ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಬಾ ಬಂದಾ ಸಿಂಗ್ ಬಹಾದ್ದೂರ್ ಜೀ ಅವರ 300ನೇ ಹುತಾತ್ಮ ದಿನದ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ನವದೆಹಲಿಯಲ್ಲಿ ಏರ್ಪಡಿಸಿರುವ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಬಾಬಾ ಬಂದಾ ಸಿಂಗ್ ಬಹಾದ್ದೂರ್ ಜೀ ಕುರಿತ ಪುಸ್ತಕ ಹಾಗೂ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಂಜಾಬ್ ಮುಖ್ಯಮಂತ್ರಿ ಶ್ರೀ ಪ್ರಕಾಶ್ ಸಿಂಗ್ ಬಾದಲ್ ಪಾಲ್ಗೊಳ್ಳಲಿದ್ದಾರೆ. ಬಾಬಾ ಬಂದಾ ಸಿಂಗ್ ಬಹಾದ್ದೂರ್ ಜೀ ಅವರ ಸ್ಮರಣಾರ್ಥ ನಾಣ್ಯವನ್ನು ಪಂಜಾಬ್ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಿಗೆ ನೀಡಲಿದ್ದಾರೆ.
ಪ್ರಧಾನಮಂತ್ರಿಯವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಬಾ ಬಂದಾ ಸಿಂಗ್ ಬಹಾದ್ದೂರ್ ಜೀ ಅವರಿಗೆ ಕಾವ್ಯ ಶ್ರದ್ಧಾಂಜಲಿಯನ್ನೂ ಸಲ್ಲಿಸಲಾಗುತ್ತದೆ.
The Prime Minister will release a book and souvenir on Baba Banda Singh Bahadurji on the occasion.
— PMO India (@PMOIndia) July 3, 2016
Punjab Chief Minister Shri Parkash Singh Badal will be a part of the programme.
— PMO India (@PMOIndia) July 3, 2016
A recently released commemorative coin on Baba Banda Singh Bahadurji will be presented to the Prime Minister and Chief Minister of Punjab.
— PMO India (@PMOIndia) July 3, 2016