ಪಿಎಂಇಂಡಿಯಾ
ಫ್ರಾನ್ಸ್ ಮಾಜಿ ಅಧ್ಯಕ್ಷ ಶ್ರೀ. ನಿಕೋಲಸ್ ಸರ್ಖೋಜಿ ಅವರಿಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಶ್ರೀ. ಸರ್ಕೋಜಿ ಅವರು ಗರಿಷ್ಠ ಮೌಲ್ಯದ ಹಳೆಯ ನೋಟುಗಳ ಅಮಾನ್ಯತೆ ಮತ್ತು ಇತ್ತೀಚಿಗೆ ವಿವಿಧ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಸಾಧಿಸಿದ ಯಶಸ್ಸಿಗೆ ಪ್ರಧಾನಮಂತ್ರಿಯವರನ್ನು ಅಭಿನಂದಿಸಿದರು.
ಪ್ರಧಾನಮಂತ್ರಿಯವರು, ಶ್ರೀ. ಸರ್ಕೋಜಿ ಅವರಿಗೆ ಅವರ ಇತ್ತೀಚಿನ ಪುಸ್ತಕ ‘ಟೌಟ್ ಪೌರ್ ಲ ಫ್ರಾನ್ಸ್’ಯಶಸ್ಸಿಗೆ ಅಭಿನಂದಿಸಿದರು.
ಇಬ್ಬರೂ ನಾಯಕರು ಪರಸ್ಪರ ಹಿತಾಸಕ್ತಿಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು.
AKT/SH
Former President of France, Mr. @NicolasSarkozy met PM @narendramodi in New Delhi. pic.twitter.com/oADA6oPWC3
— PMO India (@PMOIndia) March 18, 2017