Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ ಮತ್ತು ದಕ್ಷಿಣ ಆಫ್ರಿಕಾ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ ಗಳ ನಡುವೆ ಪರಸ್ಪರ ಮಾನ್ಯತೆ ಒಪ್ಪಂದಕ್ಕೆ ಸಂಪುಟ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತದ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐ.ಸಿ.ಎ.ಐ.)  ಮತ್ತು ದಕ್ಷಿಣ ಆಫ್ರಿಕಾ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ  (ಎಸ್.ಎ.ಐ.ಸಿ.ಎ.) ನಡುವೆ ಪರಸ್ಪರ  ಮಾನ್ಯತೆ ಒಪ್ಪಂದಕ್ಕೆ ಅನುಮೋದನೆ ನೀಡಿತು. 

ವಿವರಗಳು : 

ಐ.ಸಿ.ಎ.ಐ. ಮತ್ತು ಎಸ್.ಎ.ಐ.ಸಿ.ಎ. ನಡುವಣ ಪರಸ್ಪರ ಮಾನ್ಯತೆ ಒಪ್ಪಂದದನ್ವಯ (ಎಂ.ಆರ್.ಎ.)  ಲೆಕ್ಕಪತ್ರ ಅರಿವು , ವೃತ್ತಿಪರತೆ ಮತ್ತು ಬುದ್ಧಿಮತ್ತೆ ಅಭಿವೃದ್ಧಿ , ಆಯಾ ಸಂಘಟನೆಗಳ ಸದಸ್ಯರ ಬೆಳವಣಿಗೆ , ಅಭ್ಯುದಯ ಹಿತಾಸಕ್ತಿಗಳು ಮತ್ತು ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ಲೆಕ್ಕ ಪತ್ರ ಪರಿಶೋಧನೆಯಲ್ಲಿ ವೃತ್ತಿಪರತೆಯನ್ನು ಅಭಿವೃದ್ಧಿ ಮಾಡಲು ಸಂಪುಟವು ಇದಕ್ಕೆ ಅನುಮೋದನೆಯನ್ನು ನೀಡಿದೆ. 

ಈ ಒಪ್ಪಂದವು : 

I .  ಈಗಿರುವ ಐ.ಸಿ.ಎ.ಐ. ವಿದ್ಯಾರ್ಹತೆಯ ಜೊತೆಗೆ ಸ್ಥಳೀಯ ಲೆಕ್ಕಪತ್ರ ವಿದ್ಯಾರ್ಹತೆ ಹೊಂದಿರುವ ಭಾರತೀಯ ಲೆಕ್ಕ ಪತ್ರ ಪರಿಶೋಧಕರಿಗೆ ಮಾನ್ಯತೆ ಲಭಿಸಲಿದ್ದು, ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ವೃತ್ತಿಪರ ಅವಕಾಶಗಳನ್ನು ವೃದ್ಧಿಸಲು ಇದರಿಂದ ಸಹಾಯವಾಗುತ್ತದೆ.

 

  1. ಎರಡು ಲೆಕ್ಕ ಪತ್ರ ಸಂಸ್ಥೆಗಳ ಜೊತೆ ಬಲಿಷ್ಟವಾದ ಕಾರ್ಯಾಚರಣಾ ಬಾಂಧವ್ಯವನ್ನು ಬೆಳೆಸುತ್ತದೆ. 

Iii .ಎರಡೂ ಕಡೆಗಳಲ್ಲಿ  ವೃತ್ತಿಪರರ ಚಲನ ವಲನಕ್ಕೆ ಅವಕಾಶಗಳನ್ನು ಹೆಚ್ಚಿಸುತ್ತದೆ , ಎರಡೂ ದೇಶಗಳಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪಾರೋದ್ಯಮಗಳಿಗೆ ಹೊಸ ಆಯಾಮವನ್ನು ಒದಗಿಸುತ್ತದೆ. 

ಪ್ರಯೋಜನಗಳು: 

ಐ.ಸಿ.ಎ.ಐ.ಗೆ ಎಸ್.ಎ.ಐ.ಸಿ.ಎ. ಜತೆ ನಿಕಟ ಸಂಪರ್ಕ ನಿರ್ವಹಿಸುವುದಕ್ಕೆ ಇದೊಂದು ವ್ಯೂಹಾತ್ಮಕ  ಮಹತ್ವದ ವ್ಯವಸ್ಥೆಯಾಗಿದ್ದು, ಇದು ಸಂಸ್ಥೆಯ ಸದಸ್ಯರ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಐ.ಸಿ.ಎ.ಐ.ಯ ಬ್ರ್ಯಾಂಡ್  ಬಲಪಡಿಸಲು ಬಲು ದೊಡ್ಡ ಸಹಾಯ ಮಾಡಲಿದೆ. ಕಳೆದ ಕೆಲವು ವರ್ಷಗಳಲ್ಲಿ ಬೆಳೆಸಲಾದ ಸಂಬಂಧವು ವ್ಯೂಹಾತ್ಮಕ  ರೀತಿಯದ್ದಾಗಿದ್ದು , ಪರಸ್ಪರ ಲಾಭದಾಯಕವಾಗಿಯೂ ಇದೆ. ಎಂ.ಆರ್.ಎ. ಯು ಭಾರತದ ಲೆಕ್ಕ ಪತ್ರ ಪರಿಶೋಧಕರಿಗೆ ಈ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶದ ಅವಕಾಶಗಳನ್ನು ಒದಗಿಸುವ ನಿರೀಕ್ಷೆ ಇದೆ. ಮಾತ್ರವಲ್ಲ ಭಾರತಕ್ಕೆ ಹೆಚ್ಚಿನ ಪಾವತಿಯೂ ಬರುವ ಸಾಧ್ಯತೆ ಇದೆ.  

 ಹಿನ್ನೆಲೆ: 

ಐ.ಸಿ.ಎ.ಐ. ಸಂಸ್ಥೆಯು  ಭಾರತದ ಸಂಸತ್ತಿನ ಲೆಕ್ಕ ಪತ್ರ ಪರಿಶೋಧಕರ ಕಾಯ್ದೆ, 1949 ರನ್ವಯ  ಸ್ಥಾಪಿಸಲಾದ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತದಲ್ಲಿ ಲೆಕ್ಕ ಪತ್ರ ಪರಿಶೋಧಕರ ವೃತ್ತಿಯನ್ನು ನಿಯಂತ್ರಣಕ್ಕೊಳಪಡಿಸಲು ಇದನ್ನು ಜಾರಿಗೆ ತರಲಾಗಿದೆ. ಎಸ್.ಎ.ಐ.ಸಿ.ಎ.ಸಂಸ್ಥೆಯು ದಕ್ಷಿಣ ಆಫ್ರಿಕಾದ ಅಗ್ರಗಣ್ಯ ಲೆಕ್ಕಪತ್ರ ಮಂಡಳಿಯಾಗಿದ್ದು,  ವಿಶ್ವದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ.