Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗುಜರಾತ್ ನ ಆನಂದ್ ಜಿಲ್ಲೆಯ, ವಸದ್ ನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಡಿಯಲ್ಲಿ ಬರುವ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಸ್ಥೆ (ಐಐಎಸ್.ಡಬ್ಲ್ಯು.ಸಿ) ಸಂಶೋಧನಾ ಕೇಂದ್ರಕ್ಕೆ ಸೇರಿದ 4.64 ಹೆಕ್ಟೇರ್ (46384 ಚದರ ಮೀಟರ್) ಭೂಮಿಯನ್ನು ಎನ್.ಎಚ್-8ರಲ್ಲಿ ಆರು ಪಥದ ಅಹಮದಾಬಾದ್ – ವಡೋದರಾ ಹೆದ್ದಾರಿಗಾಗಿ, 12.67 ಕೋಟಿ ರೂಪಾಯಿಗಳ ಪರಿಹಾರ ಮೊತ್ತಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲು ತನ್ನ ಅನುಮೋದನೆ ನೀಡಿದೆ.


ಎನ್.ಎಚ್.-8 ವಡೋದರಾ ಮತ್ತು ಅಹಮದಾಬಾದ್ ಗಳನ್ನು ಸಂಪರ್ಕಿಸುವ ಮಹತ್ವದ ಹೆದ್ದಾರಿಯಾಗಿದೆ. ಎನ್.ಎಚ್.ಎ.ಐಗೆ. ಭೂಮಿ ಹಸ್ತಾಂತರ ಮಾಡುವುದರಿಂದ ಅಹಮದಾಬಾದ್- ವಡೋದರಾ ವಲಯದ ಎನ್.ಎಚ್. -8ನ್ನು ಆರು ಪಥದ ಹೆದ್ದಾರಿ ವಿಸ್ತರಣೆ ನಿರ್ಮಾಣಕ್ಕೆ ಅವಕಾಶ ನೀಡಲಿದ್ದು, ಇದು ವಲಯದಲ್ಲಿ ಮೂಲಸೌಕರ್ಯ, ಸಾರಿಗೆ, ಸಂಪರ್ಕ, ಉದ್ಯೋಗ ಸೃಷ್ಟಿ ಇತ್ಯಾದಿ ಅಭಿವೃದ್ಧಿ ಮತ್ತು ಪ್ರಗತಿಗೆ ಲಾಭವಾಗಲಿದೆ. ಈ ನಿರ್ಧಾರವು ಪ್ರಗತಿಯ ವೇಗ ಹೆಚ್ಚಿಸುವ ಸಲುವಾಗಿ ಪ್ರಮುಖ ವಲಯಗಳಲ್ಲಿ ಮೂಲಸೌಕರ್ಯ ಉತ್ತೇಜಿಸುವ ಸರ್ಕಾರದ ಯೋಜನೆಯ ಭಾಗವಾಗಿದೆ.

AKT/VBA/SH