತ ಕೀನ್ಯಾದ ಅಧ್ಯಕ್ಷರಾದ ಶ್ರೀ ಉಹುರು ಕೀನ್ಯಾಟ್ಟ ಅವರೆ, ಸಂಪುಟ ಕಾರ್ಯದರ್ಶಿಗಳೆ, ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಮತ್ತು ಸಂಘಗಳ ಅಧ್ಯಕ್ಷರೆ, ಭಾರತ ಮತ್ತು ಕೀನ್ಯಾದ ವಾಣಿಜ್ಯ ಸಮುದಾಯದ ಗೆಳೆಯರೆ, ಬಂಧು ಭಗಿನಿಯರೆ,
ಪ್ರಧಾನಮಂತ್ರಿಯಾಗಿ ಕೀನ್ಯಾಗೆ ಮೊದಲ ಭೇಟಿ ಅಂಗವಾಗಿ ನಿಮ್ಮ ಮುಂದಿರುವುದು ನನಗೆ ಸಂತಸ ತಂದಿದೆ. ಭಾರತೀಯರು ಅದರಲ್ಲೂ ವಿಶೇಷವಾಗಿ ಗುಜರಾತಿಗಳಿಗೆ ಕೀನ್ಯಾ ಎರಡನೇ ಮನೆಯಾಗಿದೆ. ಆ ಪ್ರಕಾರ ನಾನು ಈ ಮಹಾನ್ ದೇಶಕ್ಕೆ ಭೇಟಿ ನೀಡುತ್ತಿರುವುದು ತಡವಾಗಿದೆ. ಭಾರತದ ಪ್ರಧಾನಿಯೊಬ್ಬರು ಕೀನ್ಯಾಗೆ ಭೇಟಿ ನೀಡಿದ 35 ವರ್ಷಗಳ ನಂತರ ಇದೀಗ ನಾನು ಭೇಟಿ ನೀಡುತ್ತಿದ್ದೇನೆ. ವೈಯಕ್ತಿಕವಾಗಿ ಕೀನ್ಯಾದೊಂದಿಗೆ ಉತ್ತಮ ಸಂಬಂಧವನ್ನು ನಾನು ಕಾಯ್ದುಕೊಂಡಿದ್ದೇನೆ. ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ 2008ರಲ್ಲಿ ನಾನು ಕೀನ್ಯಾಗೆ ಭೇಟಿ ನೀಡಿದ್ದೆ, ಅಲ್ಲದೆ ನಾವು ಗುಜರಾತ್ಗೆೆ ಇಲ್ಲಿಂದ ಹಲವು ನಿಯೋಗಗಳನ್ನು ಸ್ವಾಗತಿಸಿದ್ದೇವೆ.
ಒಟ್ಟಾರೆ ಸ್ವಾತಂತ್ರ್ಯಾನಂತರ ಸ್ಥಿರತೆ ಮತ್ತು ಸಮಗ್ರ ಅಭಿವೃದ್ಧಿ ಕಾಯ್ದುಕೊಂಡಿರುವ ಕೀನ್ಯಾದ ನಾಯಕರು ಹಾಗೂ ಜನರನ್ನು ನಾನು ಅಭಿನಂದಿಸುತ್ತೇನೆ. ಕೀನ್ಯಾದ ಆರ್ಥಿಕತೆ ಹಾಗೂ ಅದರ ಮೂಲಸೌಕರ್ಯದಿಂದಾಗಿ ಅದು ಈ ಪ್ರದೇಶದಲ್ಲಿ ಪ್ರಭಾವ ಬೆಳೆಸಿಕೊಂಡಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾದ ಕೀನ್ಯಾ ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ಕೇಂದ್ರ ಕಚೇರಿ ಆತಿಥ್ಯ ವಹಿಸಿರುವ ಏಕೈಕ ದೇಶ.
ಗೆಳೆಯರೆ,
ಭಾರತ ಮತ್ತು ಕೀನ್ಯಾ ಹಲವು ಕಾರಣಗಳಿಂದಾಗಿ ವಿಶೇಷ ಸಂಬಂಧವನ್ನು ಹೊಂದಿವೆ.
• 19 ಹಾಗೂ 20ನೇ ಶತಮಾನದಲ್ಲಿ ರೈಲ್ವೆ ನಿರ್ಮಾಣಕ್ಕಾಗಿ ಸಹಸ್ರಾರು ಭಾರತೀಯರನ್ನು ಇಲ್ಲಿಗೆ ಕರೆತರಲಾಯಿತು.
• ವಸಾಹತುಶಾಹಿ ವಿರುದ್ಧ ಹೋರಾಡಲು ಮಹಾತ್ಮ ಗಾಂಧೀಜಿ ಎರಡೂ ದೇಶಗಳಿಗೂ ಸ್ಫೂರ್ತಿ.
• ಕೀನ್ಯಾದಲ್ಲಿ 1953 ರಿಂದ ಭಾರತೀಯ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ.
• ನಮ್ಮ ದೇಶದ ಅಸ್ಸಾಂನಿಂದ ತಂದು ಇಲ್ಲಿನ ಕೆರಿಚೋ ಪ್ರದೇಶದಲ್ಲಿ ಮೊದಲ ಚಹಾ ತೋಟಗಳನ್ನು ಸ್ಥಾಪಿಸಲಾಗಿದೆ.
• ಕೀನ್ಯಾಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಭಾರತೀಯರೇ ಅತ್ಯಧಿಕ, ಅಂದರೆ ಮೂರನೇ ಅತಿದೊಡ್ಡ ಪ್ರವಾಸಿಗರು ಭಾರತೀಯರು.
• ಜೀವನ ನಡೆಸಲು, ಕಲಿಯಲು ಮತ್ತು ದುಡಿಯಲು ಭಾರತ ಅತ್ಯಂತ ಸೂಕ್ತ ತಾಣ ಎಂದು ನಿಮ್ಮ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಪರಿಗಣಿಸಿದ್ದಾರೆ.
• ಇದು ಅಚ್ಚರಿಯಲ್ಲ ಆದರೂ ನಿಮ್ಮ ಸ್ವಹೀಲಿ ಭಾಷೆಯಲ್ಲಿನ ಹಲವು ಪದಗಳ ಮೂಲ ಭಾರತೀಯ ಭಾಷೆಗಳದ್ದು.
• ಹಿಂದೂ ಮಹಾಸಾಗರದೊಂದಿಗೆ ಉಭಯ ರಾಷ್ಟ್ರಗಳು ಅತಿ ಹಿಂದಿನಿಂದಲೂ ಕರಾವಳಿಯ ಸಂಪರ್ಕವನ್ನು ಹೊಂದಿವೆ.
• ಹಲವು ಭಾರತೀಯ ಕಂಪನಿಗಳು ಕೀನ್ಯಾವನ್ನು ತಮ್ಮ ಮೂಲಸ್ಥಾನವನ್ನಾಗಿ ಮಾಡಿಕೊಂಡು ಅಲ್ಲಿಂದ ಇಡೀ ಪೂರ್ವ ಆಫ್ರಿಕಾದಲ್ಲಿ ವಹಿವಾಟು ನಡೆಸುತ್ತಿವೆ.
ಗೌರವಾನ್ವಿತ ಅಧ್ಯಕ್ಷರೆ, ನಿಮ್ಮ ಸರ್ಕಾರ ದಿನನಿತ್ಯದ ಜೀವನದಲ್ಲಿ ಸೌರಶಕ್ತಿ ಬಳಕೆಗೆ ಹೆಚ್ಚಿನ ಒತ್ತು ನೀಡಿರುವ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ನಾವೂ ಸಹ ಮಹತ್ವದ ನವೀಕರಿಸಬಹುದಾದ ಇಂಧನ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ಭಾರತ ಮತ್ತು ಕೀನ್ಯಾ ಯಥೇಚ್ಛ ಸೌರಶಕ್ತಿಯ ಅನುಗ್ರಹ ಪಡೆದಿವೆ. ಜಾಗತಿಕ ತಾಪಮಾನಕ್ಕೆ ನಿಜವಾದ ಪರಿಹಾರ ಎಂದರೆ ಸೌರಶಕ್ತಿ. ದೂರದ ಗುಡ್ಡಗಾಡು ಪ್ರದೇಶದ ಗ್ರಾಮಗಳು ಮತ್ತು ಜನವಸತಿ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಒಳ್ಳೆಯ ಕಾರ್ಯತಂತ್ರವಾಗಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸೌರ ಒಪ್ಪಂದದನ್ವಯ ನಾವು ನಿಮ್ಮ ಜತೆ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದೇವೆ.
ಅದೇ ರೀತಿ ಉಭಯ ದೇಶಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಮತ್ತೊಂದು ಕ್ಷೇತ್ರವೆಂದರೆ ಆರೋಗ್ಯ ವಲಯ. ಕೀನ್ಯಾದ ಸಾವಿರಾರು ರೋಗಿಗಳು ಭಾರತದಲ್ಲಿ ಯಶಸ್ವಿ ಚಿಕಿತ್ಸೆ ಪಡೆದು, ಸ್ವದೇಶಕ್ಕೆ ವಾಪಸ್ಸಾಗಿರುವ ಬಗ್ಗೆ ನಮಗೆ ಸಂತೋಷವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಅನುಭವವನ್ನು ಪ್ರತಿಬಿಂಬಿಸಲು ಕೀನ್ಯಾ ಆಸಕ್ತಿ ಹೊಂದಿದೆ ಮತ್ತು ಅದು ಈ ಪ್ರದೇಶದಲ್ಲಿ ವೈದ್ಯಕೀಯ ತಾಣವಾಗಿ ರೂಪುಗೊಳ್ಳಲಿದೆ. ಈ ನಿಟ್ಟಿನಲ್ಲಿ ನಾವು ನಿಮಗೆ ಸಹಾಯ ನೀಡಲು ಸಂತೋಷವಾಗುತ್ತದೆ.
ನಮ್ಮ ಸಂಬಂಧದ ಆಳ ಮತ್ತು ಸಾಮಥ್ರ್ಯವನ್ನು ಅಳೆಯುವ ಕೆಲವು ಮಾನದಂಡಗಳು ಹೀಗಿವೆ.
ಗೆಳೆಯರೆ,
ಹಿಂದಿನ ನಮ್ಮ ನಿಮ್ಮ ಸಂಕಟ ಒಂದೇ ಆಗಿದೆ.
ನಮ್ಮ ಸಮಸ್ಯೆ ನಿಮ್ಮ ಸಮಸ್ಯೆಗಳು ಒಂದೆ.
ಇಬ್ಬರಿಗೂ ಸಾಮಾನ್ಯ ವಿರೋಧಿಗಳಿದ್ದಾರೆ. ಹಿಂದೆ ವಸಾಹತುಶಾಹಿ
ಇದ್ದರೆ ಈಗ ಬಡತನ ಎದುರಿಸಬೇಕಾಗಿದೆ.
ಹಿಂದೆ ನಾವು ಒಗ್ಗೂಡಿ ಕೆಲಸ ಮಾಡಿದ್ದೇವೆ. ಈಗಲೂ ಸಹ ನಾವು ಅದೇ ರೀತಿ ಕಾರ್ಯನಿರ್ವಹಿಸಬೇಕಿದೆ. ಕೀನ್ಯಾದಂತೆ ಭಾರತವೂ ಸಹ ಯುವ ದೇಶವಾಗಿದೆ. ನಿಮ್ಮ ಮಾನವ ಸಂಪನ್ಮೂಲಕ್ಕೆ ಆಫ್ರಿಕಾದಲ್ಲಿ ಭಾರೀ ಬೇಡಿಕೆ ಇದೆ. ಅದೇ ರೀತಿ ಭಾರತದ ಮಾನವ ಸಂಪನ್ಮೂಲಕ್ಕೆ ವಿಶ್ವದೆಲ್ಲೆಡೆ ಬೇಡಿಕೆ ಇದೆ. ಈ ಮಾನವ ಸಂಪನ್ಮೂಲ ಮೂಲವನ್ನು ಸರಿಯಾಗಿ ಬಳಸಿಕೊಂಡು ತರಬೇತಿ ನೀಡಿದರೆ ಅದು ಇಡೀ ವಿಶ್ವಕ್ಕೆ ಸೇವೆ ಸಲ್ಲಿಸುತ್ತದೆ.
ಇಂದು ಭಾರತ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಗಳಲ್ಲಿ ಒಂದಾಗಿದೆ. ನಾವು ಕೇವಲ ಹೆಚ್ಚಿನ ಪ್ರಗತಿದರ ಮಾತ್ರ ಹೊಂದಿಲ್ಲ. ಹಲವು ಜಾಗತಿಕ ಸೂಚಕಗಳಲ್ಲಿ ನಾವು ಅಗ್ರ ಕ್ರಮಾಂಕದಲ್ಲಿದ್ದೇವೆ.
• ವಿಶ್ವಬ್ಯಾಂಕ್ ಇತ್ತೀಚೆಗೆ ವಹಿವಾಟು ಕುರಿತು ನಡೆಸಿದ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ 12ನೇ ಸ್ಥಾನಕ್ಕೆ ಜಿಗಿದಿದೆ.
• ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲೂ ಭಾರತ 16ನೇ ಸ್ಥಾನಕ್ಕೆ ಏರಿದೆ.
ಸ್ನೇಹಿತರೇ,
ಭಾರತ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಾವು ಇದೀಗ ವಿದೇಶಿ ನೇರ ಬಂಡವಾಳ ಹೂಡಿಕೆಯ ಅತಿನೆಚ್ಚಿನ ರಾಷ್ಟ್ರವಾಗಿದ್ದೇವೆ. 2015ನೇ ಸಾಲಿನಲ್ಲಿ ನಾವು ಹೆಚ್ಚಿನ ವಿದೇಶಿ ನೇರ ಬಂಡವಾಳ ಆಕರ್ಷಿಸಿದ್ದೇವೆ. ನಿಮಗೆ ಶುಭ ಸುದ್ದಿ ಎಂದರೆ ಭಾರತ – ಕೀನ್ಯಾದ ಅತಿ ದೊಡ್ಡ ವ್ಯಾಪಾರಿ ಪಾಲುದಾರ ರಾಷ್ಟ್ರವಾಗಿರುವುದು. ಕೀನ್ಯಾದಲ್ಲಿ ಬಂಡವಾಳ ಹೂಡಿಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ನಮ್ಮ ನಿಮ್ಮ ನಡುವೆ ವ್ಯಾಪಾರದಲ್ಲಿ ಇರುವ ಕೆಲವೊಂದು ಅಸಮತೋಲನಗಳನ್ನು ತೊಡೆದುಹಾಕಲು ನಮಗೆ ಸಂತಸವಾಗುತ್ತದೆ. ಕೀನ್ಯಾದಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಿಸುವುದು ನಮಗೆ ಸಂತೋಷದ ಸಂಗತಿ.
ನಾನು ಇಲ್ಲಿನ ಜನರಿಗೆ ಮತ್ತು ಕೀನ್ಯಾ ಸರ್ಕಾರಕ್ಕೆ ನೀಡುವ ಭರವಸೆ ಎಂದರೆ ಭಾರತ ಸದಾ ನಿಮ್ಮ ಬೆನ್ನಿಗಿರುತ್ತದೆ. ನಮ್ಮ ಸ್ನೇಹ ಇಬ್ಬರಿಗೂ ಅನುಕೂಲಕಾರಿ ಅದು ಭಾರತದಲ್ಲಿರುವ ಕೀನ್ಯಾ ವಿದ್ಯಾರ್ಥಿಗಳಿಗಿರಬಹುದು ಅಥವಾ ಕೀನ್ಯಾದಲ್ಲಿರುವ ಭಾರತೀಯ ವೃತ್ತಿಪರರಿಗಿರಬಹುದು. ಅದು ಗಣಿ, ನಿಕ್ಷೇಪ ಅಥವಾ ಯಂತ್ರಗಳಿಗೆ ಇರಬಹುದು. ನಾವು ಜಂಟಿಯಾಗಿ ಹೊಸ ಹೊಸ ಅವಕಾಶಗಳನ್ನು ಅನ್ವೇಷಿಸಬೇಕಾಗಿದೆ. ಆ ದಿಕ್ಕಿನಲ್ಲಿ ನನ್ನ ಭೇಟಿಯ ಈ ಸಭೆ ಒಂದು ಸೂಚಕವಾಗಿದೆ.
ಗೆಳೆಯರೇ, ನಾನು ಭಾರತದ ಪರವಾಗಿ ಕೀನ್ಯಾಗೆ ನೀಡುವ ಭರವಸೆ ಎಂದರೆ ನಿಮ್ಮ ಸಂಪನ್ಮೂಲ ಬಳಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಭಾರತ ಸಹಕಾರ ನೀಡಲಿದೆ.
• ಭಾರತ ‘ಮೇಕ್ ಇನ್ ಇಂಡಿಯಾ’ ಆಂದೋಲನ ಆರಂಭಿಸಿರುವುದು ನಿಮಗೆ ತಿಳಿದಿರಬಹುದು. ಭಾರತವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿ ರೂಪಿಸುವುದು ಅದರ ಉದ್ದೇಶ.
• ಅದೇ ರೀತಿ ನೀವೂ ಕೂಡ ‘ಮೇಕ್ ಇಟ್ ಕೀನ್ಯಾ’ ಆಂದೋಲನವನ್ನು ಆರಂಭಿಸಿದ್ದೀರ. ಆ ಮೂಲಕ ವ್ಯಾಪಾರ ಮತ್ತು ಪ್ರವಾಸೋದ್ಯಮ ಅವಕಾಶಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ತಮ್ಮದು.
• ಎರಡೂ ರಾಷ್ಟ್ರಗಳ ಬದ್ಧತೆ ಒಂದೇ ಆಗಿದೆ. ಅದೆಂದರೆ ದೇಶದ ಜನರ ಭವಿಷ್ಯವನ್ನು ಉಜ್ವಲಗೊಳಿಸುವುದು.
• ಎರಡೂ ದೇಶಗಳ ಜನರು ಒಂದೇ ರೀತಿಯಲ್ಲಿದ್ದಾರೆ. ಈ ದೇಶದ ಸ್ಥಾಪನೆಯಲ್ಲಿ ಭಾರತೀಯರ ಬೆವರು ಹರಿದಿದೆ. ಭಾರತೀಯರ ರಕ್ತದ ಬಣ್ಣದಿಂದ ಇಲ್ಲಿ ಸ್ವಾತಂತ್ರ್ಯದ ಗರಿಗೆದರಿದೆ. ಮೇಕ್ ಇನ್ ಕೀನ್ಯಾ ಅಥವಾ ಮೇಕ್ ಇನ್ ಇಂಡಿಯಾ ಇದ್ಯಾವುದೂ ನಮಗೆ ಮುಖ್ಯವಲ್ಲ.
‘ಮೇಕ್ ಇಟ್ ಕೀನ್ಯಾ’ ಬದ್ಧತೆಗೆ ನಮ್ಮ ಬೆಂಬಲ ಸಾರುವ ಉದ್ದೇಶದಿಂದ ನಾವು ಕೀನ್ಯಾದಲ್ಲಿ ವ್ಯವಹಾರ ಮಾಡುವ ಕುರಿತಂತೆ ಮಾರ್ಗದರ್ಶಿ ಪುಸ್ತಕವನ್ನು ಮುದ್ರಿಸಿದ್ದೇವೆ. ಇದು ಕೀನ್ಯಾದಲ್ಲಿ ಬಂಡವಾಳ ಹೂಡುವ ಭಾರತೀಯ ಹೂಡಿಕೆದಾರರಿಗೆ ಮಾರ್ಗದರ್ಶನ ನೀಡಲಿದೆ. ಈ ಪುಸ್ತಕವನ್ನು ಕೀನ್ಯಾದ ಗೌರವಾನ್ವಿತ ಅಧ್ಯಕ್ಷರಿಗೆ ನೀಡುತ್ತಿರುವುದು ನನಗೆ ಹೆಮ್ಮೆ ಎನಿಸುತ್ತದೆ.
ಧನ್ಯವಾದಗಳು
An evening for business & innovation...PM @narendramodi & President @UKenyatta meet innovators, join business summit pic.twitter.com/F9IiiMYSHH
— PMO India (@PMOIndia) July 11, 2016
You can watch the proceedings at the Kenya-India Business Forum LIVE. https://t.co/XCUFm3VO5z pic.twitter.com/CFOslgaK4N
— PMO India (@PMOIndia) July 11, 2016
India and Kenya: a very special relationship. pic.twitter.com/4AejrdoycX
— PMO India (@PMOIndia) July 11, 2016
I must compliment the people and leadership of Kenya for overall development and stability since independence: PM @narendramodi
— PMO India (@PMOIndia) July 11, 2016
Renewable energy for a better planet. pic.twitter.com/ymKOUk29mU
— PMO India (@PMOIndia) July 11, 2016
Cooperation in healthcare, highlighted by PM @narendramodi in his speech. pic.twitter.com/n1Ar3IJf6B
— PMO India (@PMOIndia) July 11, 2016
Bettering trade and investment ties. @narendramodi @UKenyatta @PresidentKE pic.twitter.com/5XFEcnw5Qx
— PMO India (@PMOIndia) July 11, 2016
A win-win friendship, says PM @narendramodi on India-Kenya ties. pic.twitter.com/Jnoj240F3Z
— PMO India (@PMOIndia) July 11, 2016
Happy to have met Indian & Kenyan business leaders with President @UKenyatta to chalk out ways to deepen India-Kenya economic & trade ties.
— Narendra Modi (@narendramodi) July 11, 2016
Also glad to have interacted with Indian & Kenyan innovators before the business summit. pic.twitter.com/THoRzqpXi2
— Narendra Modi (@narendramodi) July 11, 2016
Expressed support to ‘Make it Kenya' initiative & said that India stands firmly with Kenya as it works to strengthen the nation’s economy.
— Narendra Modi (@narendramodi) July 11, 2016
India-Kenya friendship is a win-win situation. Earlier we fought colonialism…now is the time to fight poverty. https://t.co/OS8YLcz9a3
— Narendra Modi (@narendramodi) July 11, 2016