ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ರಕ್ಷಣಾ ಲೆಕ್ಕಪತ್ರ ಸೇವೆ (ಐಡಿಎಎಸ್) ಕೇಡರ್ ಪರಾಮರ್ಶೆಗೆ ತನ್ನ ಅನುಮೋದನೆ ನೀಡಿದೆ. ಈ ನಿರ್ಧಾರವು 23 (ಇಪ್ಪತ್ತ ಮೂರು) ಹುದ್ದೆಗಳ ಹೆಚ್ಚಳಕ್ಕೆ ಅವಕಾಶ ಒದಗಿಸುತ್ತದೆ, ಇದರಲ್ಲಿ 1 ಹುದ್ದೆ ಉನ್ನತ ಶ್ರೇಣಿ, 6 ಹುದ್ದೆಗಳು ಎಚ್.ಎ.ಜಿ. ಹಂತ, 6 ಹುದ್ದೆಗಳು ಎಸ್.ಎ.ಜಿ. ಹಂತ ಮತ್ತು 10 ಹುದ್ದೆಗಳು ಜೆಎಜಿ ಹಂತದ್ದಾಗಿವೆ ಮತ್ತು 1 ಎಚ್.ಎ.ಜಿ+, 12 ಎಸ್.ಟಿ.ಎಸ್. ಹಂತದ ಹುದ್ದೆಗಳು, ಮತ್ತು 10 ಜೆಟಿಎಸ್ ಹಂತದ ಹುದ್ದೆಗಳ ಇಳಿಕೆಗೆ ಅವಕಾಶ ನೀಡುತ್ತದೆ.
ಕಾರ್ಯನಿರ್ವಹಣೆ, ಕೇಡರ್ ವಿನ್ಯಾಸ ಮತ್ತು ಈ ಸೇವೆಗೆ ಸೇರಿದ ಅಧಿಕಾರಿಗಳ ವೃತ್ತಿಯ ಪ್ರಗತಿಯ ಅಗತ್ಯಗಳನ್ವಯ ಐಡಿಎಎಸ್ ಕೇಡರ್ ಪರಾಮರ್ಶೆ ಮಾಡಲಾಗಿದೆ.
****
AKT/VBA/SH