ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆ (ಐ.ಸಿ.ಎ.ಓ)ಯ ಗುಣಮಟ್ಟಗಳು ಮತ್ತು ಶಿಫಾರಸು ಮಾಡಲಾದ ಪದ್ಧತಿಗಳ ಅನುಷ್ಠಾನ ಮತ್ತು ಪ್ರೋತ್ಸಾಹಕ್ಕಾಗಿ ತಾಂತ್ರಿಕ ಸಹಕಾರ ಕಾರ್ಯಕ್ರಮ ಜಾರಿಗೊಳಿಸಲು ಭಾರತೀಯ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮತ್ತು ಫ್ರೆಂಚ್ ನಾಗರಿಕ ವಿಮಾನಯಾನ ಪ್ರಾಧಿಕಾರ – ಫ್ರಾನ್ಸ್ ನ ಜನರೇಲ್ ಡೆ ಎಲ್ ವಿಮಾನಯಾನ ಅಂತರ್ಯುದ್ಧ ನಿರ್ದೇಶನ(ಡಿ.ಜಿ.ಎ.ಸಿ.)ದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಪೂರ್ವಾನ್ವಯ ಅನುಮತಿ ನೀಡಿದೆ.
ಎರಡೂ ದೇಶಗಳ ಸರ್ಕಾರಗಳು ಅನುಮೋದನೆ ನೀಡಿದ ಬಳಿಕ ಈ ತಿಳಿವಳಿಕೆ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳ ಪರವಾಗಿ ಅಂಕಿತಹಾಕಲಾಗುವುದು ಮತ್ತು ಇದು ನಾಲ್ಕು ವರ್ಷಗಳ ಅವಧಿಯದಾಗಿರುತ್ತದೆ.
ಈ ತಾಂತ್ರಿಕ ಸಹಕಾರ ಕಾರ್ಯಕ್ರಮವು ಡಿಜಿಸಿಎಯ ಅಧಿಕಾರಿಗಳ ಕೌಶಲ ಮತ್ತು ಪರಿಣತಿಯನ್ನು ಹೆಚ್ಚಿಸಲು ಸಹಕಾರಯಾಗಲಿದೆ. ಈ ಎಂ.ಓ.ಯು. ಎರಡೂ ಪಕ್ಷಗಳ ನಡುವೆ ಎಂಜಿನಿಯರುಗಳ, ತ್ರಂತ್ರಜ್ಞರ, ವ್ಯವಸ್ಥಾಪಕರ ಇತ್ಯಾದಿ ತರಬೇತಿಗಾಗಿ ಸಹಕಾರ ಜಾರಿಗೆ ಸಹಕಾರಿಯಾಗಲಿದೆ.
ಇದು ಡಿಜಿಎಸಿ ಮತ್ತು ಡಿಜಿಸಿಎಗೆ ಸಮಾನವಾಗಿ ಸೂಕ್ತವೆನಿಸುವ ಮತ್ತು ಪರಸ್ಪರರ ಹಿತಾಸಕ್ತಿಯ ಕ್ಷೇತ್ರಗಳ ಇತರ ಯಾವುದೇ ವಿಷಯಗಳನ್ನೂ ಒಳಗೊಂಡಿರುತ್ತದೆ.
ಈ ಉದ್ದೇಶಕ್ಕಾಗಿ, ಪಕ್ಷಕಾರರು ಈ ಕೆಳಗಿನ ಕ್ರಮಗಳ ಮೂಲಕ ಸಹಕಾರ ನೀಡುತ್ತಾರೆ:
a) ಉದ್ದೇಶಗಳನ್ನು ತಲುಪಲು ಬಳಸುವ ವಿವಿಧ ತಂತ್ರಗಳಿಗೆ ಸಂಬಂಧಿಸಿದ ಮಾಹಿತಿ ವಿನಿಮಯದ ಮೂಲಕ;
b) ಫ್ರೆಂಚ್ ಪರಿಣತರನ್ನು ಅಥವಾ ತರಬೇತುದಾರರನ್ನು ತರಬೇತಿ ಅಭಿಯಾನಕ್ಕಾಗಿ ಕಳುಹಿಸುವ ಮೂಲಕ; ಮತ್ತು
c) ಭಾರತದ ಪರಿಣತರನ್ನು ಅಥವಾ ತರಬೇತುದಾರರನ್ನು ತರಬೇತಿ ಅಭಿಯಾನಕ್ಕಾಗಿ ಫ್ರಾನ್ಸ್ ನಲ್ಲಿ ಬರಮಾಡಿಕೊಳ್ಳುವ ಮೂಲಕ.
ಈ ಎಂ.ಓ.ಯು. ಅಡಿಯಲ್ಲಿ ಪರಸ್ಪರರ ಒಪ್ಪಿಗೆಯ ಮೇರೆಗೆ ಈ ನಿರ್ದಿಷ್ಠ ಕಾರ್ಯಕ್ರಮಗಳನ್ನು ಭಾರತೀಯ ಡಿಜಿಸಿಎ ಮತ್ತು ಫ್ರಾನ್ಸ್ ನ ಡಿಜಿಸಿಎ ನಿರ್ವಹಿಸಲಿವೆ.