Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಗಾತ್ರ ತಗ್ಗಿಸಲು ಕೇಂದ್ರ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಗಾತ್ರವನ್ನು, ಓರ್ವ ಅಧ್ಯಕ್ಷರು ಮತ್ತು ಆರು ಸದಸ್ಯರು(ಒಟ್ಟಾರೆ 7)ರಿಂದ ಓರ್ವ ಅಧ್ಯಕ್ಷರು ಮತ್ತು ಮೂವರು ಸದಸ್ಯರು(ಒಟ್ಟಾರೆ 4 ಮಂದಿ)ಗೆ ತಗ್ಗಿಸಲು ಅನುಮೋದಿಸಲಾಯಿತು. ಆ ಮೂಲಕ ಹಾಲಿ ಖಾಲಿ ಇರುವ ಎರಡು ಸದಸ್ಯರ ಹುದ್ದೆಗಳನ್ನು ಮತ್ತು ಹಾಲಿ ಹೆಚ್ಚುವರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸದಸ್ಯರು 2018ರ ಸೆಪ್ಟೆಂಬರ್ ಗೆ ನಿವೃತ್ತಿಯಾಗಲಿದ್ದು, ಆ ಹುದ್ದೆಯನ್ನೂ ಸಹ ಭರ್ತಿ ಮಾಡದಿರಲು ತೀರ್ಮಾನಿಸಲಾಗಿದೆ.

ಪ್ರಯೋಜನಗಳು :

ಸರ್ಕಾರದ ಧ್ಯೇಯವಾಗಿರುವ ‘ಕನಿಷ್ಠ ಸರ್ಕಾರ – ಗರಿಷ್ಠ ಆಡಳಿತ’ ಸಾಧನೆಯ ನಿಟ್ಟಿನಲ್ಲಿ ಆಯೋಗದ ಮೂವರು ಸದಸ್ಯರ ಹುದ್ದೆಗಳನ್ನು ಕಡಿತಗೊಳಿಸಲು ಉದ್ದೇಶಿಸಲಾಗಿದೆ.

ಸರ್ಕಾರ ದೇಶದಲ್ಲಿ ಹಲವು ವಿಲೀನ ಮತ್ತು ಸೇರ್ಪಡೆ ಪ್ರಕ್ರಿಯೆಗಳನ್ನು ಕೈಗೊಂಡಿದೆ. ಸಚಿವಾಲಯ 2017ರಲ್ಲಿ ಹಲವು ಕಡೆ ಸಿಬ್ಬಂದಿಗಳ ಕನಿಷ್ಠ ಮಟ್ಟವನ್ನು ಪರಿಷ್ಕರಿಸಿದ್ದು, ಅದು ಎಲ್ಲ ಬಗೆಯ ಆಸ್ತಿಗಳ ಲೆಕ್ಕಾಚಾರ ಮತ್ತು ಒಟ್ಟಾರೆ ವಹಿವಾಟನ್ನು ಆಧರಿಸಿರುತ್ತದೆ. ಇದರಿಂದಾಗಿ ಹಲವು ಉದ್ದಿಮೆಗಳು ಆಯೋಗಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಿದ್ದ ನೋಟೀಸ್ ಗಳ ಸಂಖ್ಯೆ ಕುಸಿದಿದೆ ಮತ್ತು ಆಯೋಗದ ಕಾರ್ಯಭಾರ ಕೂಡ ತಗ್ಗಿದೆ.

ಕಾರ್ಪೊರೇಟ್ ಗಳು ಕೈಗೊಳ್ಳುತ್ತಿರುವ ವ್ಯಾಪಾರ ಪ್ರಕ್ರಿಯೆಗಳಿಗೆ ತ್ವರಿತ ಅನುಮತಿಗಳ ಪರಿಣಾಮ ಅತ್ಯಂತ ವೇಗದಲ್ಲಿ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಇದರಿಂದಾಗಿ ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಸರ್ಕಾರ ‘ಕನಿಷ್ಠ ಸರ್ಕಾರ – ಗರಿಷ್ಠ ಆಡಳಿತ’ ಧ್ಯೇಯವನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಆಯೋಗದಲ್ಲಿ ಮೂವರು ಸದಸ್ಯರ ಹುದ್ದೆಗಳನ್ನು ಕಡಿತಗೊಳಿಸಲು ಪ್ರಸ್ತಾಪಿಸಲಾಗಿದೆ.

ಹಿನ್ನೆಲೆ :

ಸ್ಪರ್ಧಾತ್ಮಕ ಕಾಯ್ದೆ 2002 ಸಕ್ಷನ್ 8(1)ರ ಪ್ರಕಾರ ಆಯೋಗದಲ್ಲಿ ಓರ್ವ ಅಧ್ಯಕ್ಷರು, ಕನಿಷ್ಠ ಎರಡಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ 6 ಸದಸ್ಯರು ಇರಬೇಕು. ಪ್ರಸ್ತುತ ಆಯೋಗದಲ್ಲಿ ಓರ್ವ ಅಧ್ಯಕ್ಷರು ಹಾಗೂ ನಾಲ್ವರು ಸದಸ್ಯರಿದ್ದಾರೆ.

ಆರಂಭದಲ್ಲಿ ಕಾಯ್ದೆಯಲ್ಲಿ ಓರ್ವ ಅಧ್ಯಕ್ಷರು ಹಾಗೂ ಗರಿಷ್ಠ ಹತ್ತು ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರಧಾನ ಪೀಠಗಳ ಸ್ಥಾಪನೆ ಹೆಚ್ಚುವರಿ ಪೀಠಗಳ ರಚನೆ ಅಥವಾ ಪೀಠಗಳ ವಿಲೀನಗಳಿಗೆ ಕನಿಷ್ಠ ಇಬ್ಬರು ಸದಸ್ಯರನ್ನು ಇಟ್ಟುಕೊಂಡು ಇವುಗಳನ್ನು ಸೃಷ್ಟಿಸಿ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಸ್ಪರ್ಧಾತ್ಮಕ(ತಿದ್ದುಪಡಿ) ಆಯೋಗ 2007ರ ಸಕ್ಷನ್ 22ಕ್ಕೆ ಮಾಡಿದ್ದ ತಿದ್ದುಪಡಿಯಲ್ಲಿ ಪೀಠಗಳ ರಚನೆ ಅಂಶವನ್ನು ತೆಗೆದು ಹಾಕಲಾಯಿತು. ಅದೇ ತಿದ್ದುಪಡಿಯಲ್ಲಿ ಓರ್ವ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರನ್ನೊಳಗೊಂಡ ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯ ಮಂಡಳಿ ಸೃಷ್ಟಿಸಲಾಯಿತು. ಇದರಿಂದಾಗಿ ಸಹಜವಾಗಿಯೇ ಆಯೋಗದ ಗಾತ್ರ ಕುಗ್ಗಿತು. ಆಗ ಓರ್ವ ಅಧ್ಯಕ್ಷರು ಮತ್ತು ಇಬ್ಬರಿಗಿಂತ ಹೆಚ್ಚು ಮತ್ತು ಆರಕ್ಕಿಂತ ಕಡಿಮೆ ಸದಸ್ಯರು ಇರುವಂತೆ ಮಾಡಲಾಯಿತು.

ಆಯೋಗ ಸ್ಥಾಪನೆಯಾದ ದಿನದಿಂದಲೂ ಅದು ಕೊಲಿಜಿಯಂ ರೀತಿ ಕಾರ್ಯ ನಿರ್ವಹಿಸುತ್ತಿದೆ. ಜಪಾನ್, ಅಮೆರಿಕ, ಬ್ರಿಟನ್, ಮತ್ತಿತರ ಪ್ರಮುಖ ದೇಶಗಳಲ್ಲಿಯೂ ಸಹ ಸ್ಪರ್ಧಾತ್ಮಕ ಆಯೋಗಗಳು ಇಂತಹುದೇ ಗಾತ್ರವನ್ನು ಹೊಂದಿವೆ.