Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿಯವರಿಂದ ಹಾಜಿಪುರ, ಬಿಹಾರನಲ್ಲಿ ನಡೆದ ರೈಲ್ವೆಯೋಜನೆಗಳ ಶಂಕುಸ್ಥಾಪನೆಯ ಉದ್ಘಾಟನೆಯ ಭಾಷಣ ದ ಪಠ್ಯ

ಪ್ರಧಾನ ಮಂತ್ರಿಯವರಿಂದ ಹಾಜಿಪುರ, ಬಿಹಾರನಲ್ಲಿ ನಡೆದ  ರೈಲ್ವೆಯೋಜನೆಗಳ ಶಂಕುಸ್ಥಾಪನೆಯ ಉದ್ಘಾಟನೆಯ ಭಾಷಣ ದ  ಪಠ್ಯ


ವೇದಿಕೆಯ ಮೇಲೆ ವಿರಾಜಮಾನರಾಗಿರುವ ಎಲ್ಲ ಗಣ್ಯರೆ ಮತ್ತು ಬೃಹತ್ ಸಂಖ್ಯೆಯಲ್ಲಿ ಆಗಮಿಸಿರುವ ನನ್ನೆಲ್ಲ ಸಹೋದರ ಸಹೋದರಿಯರೆ,
 
ಈ ಸೇತುವೆಯ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾವ ರೀತಿಯ ಮಹತ್ವವನ್ನು ನೀಡಿದ್ದೀರಾ ಎನ್ನುವುದರ ಬಗ್ಗೆ ನಾನು ನಿಮ್ಮ ಈ ಉತ್ಸಾಹವನ್ನು ನೋಡಿ ಊಹಿಸ ಬಲ್ಲೆ. ಈ ಸೇತುವೆಯಿಂದ ಕೇವಲ ಸಾರಿಗೆ ವ್ಯವಸ್ಥೆ ಸುಧಾರಣೆ ಮಾತ್ರವೆ ಅಲ್ಲ ಅರ್ಥಿಕ ಜೀವನದಲ್ಲಿಯೂ ಸಹ ಬದಲಾವಣೆ  ಆಗುತ್ತದೆ ಎನ್ನುವುದು ನನ್ನ ಅರಿವಿಗೆ ಬಂದಿದೆ. ಗಂಗಾ ಮಾತೆ ಉತ್ತರ ಬಿಹಾರ ಮತ್ತು ದಕ್ಷಿಣ ಬಿಹಾರಗಳೆರಡನ್ನು ಜೋಡಿಸುತ್ತಾಳೆ. ಆದರೆ ನಾಗರಿಕರನ್ನು ಒಂದುಗೂಡಿಸಲು ಸಂಪರ್ಕ ವ್ಯವಸ್ಥೆಯ ಅವಶ್ಯಕತೆಯಿದೆ. ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿ ಯಾಗಿದ್ದಾಗ, ಶ್ರೀ ನೀತೀಶ್ ಜೀ ಯವರು ರೈಲ್ವೆ ಮಂತ್ರಿಯಾಗಿದ್ದರು. ಆಗ ಕಂಡ ಕನಸಿದು, ಈಗ ನನಸಾಗುತ್ತಿದೆ. ಬಹುಶಃ ಇಗ್ಗೆ 10 ವರ್ಷಗಳ ಹಿಂದೆಯೆ ಆಯೋಜಿಸಿದ್ದ ಯೋಜನೆ ಸಾಮಾನ್ಯ ಬಜೆಟ್ ನಲ್ಲಿ ದೊರೆಯಬಹುದಾದ ಹಣಕಾಸಿನಲ್ಲಿಯೇ 5-7 ವರ್ಷಗಳ ಹಿಂದೆಯೇ ಇದನ್ನು ಮಾಡಿ ಮುಗಿಸಬಹುದಿತ್ತು. ಹಿಂದಿನ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಇದು ನೆನಗುದಿಗೆ ಬೀಳುವಂತಾಯಿತು. 600 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಕಾರ್ಯ 3000 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡುವಂತಾಯಿತು. ಇದು ಜನತಾ ಜನಾರ್ದನರ ಹಣ. ನಮ್ಮ ದೇಶದಲ್ಲಿ ಪ್ರತಿಬಾರಿಯೂ ಅಂದು ಕೊಂಡಾಗಲೆಲ್ಲ ಏನೋ  ಒಂದು ಆಡಚಣೆ ಉಂಟಾಗಿ ದೇಶದ ಅಭಿವೃದ್ಧಿಯ ಕಾರ್ಯ ಕುಂಠಿತಗೊಳ್ಳುತ್ತಿದೆ. ಬೇರೆ ಯಾವುದೊ ಮಹತ್ವವನ್ನು ಪಡೆದು ಕೊಳ್ಳುತ್ತದೆ. ಕೇವಲ 18 ತಿಂಗಳುಗಳಲ್ಲಿ ಇಂಥ ಬೃಹತ್ ಕಾರ್ಯ ನಿಶ್ಚಿತ ಅವಧಿಯಲ್ಲಿ ಪೂರ್ಣಗೊಂಡಿದೆ. ಶೇಕಡ 34 ಕ್ಕೂ ಹೆಚ್ಚು ಕೆಲಸ ಅರ್ಧಕ್ಕೆ ನಿಂತಿತ್ತು ಈ 18 ತಿಂಗಳುಗಳಲ್ಲಿ ಮುಗಿಸಿದ್ದೆ ಒಂದು ದೊಡ್ಡ ಸಾಧನೆ. ಭಾರತ ಸುಸ್ಥಿರ ಅಭಿವೃದ್ಧಿ ಸಾಧಿಸ ಬೇಕಾದಲ್ಲಿ, 25-30 ವರ್ಷಗಳ ನಿರಂತರ ಅಭಿವೃದ್ಧಿಯಾಗ ಬೇಕಾದರೆ ಹೊಸ ಹೊಸ ಸಾಧನೆಯ ಗುರಿಗಳನ್ನು ಹಾಕಿ ಕೊಳ್ಳವುದಿಲ್ಲವೋ ಅಲ್ಲಿಯವರೆವಿಗೂ ನಮ್ಮ ಪೂರ್ವಿ ಭಾರತ ಅಭಿವೃಧ್ಧಿಗೊಳ್ಳುವುದಿಲ್ಲ. ಪೂರ್ವೊತ್ತರ ಪ್ರದೇಶವಾಗಲಿ, ಬಿಹಾರವಾಗಲಿ, ಪಶ್ಟಿಮ ಬಂಗಾಳವಾಗಲಿ, ಆಸ್ಸಾಂ ಆಗಲಿ, ಓಡಿಶಾ ಆಗಲಿ, ಈ ಎಲ್ಲ ಕ್ಷೇತ್ರಗಳೂ ಒಟ್ಟಾರೆಯಾಗಿ  ಅಭಿವೃದ್ಧಿ ಹೊಂದಿದಾಗಲೇ ದೇಶದ ಅಭಿವೃದ್ಧಿ ಸಾಧ್ಯ. ಪೂರ್ವಭಾರತ ಈ ದೇಶದ ಕೇಂದ್ರ ಬಿಂದು.  ಅದನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವುದು ಸುಲಭ ಸಾಧ್ಯ  ಕೆಲಸವಲ್ಲ . 
 
ಇಲ್ಲಿಯವರೆವಿಗೂ ದೈನಂದಿನ ಸಮಸ್ಯೆ ಗಳಿಗಷ್ಟೇ  ಗಮನ ಕೊಡುತ್ತಿದ್ದೆವು. ಜನರ ದೈನಂದಿನ ಬದುಕಿನ ಸಮಸ್ಯೆಗಳ ಬಗ್ಗೆ ಮಾತ್ರವೇ ಗಮನ ಹರಿಸುತ್ತಿದ್ದೆವು, ಆದರೆ ದೀರ್ಘ ಕಾಲೀನ ಸಮಸ್ಯೆಗಳಿಗೂ ಸ್ಪಂದಿಸುವ, ಪರಿಹಾರ ಒದಗಿಸುವ ಸಮಯ ಬಂದಿದೆ. ಇಡೀ ಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಅಗತ್ಯ ಕಂಡು ಬಂದಿದೆ. ಹೀಗಾಗಿ ದೀರ್ಘಕಾಲೀನ ಸಮಸ್ಯೆಗಳನ್ನು ಸಹ ಪರಿಹರಿಸುವ, ಅಭಿವೃದ್ಧಿಗೊಳಿಸುವ ಅನಿವಾರ್ಯತೆ ಒದಗಿ ಬಂದಿದೆ.
ರೈಲ್ವೆ ಮತ್ತು ರಸ್ತೆ ಮಾರ್ಗದ ಮೂಲ ಸೌಕರ್ಯ ಕೇವಲ ಅಡಿಪಾಯ ಹಾಕುವುದಷ್ಟೆ ಅಲ್ಲ ಅಭಿವೃಧ್ಧಿಗೆ ವೇಗ ಹೆಚ್ಚಿಸಿದಂತೆ ಆಗುತ್ತದೆ.  ಹಿಂದಿನ ಬಿಹಾರ ಸರ್ಕಾರಗಳು ಕಳೆದ 5 ವರ್ಷಗಳಲ್ಲಿ ಮಾಡಿರಬಹುದಾದ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ಈಗಿನ ಸರ್ಕಾರ ಮಾಡಿದ ಖರ್ಚು ಎರಡೂವರೆ ಪಟ್ಟು ಹೆಚ್ಚೆಂದು ಹೇಳ ಬಹುದು. ಭಾರತ ದೇಶದ ಭವಿಷ್ಯ ಉಜ್ವಲವಾಗಬೇಕಾದರೆ, ಅದರ ಭಾಗ್ಯವನ್ನು ಬದಲಾಯಿಸಬೇಕಾದರೆ ಮೊದಲಿಗೆ ಬಿಹಾರವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ, ಹೆಗಲಿಗೆ ಹೆಗಲನ್ನಿತ್ತು 
ಕೆಲಸ ಮಾಡಿದಾಗಲೇ ಈ ಕಾರ್ಯ ಸಾಧ್ಯ. ಈ ಕಾರಣದಿಂದಲೇ ಇಂದು ನಾವು ರೈಲ್ವೆಮತ್ತು ರಸ್ತೆ ಮಾರ್ಗಗಳ ಮೂಲ ಸೌಕರ್ಯಗಳನ್ನು  ಕುರಿತು ಒಟ್ಟಾಗಿ ಸೇರಿ ಉತ್ತರ ಬಿಹಾರ ಮತ್ತು ದಕ್ಷಿಣ ಬಿಹಾರವನ್ನು ಸೇರಿಸುವ ಮೂರು ಯೋಜನೆಗಳನ್ನು ಕಾರ್ಯಗತಗೊಳಿಸಲು ಅಡಿಪಾಯ ಹಾಕಿದ್ದೇವೆ ಹಾಗೆಯೇ ಇಂದು ಶಂಕುಸ್ಥಾಪನೆಯ ಕಾರ್ಯ ನಡೆಯುತ್ತಿದೆ.
 
ನಿಮ್ಮ ಕಣ್ಣಮುಂದೆಯೆ ಇದೆ..ಈ ಹಿಂದೆ ಎರಡು ಕಡೆಯೂ ಜೋಡಿ ಮಾರ್ಗಗಳಿದ್ದವು ಆದರೆ ಸೇತುವೆ ಕಿರಿದು ಆಗಿದ್ದರಿಂದ ಅಲ್ಲಿ ಜೋಡಿ ಮಾರ್ಗ ಸಾದ್ಯವಿರಲ್ಲಿಲ್ಲ. ಹೀಗಾಗಿ ಎರಡು ಕಡೆ ಜೋಡಿ ಮಾರ್ಗಕ್ಕೆಂದು ಮಾಡಿದ ಖರ್ಚು ಅಪವ್ಯಯ ಆಗಿದ್ದುಂಟು. ಕಾರಣ ತೊಡಕುಗಳಿಂದಾಗಿ   ಎರಡೂ  ಪ್ರದೇಶಗಳನ್ನು ಜೋಡಿಸುವ ಕಾರ್ಯ ಆಗಿರಲಿಲ್ಲ ,ಇದನ್ನ ಸರ್ಕಾರ ಮನಗಂಡಿದೆ. ಕಾರ್ಯತತ್ಪರವಾಗಿದೆ. ನಿಗದಿಯಾದ ಸಮಯಕ್ಕೂ ಮುಂಚೆ ಯೋಜನೆ ಪೂರ್ಣಗೊಳ್ಳುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಇದರಿಂದಾಗಿ ಈ ಕ್ಷೇತ್ರದ ಬೆಳವಣಿಗೆಗೆ ವೇಗ ಸಿಗಲಿದೆ.
ನನ್ನ ಬಿಹಾರದ ಯುವ ಜನರೆ, ನಿಮಗೆ ಒಂದು ದೊಡ್ಡ ಉಡುಗೊರೆ ಕಾದಿದೆ. ಎರಡು ದೊಡ್ಡ ಲೋಕೋಮೋಟಿವ್ ಕಾರ್ಖಾನೆ ಗಳು   ಬಿಹಾರದಲ್ಲಿ ಸ್ಥಾಪನೆಯಾಗ ಲಿವೆ.  ಇದು 2006-07 ರಿಂದ ಫೈಲಿನಲ್ಲಿ ಧೂಳು ತಿನ್ನುತ್ತ ಕುಳಿತಿತ್ತು .  ಭಾಷಣದಲ್ಲಿಯಷ್ಟೇ ಈ ಯೋಜನೆ ಇತ್ತೇ ಹೊರತು ಯೋಜನೆ ಬೆಳಕನ್ನೇ ಕಂಡಿರಲ್ಲಿಲ್ಲ. ಟೆಂಡರ್ ಹಾಕಲಿಕ್ಕೂ ಜನ ಹಿಂದೆ ಮುಂದೆ ನೋಡುತ್ತಿದ್ದರು . ನಾವು ಟೆಂಡರ್ ನಲ್ಲಿ ಹೊಸದೊಂದು ವಿಷಯವನ್ನು ಸೇರಿಸಿದೆವು. ರಫ್ತಿನ ಗುರಿಯನ್ನು ಸೇರಿಸಿದೆವು. ದೇಶದ ಅಗತ್ಯ ಮನಗಂಡು ಆದೇಶ ನೀಡಲು  ನಿರ್ಣಯಿಸಿದೆವು. ಇದೊಂದು ಆವಿಷ್ಕಾರಕ ಆಲೋಚನೆಯಾಗಿತ್ತು.  ಇದರಿಂದ ವಿಶ್ವದ ಮೂಲೆ ಮೂಲೆಗಳಿಂದ ದೊಡ್ಡ ದೊಡ್ಡ ಕಂಪನಿಗಳು ಟೆಂಡರ್ ತೆಗೆದು ಕೊಂಡು ಬಂದವು. ಅವರಿಗೆ ಮನದಟ್ಟಾಯಿತು ಆದೇಶ  ದೊರೆತಲ್ಲಿ ಕೆಲಸ ಮಾಡಬಹುದು ಎಂದು . 40,000 ಕೋಟಿ ರೂಪಾಯಿಗಳ ವಿದೇಶೀ ನೇರ ಬಂಡವಾಳ ಯೋಜನೆ ಇದಾಗಿತ್ತು. ಬಿಹಾರದ ಎರಡು ಸ್ಥಳಗಳಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದು ಭಾರತದಲ್ಲಿಯೆ ಬಹು ದೊಡ್ಡದಾದ ಯೋಜನೆಯೆಂದು ಪರಿಗಣಿಸಲಾಗಿದೆ. ಕಾರ್ಯ ಪ್ರಕ್ರಿಯೆ ಮುಗಿದಿದೆ. ಅಲ್ಪಾವಧಿಯಲ್ಲಿ ಸರ್ಕಾರ ರಚನೆಯಾದ ನಂತರ ನಡೆದ ಬೆಳವಣಿಗೆಯಿದು. ನಮಗೆ ದೊರೆತ  ಈ 18 ತಿಂಗಳಲ್ಲಿ ಬಿಹಾರಕ್ಕೆ ಪ್ರಾಶಸ್ತ್ಯವನ್ನು ನೀಡಿದ್ದೇವೆ. ಭಾರತದ ಅಭಿವೃದ್ಧಿಯಾಗ ಬೇಕಾದಲ್ಲಿ ಬಿಹಾರದ ಅಭಿವೃದ್ಧಿ ಅನಿವಾರ್ಯ ಎಂಬುದನ್ನು ನಾವು ಮನಗಂಡಿದ್ದೇವೆ. ಹೀಗಾಗಿ ಈ ಕೆಲಸಕ್ಕೆ ಮಹತ್ವ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ನೀವು ಕಾಣಲಿದ್ದೀರಿ.
 
ಸಹೋದರ ಸಹೋದರಿಯರೆ,  ಇಂದಿನ ಯುಗದಲ್ಲಿ ಗ್ಯಾಸ್ ಪೈಪು ಲೈನ್ ಎಲ್ಲಿಲ್ಲದ ಮಹತ್ವವನ್ನು ಪಡೆದು ಕೊಂಡಿದೆ. ಪೈಪುಗಳ ಮುಖಾಂತರ ಗ್ಯಾಸ್ ರವಾನೆ ಮಾಡಬಹುದಾದಲ್ಲಿ ಮುಂದೆ ಇದರ ಅನುಕೂಲಬಹಳಷ್ಟಿದೆ. ಆದರೆ ಕೊಳವೆ ಅನಿಲ ಮಾರ್ಗ   ಅಳವಡಿಸುವ ಖರ್ಚು ಹೆಚ್ಚು. ಆದಾಗ್ಯೂ ಬಿಹಾರವನ್ನು ಕೊಳವೆ ಅನಿಲ  ಮಾರ್ಗದ  ಮೂಲಕ ಬಿಹಾರವನ್ನು ಜೋಡಿಸುವ ಕೆಲಸ ಭರದಿಂದ ಸಾಗಿದೆ. ಮುಂಬರುವ ದಿನಗಳಲ್ಲಿ ಜನರ ಜೀವನದಲ್ಲಿ ಬಹು ದೊಡ್ಡ ಬದಲಾವಣೆಯಾಗಲಿದೆ.
 
ಬಿಹಾರದ ನನ್ನ ನೆಚ್ಚಿನ ಸಹೋದರ ಸಹೋದರಿಯರೆ, ನೀವು ನನ್ನ ಬಜೆಟ್ ಅನ್ನು ಗಮನಿಸಿರಬಹುದು. ಬಡ ಕುಟುಂಬಗಳಿಗೆ ಅಡುಗೆ ಅನಿಲದ ಸೌಲಭ್ಯವನ್ನು ನೀಡುವ ಮಹತ್ತರ ನಿರ್ಧಾರ ಕೈಗೊಂಡಿದ್ದೇವೆ. ಇದು ಕಷ್ಟಸಾಧ್ಯವಾದ ಕೆಲಸ ಎನ್ನುವುದು ನನಗೆ ಗೊತ್ತಿದೆ. ಮುಂಬರುವ 3 ವರುಷಗಳಲ್ಲಿ ಬಡತನದ ರೇಖೆಯ ಕೆಳಗಿರುವ 
5 ಕೋಟಿ ಬಡ ಕುಟುಂಬಗಳಿಗೆ ಕಟ್ಟಿಗೆ ಒಲೆಯ ಬದಲಿಗೆ ಗ್ಯಾಸ್ ಸಿಲೆಂಡರ್ ಕೊಡುವ ಯೋಜನೆಯಿದೆ. ಇದು ಗೃಹಿಣಿಯರಿಗೆ,  ತಾಯಂದಿರಿಗೆ, ಅಕ್ಕ-ತಂಗಿಯರಿಗೆ ಹೊಗೆಯಿಂದ ಮುಕ್ತಿ ದೊರಕುವಂತೆ ಮಾಡುತ್ತದೆ.. ನನಗೆ ಅವರ ಆರೋಗ್ಯದ ಬಗ್ಗೆ ಕಾಳಜಿಯಿದೆ. ಒಲೆ ಹೊತ್ತಿಸಿ ಬೆಂಕಿಯಿಂದ ಅಡುಗೆ ಮಾಡುವ ಮಹಿಳೆಯರಿಗೆ ಅದರ ಹೊಗೆಯಿಂದ 400 ಸಿಗರೇಟ್ ಕುಡಿಯುವಷ್ಟೆ ದುಷ್ಪರಿಣಾಮ  ಆರೋಗ್ಯದ ಮೇಲೆ  ಉಂಟಾಗುತ್ತದೆ. ಇದರಿಂದ ಮಕ್ಕಳ ಮೇಲೆ ಯಾವ ಪರಿಣಾಮ ಬೀರಬಹುದೆಂಬುದನ್ನು ಯೋಚಿಸಿ. ಇದು ಮಾನವತೆಯ ಮೇಲೆ ಪರಿಣಾಮ ಬೀರುವ ಘೋರ ಅಪರಾಧ.  ಹೀಗಾಗಿ ಖರ್ಚು ಎಷ್ಟಾದರೂ ಚಿಂತೆ ಇಲ್ಲ .  ನಮ್ಮ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಪ್ಪಿಸಲು, ಇದ್ದಿಲು, ಕಟ್ಟಿಗೆಯಿಂದ ಹೊರಸೂಸುವ ಹೊಗೆಯಿಂದ ಮುಕ್ತಿ ದೊರೆಕಿಸಲು ಇದು ನಮಗೆ ಅನಿವಾರ್ಯ.
 
ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನಮ್ಮ ದೇಶಕ್ಕೆ ಸ್ವಾತಂತ್ರ ಬಂದು ಇಷ್ಟು ವರ್ಷವಾದರೂ ಎಷ್ಟೋ ಗ್ರಾಮಗಳಿಗೆ ಇನ್ನು ವಿದ್ಯುತ್ ಸಂಪರ್ಕವಿಲ್ಲ ಮತ್ತು ವಿದ್ಯುತ್ ಕಲ್ಪಿಸುವುದು ಐಷಾರಾಮಿ ಜೀವನ ಶೈಲಿ ಏನಲ್ಲ . ವಿದ್ಯುತ್ ಜೀವನದ ಒಂದು ಅವಿಭಾಜ್ಯ  ಅಂಗ. ಇದು ಕೇವಲ ಸಿರಿವಂತರಿಗೆ ಮಾತ್ರ ಸೀಮಿತ ವಾದ ವಸ್ತು ವೇನಲ್ಲ . ಬಡವರಿಗೂ ಅಗತ್ಯವಾದ ಸೌಲಭ್ಯ. ಇದರ ಸಮೀಕ್ಷೆಯನ್ನು ಸಂಬಂಧಿಸಿದವರೊಂದಿಗೆ  ನಡೆಸಿದೆ. ಸ್ವಾತಂತ್ರ್ಯ   ಬಂದು 70 ವರ್ಷವಾದರೂ  18,000 ಹಳ್ಳಿಗಳಿಗೆ ಇನ್ನು ವಿದ್ಯುತ್ ಕಂಬಗಳೆ ತಲುಪಿಲ್ಲ ಎನ್ನುವ ಸಂಗತಿ ಅಶ್ಚರ್ಯಚಕಿತನನ್ನಾಗಿ ಮಾಡಿತು.  ಅಂದಿನ ಸಭೆಗೆ ಬಂದಿದ್ದ ಅಧಿಕಾರಿಗಳನ್ನು ಸಂಬೋಧಿಸಿ  ಸಾವಿರ ದಿನಗಳಲ್ಲಿ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಸಿಗಬೇಕು ಎಂದೆ. ಇದನ್ನು ಸವಾಲಾಗಿ ಸ್ವೀಕರಿಸಿ ಎಂದು ಹೇಳಿದೆ. ಸಾವಿರ ದಿನಗಳು ಪೂರೈಸಲು ಇನ್ನೂ  ಸಮಯವಿದೆ. ಆದರೆ ನನಗೆ ಬಂದ ಮಾಹಿತಿಯ ಪ್ರಕಾರ 6,000 ಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮುಗಿದಿದೆ.    ಅಲ್ಲೆಲ್ಲ ವಿದ್ಯುತ್ ಹೋಗಿದೆ.  ಇದರ ಹೆಚ್ಚಿನ ಲಾಭ ಉತ್ತರ ಪ್ರದೇಶ ಮತ್ತು ಬಿಹಾರ ಹಳ್ಳಿಗಳಿಗೆ ದೊರೆತಿದೆ. ಈ ಕಾರ್ಯದಲ್ಲಿ ಸಂಪೂರ್ಣ ಸಹಕಾರ ಕೊಟ್ಟಿದ್ದಕ್ಕೆ
 ಶ್ರೀ ನಿತೀಶ ಜೀ ಅವರಿಗೆ ನಾನು ಋಣಿಯಾಗಿರುತ್ತೇನೆ. ಅವರ ಸಹಯೋಗದಿಂದಾಗಿ ಇಂದು ಈ ಕಾರ್ಯ ಬೇಗ ಮುಗಿಸಲಿಕ್ಕೆ ಸಾಧ್ಯವಾಗುತ್ತಿದೆ. ಭಾರತ ಸರ್ಕಾರ ಮತ್ತು ಬಿಹಾರ ಸರ್ಕಾರ ಒಟ್ಟಿಗೆ ಕೈ ಜೋಡಿಸಿದಲ್ಲಿ ದೇಶದ 18,000 ಹಳ್ಳಿಗಳಿಗೆ ವಿದ್ಯುತ್ ಕೊಡುವ ಸಂಕಲ್ಪ ಏನಿದೆ ಆದರಲ್ಲಿ ಬಿಹಾರ ತನ್ನ ಕಾರ್ಯ ಎಲ್ಲರಿಗಿಂತ ಬೇಗ ಮುಗಿಸಿ ಗೌರವನ್ವಿತ ಬಿಹಾರ ಎಂದೆನ್ನಿಸಿಕೊಳ್ಳಲಿದೆ. ಕೆಲಸದ ಗತಿ ನೋಡಿದಲ್ಲಿ ಬೇಗ ಮುಗಿಯಲಿದೆ ಎಂಬ ನಂಬಿಕೆ ನನಗಿದೆ.
 
ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ವಿದ್ಯುತ್ ಆಗಿರಬಹುದು, ರಸ್ತೆ ಅಥವಾ ರೈಲು ಆಗಿರಬಹುದು, ನೀರು ಆಗಿರಬಹುದು, ಇವೆಲ್ಲ ಸಾಮಾನ್ಯ ನಾಗರಿಕನಿಗೆ ಬದುಕಲು ಬೇಕಾದ ಅಗತ್ಯ ಸೌಲಭ್ಯಗಳು. ಈ ಸೌಲಭ್ಯಗಳನ್ನು ಒದಗಿಸಲು ಎಲ್ಲ ಪ್ರಯತ್ನಗಳು  ಸಾಗಿವೆ. ಬಿಹಾರಿನಿಂದ ಬಹು ದೊಡ್ಡ ಸಂಖ್ಯೆಯಲ್ಲಿ ನಮ್ಮ ಯುವಕರು ದೇಶದ ಉದ್ದಗಲಕ್ಕೂ ತಮ್ಮ ಜೀವನ ನಿರ್ವಹಣೆಗಾಗಿ ಹೋಗಿ ಬಂದು ಮಾಡುತ್ತಿರುತ್ತಾರೆ.  ದೂರದ ಊರುಗಳಿಗೆ ಪ್ರಯಾಣಿಸಬೇಕಾದಲ್ಲಿ ಸಾಕಷ್ಟು ಸಮಯ ಹಿಡಿಯುತ್ತದೆ ಮತ್ತು ತ್ರಾಸದಾಯಕವೂ ಹೌದು. ದೂರ ಪ್ರಯಾಣದ ರೈಲುಗಳಲ್ಲಿ ಸ್ಥಳ ಕಾದಿರಿಸುವ ಸೌಲಭ್ಯ ಸೀಮಿತವಾಗಿರುತ್ತದೆ. ಇದೀಗ ನಮ್ಮ ರೈಲ್ವೆ ಮಂತ್ರಿ ಶ್ರೀ ಸುರೇಶ್ ಪ್ರಭು ಒಂದು ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿರುತ್ತಾರೆ.  ಅದೆಂದರೆ ಪ್ರತಿಯೊಂದು ರೈಲಿಗೂ 3-4 ಬೋಗಿಗಳನ್ನು ಹೆಚ್ಚಿಗೆ ಹಾಕಲಾಗುತ್ತದೆ.  ಅವುಗಳನ್ನು ದೀನ್ ದಯಾಳ್ ಬೋಗಿಗಳೆಂದು ಕರೆಯಲಾಗುತ್ತದೆ. ಅದರಲ್ಲಿ ಯಾವೊಂದು ಮಿಸಲಾತಿಯಾಗಲಿ, ಸ್ಥಳ ಕಾದಿರುಸುವಿಕೆಯಾಗಲಿ ಇರುವುದಿಲ್ಲ. ಹೀಗಾಗಿ ಕೊನೆಯ ಕ್ಷಣದಲ್ಲಿ ಬರುವ ಯಾತ್ರಿಗಳಿಗೆ, ತಾಯಿಯ ಚಿಕಿತ್ಸೆಗೊ,  ಉಪಚಾರಕ್ಕೊ ಅಥವಾ ಕೊನೆ ಕ್ಷಣದಲ್ಲಿ ಕಾರ್ಯ ನಿಮಿತ್ತ ತೆರಳ ಬೇಕಾದ ಸಂದರ್ಭದಲ್ಲಿ ನಮ್ಮ ಯುವಕರಿಗೆ ಇದು ನೆರವಾಗಲಿದೆ. ಬಿಹಾರದ ಯುವಕರಿಗೆ ಇದೊಂದು ವರವಾಗಲಿದೆ. ನಮ್ಮ ಯುವಕರು ಇನ್ನು ಮುಂದೆ ಚಿಂತೆ ಪಡುವ ಆಗತ್ಯವಿಲ್ಲ. ಇದರ ಉಪಯೋಗ ಪಡೆಯಬೇಕಷ್ಟೆ.
 
ನಮ್ಮ ದೇಶದಲ್ಲಿ ನವ ಮಧ್ಯಮ ವರ್ಗ, ಮಧ್ಯಮ ವರ್ಗ ಎಂಬ ವರ್ಗಿಕರಣ ಉಂಟಾಗಿದೆ. ಇದು ದಿನೇ ದಿನೇ ಹೆಚ್ಚು ಮಹತ್ವ ಪಡೆದು ಕೊಳ್ಳುತ್ತಿದೆ. ಮಧ್ಯಮ ವರ್ಗದ ಸಂಖ್ಯೆಯು ಸಾಕಷ್ಟು ಹೆಚ್ಚಿದೆ. ಅವರು ಮೊದಲಿಗಿಂತ ಹೆಚ್ಚಿನ ಸೌಲಭ್ಯಗಳನ್ನು ನಿರೀಕ್ಷಿಸುತ್ತಾರೆ. ಇದನ್ನು ಗಮನದಲ್ಲಿಟ್ಟು ಕೊಂಡು ತೃತೀಯ ಶ್ರೇಣಿ ಬೋಗಿಗಳಿಗೆ ಹವಾ ನಿಯಂತ್ರಿತ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಿದ್ದೇವೆ. ಇದರಿಂದ ಅರ್ಥಿಕವಾಗಿ ಹಿಂದುಳಿದ ಸಾಮಾನ್ಯ ಮಧ್ಯಮ ವರ್ಗ, ಕನಿಷ್ಠ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಅಲ್ಲಿ ರೈಲಿನ ವೇಗವನ್ನು ಹೆಚ್ಚಿಸಲಾಗುತ್ತದೆ.  ನಮ್ಮ ದೇಶದಲ್ಲಿ ರೈಲಿನ ವ್ಯವಸ್ಥೆ ಅತ್ಯಂತ ಹಳೆಯದು. ಆದರೆ ನಾವು ಅದನ್ನು ಮತ್ತಷ್ಟು ಹಳೆಯದಾಗಲು ಬಿಡುವುದಿಲ್ಲ. ಯಾವ ರೈಲು ನಮ್ಮ ದೇಶದ ಪ್ರಗತಿಗೆ ಕಾರಣವಾಯಿತೊ ಅಂಥಹ ಹಳೆಯ ರೈಲಿಗೆ ಕಾಯಕಲ್ಪ ನೀಡ ಬೇಕಾಗಿದೆ. ನವೀಕರಿಸ ಬೇಕಾಗಿದೆ. ಈ ದಿಕ್ಕಿನಲ್ಲಿ ನಮ್ಮ ಸುರೇಶ್ ರವರು ನವೀನ್ಯತೆ ತರಲು ಸಂಕಲ್ಪ  ಮಾಡಿರುತ್ತಾರೆ.  ಹೊಸ ಹೊಸ ವಿಚಾರಗಳು ಅವರಲ್ಲಿವೆ. ವಿಶ್ವದ ಎಲ್ಲರೊಂದಿಗೂ ಚರ್ಚಿಸುತ್ತಾರೆ ಮತ್ತು ಅಲ್ಲಿಂದ ಬೇಕಾದ ಹಣವನ್ನು ಕ್ರೋಢೀಕರಿಸುತ್ತಾರೆ  . ಸಿಕ್ಕಿರುವ ಅಲ್ಪಾವಧಿಯಲ್ಲಿ ರೈಲಿಗೊಂದು ಕಾಯಕಲ್ಪ ನೀಡುವಲ್ಲಿ ಹಿಂದೆ ಬೀಳುವುದಿಲ್ಲ ಎಂಬ ನಂಬಿಕೆ ನನಗಿದೆ. ಅದು ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಷಯ ಆಗಿರ ಬಹುದು, ರೈಲಿನ ವೇಗ ಹೆಚ್ಚಿಸುವ ಸಂಗತಿಯಾಗಿರ ಬಹುದು. ಪ್ರಯಾಣಿಕರ ಬೋಗಿಗಳಲ್ಲಿ ಗುಣಾತ್ಮಕ ಸೇವೆ ಒದಗಿಸುವ ಸಂಗತಿಯಾಗಿರಬಹುದು ಅಥವಾ ರೈಲು ನಿಲ್ದಾಣಗಳಲ್ಲಿ ಮತ್ತಷ್ಟು ಸೇವೆಗಳನ್ನ ಒದಗಿಸುವ ವಿಚಾರ ಇರಬಹುದು. ರೈಲು ಪ್ರಯಾಣಿಕರ ದೂರು ಪರಿಹರಿಸುವ ವ್ಯವಸ್ಥೆಯಿರಬಹುದು, ಅಂಕಿಯ ತಂತ್ರಾಂಶದ  ಮೂಲಕ ವೊಬೈಲ್ ಫೋನಿಗೆ ರೈಲ್ವೆ ಸೇವೆಯನ್ನೊದಗಿಸುವ ವಿಚಾರವಿರಬಹುದು ಈ ಎಲ್ಲವು ಶೀಘ್ರದಲ್ಲಿಯೆ ನವೀಕರಣಗೊಳ್ಳಲಿದೆ.
 
ಈಗೊಂದು ಹೊಸ ಜವಾಬ್ದಾರಿಯನ್ನು ತೆಗೆದು ಕೊಂಡಿದ್ದೇವೆ ಅದೆಂದರೆ  ತೇಜಸ್ಸು ಎಂಬ ರೈಲು. ಇದು ಘಂಟೆಗೆ 130 ಮೈಲಿ ವೇಗದಲ್ಲಿ ಚಲಿಸುತ್ತದೆ. ನಮ್ಮ ರೈಲು ಸಾಮಾನ್ಯವಾಗಿ ಕಡಿಮೆ ವೇಗದಲ್ಲಿ ಚಲಿಸುವಂತಹುದು. ಇನ್ನು ಮುಂದೆ ಚುಕ್ ಬುಕ್ ರೈಲು ನಿಮಗೆ ಕಾಣುವುದಿಲ್ಲ. ವೇಗ ಹೆಚ್ಚಿಸುವ ಎಲ್ಲ ಪ್ರಯತ್ನಗಳು ಸಾಗಿವೆ. ಈ ದಿಕ್ಕಿನಲ್ಲಿ ತೇಜಸ್ಸಿನ ಮುಖಾಂತರ ವೇಗ ಹೆಚ್ಚಿಸುವ  ಒಂದು ಪ್ರಯತ್ನ ಇದು ಅಷ್ಟೆ.
 
ನಾನು ಈ ಎಲ್ಲ ಮಾತುಗಳ ಮುಖಾಂತರ ನಿಮಗೆ ಆಶ್ವಾಸನೆ ನೀಡ ಬಯಸುತ್ತೇನೆ. ಮುಂಬರುವ ರೈಲು ಕೇವಲ ಬಂದು ಹೋಗಿ ಮಾಡುವ ಸಾಧನ ಮಾತ್ರವಲ್ಲ, ಅದು ದೇಶದ ಅರ್ಥಿಕಕತೆಯ ಬೆಳವಣಿಗೆಗೆ ನೆರವಾಗ ಬಹುದಾದ ಬಹು ದೊಡ್ಡ ವ್ಯವಸ್ಥೆಯಾಗಲಿದೆ. ಅಂಥ ವ್ಯವಸ್ಥೆಗೆ ಈಗಿನ  ಸರ್ಕಾರ ಹೊಂದಿಕೊಳ್ಳಬೇಕಾಗಿದೆ. ಮುಂಬರುವ ದಿನಗಳಲ್ಲಿ ಇದರ ಪರಿಣಾಮವನ್ನು ತಾವು ಕಾಣಲಿದ್ದೀರಿ.
 
ಇಂದು ಈ ಮೂರು ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ.   ಇದು ಪಟ್ನಾಗೆ ಬಹು ದೊಡ್ಡ ವರದಾನವಾಗಲಿದೆ ಎಂದು ನನಗನಿಸಿದೆ. ಇಂದು ಆಗಲೇ ರೈಲು ಸಂಚಾರ ಆರಂಭವಾಗಿದೆ.  ಅದು ಮುಂಗೇರ್ ಆಗಿರಬಹುದು, ಮೊಕಾಮ್ ಆಗಿರಬಹುದು, ಈ ಮೂರು ಯೋಜನೆಗಳು ಸಂಪೂರ್ಣ ಬಿಹಾರವನ್ನು ಒಂದುಗೂಡಿಸುವಲ್ಲಿ ನೆರವಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಮುಂದಿನ ದಿನಗಳಲ್ಲಿ ಇದರಿಂದಾಗುವ ಲಾಭ ಬಿಹಾರದ ಜನರಿಗೆ ಗೊತ್ತಾಗಲಿದೆ.
 
ನಾನು ಈ ಮೂಲಕ ಬಿಹಾರದ ಜನತೆಗೆ ಶುಭ ಹಾರೈಸುತ್ತೇನೆ. ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೇ ರೈಲ್ವೇ ಮಂತ್ರಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
 
ವಂದನೆಗಳು.
***