Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ನರೇಂದ್ರ ಮೋದಿ ಅವರು ವಿಯಟ್ನಾಂಗೆ ಭೇಟಿ ಕೊಟ್ಟ ವೇಳೆ ಔತಣಕೂಟದಲ್ಲಿ ಮಾಡಿದ ಭಾಷಣ


ಘನತೆವೆತ್ತ ಪ್ರಧಾನಿ ನುಯೆನ್ ಕ್ಸುಆನ್ ಫುಕ್ ಅವರೇ, ಗಣ್ಯ ಅತಿಥಿಗಳೇ,
ಕ್ಸಿನ್ ಚಾವೋ(ಘಿಟಿ ಅಚಿo),
ನನಗೆ ಮತ್ತು ನನ್ನ ನಿಯೋಗದ ಸದಸ್ಯರಿಗೆ ವಿಯಟ್ನಾಂ ಸರ್ಕಾರ ಹಾಗೂ ಅದರ ನಾಯಕರು ನೀಡಿದ ಬೆಚ್ಚನೆಯ ಸ್ವಾಗತಕ್ಕೆ ನಾನು ಶ್ಲಾಘನೆಯನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇನೆ.
ಸ್ನೇಹಿತರೇ,
ವಿಯಟ್ನಾಂಗೆ ನನ್ನ ಭೇಟಿಯು ಎರಡೂ ಸಮಾಜ ಮತ್ತು ರಾಷ್ಟ್ರಗಳ ನಡುವಿನ ಸಂಬಂಧವನ್ನು ಪೋಷಿಸುವ ಉದ್ದೇಶ ಹೊಂದಿದೆ. ಎರಡೂ ದೇಶಗಳ ನಡುವಿನ ಸಂಬಂಧವು ಆಳವಾದ ಚಾರಿತ್ರಿಕ ಹಾಗೂ ನಾಗರಿಕತೆಯ ಬೇರುಗಳನ್ನು ಹೊಂದಿದ್ದು, ಅದಕ್ಕೆ 2,000 ವರ್ಷಗಳ ಇತಿಹಾಸವಿದೆ. ಈ ಸಾಂಸ್ಕøತಿಕ ಬಂಧಗಳು ಹಲವು ರೀತಿಯಲ್ಲಿ ಪ್ರತಿಫಲಿಸಿವೆ. ಬಹಳ ಮುಖ್ಯವಾಗಿ, ಬುದ್ಧಿಸಂ ಮತ್ತು ಹಿಂದು ಚಾಮ್ ನಾಗರಿಕತೆಯ ಸ್ಮಾರಕಗಳ ನಡುವಿನ ಸಂಬಂಧದಲ್ಲಿ ಇದನ್ನು ಕಾಣಬಹುದಾಗಿದೆ. ಇತ್ತೀಚಿನ ದಶಕ ದಲ್ಲಿ, ನಮ್ಮ ಜನರ ಪ್ರಗತಿ ಹಾಗೂ ಸಮೃದ್ಧಿಗೆ ಕೆಲಸ ಮಾಡಬೇಕೆಂಬ ಪ್ರಬಲ ಹಾಗೂ ಹಂಚಿಕೊಂಡ ಆಶಯವು ನಮ್ಮ ಸಂಬಂಧಗಳನ್ನು ರೂಪಿಸಿದೆ. ಬೇರೆ ಅಭಿವೃದ್ಧಿಶೀಲ ದೇಶಗಳೊಂದಿಗೆ ನಮ್ಮ ಜ್ಞಾನ, ಅನುಭವ ಹಾಗೂ ತಜ್ಞತೆಯನ್ನು ಹಂಚಿಕೊಳ್ಳ ಬೇಕು ಎಂಬುದು ಭಾರತೀಯರ ನಂಬಿಕೆ. ಇದಕ್ಕೆ ಕಳೆದ ನಾಲ್ಕು ದಶಕಗಳಿಂದ ವಿಯಟ್ನಾಂ ಜತೆಗಿನ ಬಹುಮುಖಿ ದ್ವಿಪಕ್ಷೀಯ ಸಹಕಾರದ ಯಶಸ್ಸಿಗಿಂತ ಉತ್ತಮ ಉದಾಹರಣೆ ಬೇಡ.
ನಮ್ಮ ನಡುವಿನ ಸಹಕಾರದ ಅಗಾಧ ಪರಿಣಾಮಕ್ಕೆ ಕು ಲಾಂಗ್ ಡೆಲ್ಟಾ ರೈಸ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಒಂದು ಪ್ರಮುಖ ನಿದರ್ಶನ. ಮೆಕಾಂಗ್ ಮುಖಜಭೂಮಿಯಲ್ಲಿ ಇನ್‍ಸ್ಟಿಟ್ಯೂಟ್ ಒಂದನ್ನು ಆರಂಭಿಸಲು ತಜ್ಞರನ್ನು ಕಳಿಸುವ ಮೂಲಕ ಹಾಗೂ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಭಾರತವು ನೆರವಾಗಿದೆ. ಇಂದು ವಿಯಟ್ನಾಂ ಜಗತ್ತಿನ ಮೂರನೇ ಅತಿ ದೊಡ್ಡ ಭತ್ತ ರಫ್ತು ಮಾಡುವ ದೇಶವಾಗಿದೆ. ವಿಯಟ್ನಾಂ ಭತ್ತದ ಉತ್ಪಾದನೆ ಮತ್ತು ರಫ್ತಿಗೆ ಸಂಬಂಧಿಸಿದಂತೆ ಪ್ರಮುಖ ದೇಶವಾಗಿ ಹೊರ ಹೊಮ್ಮುವಲ್ಲಿ ನಾವು ಪಾಲುದಾರರಾಗಿರುವುದು ನಮಗೆ ಸಂತನ ನೀಡಿದೆ.
ಸ್ನೇಹಿತರೇ,
ಉದ್ಭವಿಸುತ್ತಿರುವ ಪ್ರಾಂತೀಯ ಸವಾಲುಗಳನ್ನು ಎದುರಿಸಲು ಹಾಗೂ ಹೊಸ ಅವಕಾಶಗಳನ್ನು ಶೋಧಿಸಲು, ನಮ್ಮ ಜತೆಗಾರಿಕೆಯ ಬಲವನ್ನು ನಾವು ಬಳಸಿಕೊಳ್ಳಬೇಕಿದೆ. ನಮ್ಮ ಸಂಬಂಧವನ್ನು “ವಿಸ್ತಾರವಾದ ಆಯಕಟ್ಟಿನ ಸಹಭಾಗಿತ್ವ’ವಾಗಿ ಉನ್ನತೀ ಕರಿಸಲು ನಿರ್ಧರಿಸಿರುವುದು ತೃಪ್ತಿಕರ ವಿಷಯ. ಮುಂದಿನ ವರ್ಷ ನಾವು ಎರಡೂ ದೇಶಗಳ ನಡುವೆ ರಾಜಕೀಯ ಸಂಬಂಧ ಸ್ಥಾಪನೆಯ 45ನೇ ವರ್ಷಾಚರಣೆ ಹಾಗೂ ಆಯಕಟ್ಟಿನ ಸಹಭಾಗಿತ್ವ ಸ್ಥಾಪನೆಯ 10ನೇ ವರ್ಷವನ್ನು ಆಚರಿಸಲಿದ್ದೇವೆ. ಇನ್ನು ಕೆಲವು ತಿಂಗಳುಗಳಲ್ಲಿ ನಾವು ಈ ಮೈಲುಗಲ್ಲುಗಳ ಉತ್ಸವಾಚರಣೆ ನಡೆಸಲಿದ್ದೇವೆ.
ಸ್ನೇಹಿತರೇ,
ಭಾರತ-ವಿಯಟ್ನಾಂ ನಡುವೆ ಬಲಿಷ್ಠ ಪಾಲುದಾರಿಕೆಯು ನಮ್ಮ ಜನರ ಹಾಗೂ ಇಡೀ ಪ್ರಾಂತ್ಯದಲ್ಲಿ ಸಮೃದ್ಧಿ, ಅಭಿವೃದ್ಧಿ, ಶಾಂತಿ ಹಾಗೂ ಸ್ಥಿರತೆಗೆ ಕಾರಣವಾಗಲಿದೆ ಎಂದು ನಾನು ನಂಬುತ್ತೇನೆ. ವಿಯಟ್ನಾಂ, ಭಾರತದ “ಪೂರ್ವ ದೇಶಗಳಲ್ಲಿ ಕಾರ್ಯ’ ನೀತಿಯ ಭದ್ರ ಬುನಾದಿಯಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧಗಳು ಭದ್ರವಾದ ಪರಸ್ಪರ ನಂಬಿಕೆ ಮತ್ತು ಅರ್ಥ ಮಾಡಿಕೊಳ್ಳುವಿಕೆಯನ್ನು ಹಾಗೂ ನಾನಾ ಪ್ರಾಂತೀಯ ಮತ್ತು ಅಂತಾರಾಷ್ಟ್ರೀಯ ಸಂಗತಿಗಳ ಕುರಿತ ದೃಷ್ಟಿಕೋನದ ಒಮ್ಮುಖತೆಯನ್ನು ಆಧರಿಸಿವೆ.
ಘನತೆವೆತ್ತ ಪ್ರಧಾನಿಯವರೇ, ಮಹಿಳೆಯರೇ ಮತ್ತು ಮಾನ್ಯರೇ,
* ವಿಯಟ್ನಾಂ ಸಮಾಜವಾದಿ ಗಣರಾಜ್ಯದ ಪ್ರಧಾನಿ, ಘನತೆವೆತ್ತ ನುಯೆನ್ ಕ್ಸುಆನ್ ಫುಕ್ ಮತ್ತು ಇಲ್ಲಿ ನೆರೆದ ಗಣ್ಯರ ಆರೋಗ್ಯ ಮತ್ತು ಸಂತೋಷಕ್ಕೆ;
* ವಿಯಟ್ನಾಂನ ಮುಖಂಡರು ಹಾಗೂ ಜನತೆಯ ಸಮೃದ್ಧಿ ಮತ್ತು ಒಳಿತಿಗೆ;
* ಭಾರತ ಮತ್ತು ವಿಯಟ್ನಾಂನ ಶಾಶ್ವತ ಸ್ನೇಹಕ್ಕೆ
-ನಿಮ್ಮೆಲ್ಲರನ್ನೂ ಸ್ವಸ್ತಿಪಾನಕ್ಕೆ ಆಹ್ವಾನಿಸಲು ನನಗೆ ಹರ್ಷವೆನಿಸುತ್ತದೆ.