Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರೊಂದಿಗೆ ದೂರವಾಣಿ ಸಮಾಲೋಚನೆ ನಡೆಸಿದರು. ಐತಿಹಾಸಿಕ, ಮಹತ್ವಾಕಾಂಕ್ಷೆಯ ಮತ್ತು ಪರಸ್ಪರ ಪ್ರಯೋಜನಕಾರಿಯಾಗಿರುವ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದದ (ಎಫ್.ಟಿ.ಎ) ಯಶಸ್ವಿಯಾಗಿ ಮುಕ್ತಾಯವಾಗಿರುವುದನ್ನು ಉಭಯ ನಾಯಕರು ಜಂಟಿಯಾಗಿ ಘೋಷಿಸಿದರು.

2025ರ ಮಾರ್ಚ್ ನಲ್ಲಿ ಪ್ರಧಾನಮಂತ್ರಿ ಲಕ್ಸನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಮಾತುಕತೆಗಳು ಆರಂಭವಾದ ನಂತರ ದಾಖಲೆಯ 9 ತಿಂಗಳ ಅವಧಿಯಲ್ಲಿ ಎಫ್.ಟಿ.ಎ ಮುಕ್ತಾಯಗೊಂಡಿರುವುದು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಹಂಚಿಕೆಯ ಮಹತ್ವಾಕಾಂಕ್ಷೆ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಎಫ್.ಟಿ.ಎ ದ್ವಿಪಕ್ಷೀಯ ಆರ್ಥಿಕ ಒಳಗೊಳ್ಳುವಿಕೆವನ್ನು ಗಮನಾರ್ಹವಾಗಿ ಬಲಗೊಳಿಸುತ್ತದೆ, ಮಾರುಕಟ್ಟೆ ಲಭ್ಯತೆಯನ್ನು ಹೆಚ್ಚಿಸುತ್ತದೆ, ಬಂಡವಾಳ ಹೂಡಿಕೆ ಹರಿವನ್ನು ಉತ್ತೇಜಿಸುತ್ತದೆ, ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ಬಲವರ್ಧನೆಗೊಳಿಸುತ್ತದೆ ಮತ್ತು ವಿವಿಧ ವಲಯಗಳಲ್ಲಿ ಎರಡೂ ದೇಶಗಳ ನಾವೀನ್ಯಕಾರರು, ಉದ್ಯಮಿಗಳು, ರೈತರು, ಎಂ.ಎಸ್.ಎಂ.ಇ ಗಳು, ವಿದ್ಯಾರ್ಥಿಗಳು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ.

ಎಫ್.ಟಿ.ಎ ಒದಗಿಸುವ ಸದೃಢವಾದ ಮತ್ತು ವಿಶ್ವಾಸಾರ್ಹ ಭದ್ರ ಅಡಿಪಾಯದೊಂದಿಗೆ, ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಮತ್ತು ಮುಂದಿನ 15 ವರ್ಷಗಳಲ್ಲಿ ನ್ಯೂಜಿಲೆಂಡ್‌ನಿಂದ ಭಾರತದಲ್ಲಿ 20 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ವಿಶ್ವಾಸವನ್ನು ಇಬ್ಬರೂ ನಾಯಕರು ವ್ಯಕ್ತಪಡಿಸಿದರು. ಕ್ರೀಡೆ, ಶಿಕ್ಷಣ ಮತ್ತು ಜನರೊಂದಿಗಿನ ಬಾಂಧವ್ಯದಂತಹ ದ್ವಿಪಕ್ಷೀಯ ಸಹಕಾರದ ಇತರ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು ಮತ್ತು ಭಾರತ-ನ್ಯೂಜಿಲೆಂಡ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. 

ಉಭಯ ನಾಯಕರು ಸದಾ ಸಂಪರ್ಕದಲ್ಲಿರಲು ಒಪ್ಪಿಗೆ ಸೂಚಿಸಿದರು.

 

*****