ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬೇನಾಮಿ ವ್ಯವಹಾರಗಳ (ನಿಷೇಧ) (ತಿದ್ದುಪಡಿ) ಮಸೂದೆ 2015ಕ್ಕೆ ಸಂಸತ್ತಿನಲ್ಲಿ ತಿದ್ದುಪಡಿಗಳನ್ನು ಮಂಡಿಸಲು ತನ್ನ ಅನುಮೋದನೆ ನೀಡಿದೆ.
ಈ ಮಸೂದೆಯು ಕಾಯಿದೆಯಾದ ಬಳಿಕ ಅದರ ನಿಬಂಧನೆಗಳ ಅನುಷ್ಠಾನದಲ್ಲಿ ಎದುರಾಗಬಹುದಾದ ಪ್ರಾಯೋಗಿಕ ಸಂದಿಗ್ಧತೆಗಳನ್ನು ಪರಿಹರಿಸುವ ಸಲುವಾಗಿ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸುವುದು ಈ ತಿದ್ದುಪಡಿಯ ಉದ್ದೇಶವಾಗಿದೆ.
ಬೇನಾಮಿ ವ್ಯವಹಾರಗಳನ್ನು ಸಮರ್ಥವಾಗಿ ನಿರ್ಬಂಧಿಸುವುದು ಮತ್ತು ಅನ್ಯಾಯದ ಪದ್ಧತಿಗಳಿಂದ ನುಣುಚಿಕೊಳ್ಳುವುದನ್ನು ಆ ಮೂಲಕ ತಪ್ಪಿಸುವುದು ಕೂಡ ಈ ಕಾಯಿದೆಯ ಉದ್ದೇಶವಾಗಿದೆ. ಸೂಕ್ತ ಪ್ರಕ್ರಿಯೆಯ ಮೂಲಕ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲೂ ಸರ್ಕಾರಕ್ಕೆ ಇದು ಅಧಿಕಾರ ನೀಡುತ್ತದೆ. ಹೀಗಾಗಿ ಇದು ಎಲ್ಲ ಪ್ರಜೆಗಳಾದ್ಯಂತ ನ್ಯಾಯಧರ್ಮ ಉತ್ತೇಜಿಸುತ್ತದೆ. ಆದಾಗ್ಯೂ, ಆದಾಯ ಘೋಷಣೆ ಯೋಜನೆಯಡಿ ಯಾರು ತಮ್ಮ ಬೇನಾಮಿ ಆಸ್ತಿಯ ಘೋಷಣೆ ಮಾಡಿಕೊಳ್ಳುತ್ತಾರೋ ಅವರಿಗೆ ಬೇನಾಮಿ ಕಾಯಿದೆಯಿಂದ ವಿನಾಯಿತಿ ನೀಡಲಾಗಿದೆ.