Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಕೆನಡಾ ನಡುವೆ ಐ.ಪಿ.ಆರ್.ಎಸ್ ಕುರಿತ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಕೆನಡಾ ನಡುವೆ ಏರ್ಪಟ್ಟ ತಿಳುವಳಿಕಾ ಒಪ್ಪಂದಕ್ಕೆ ಪೂರ್ವಾನ್ವಯಗೊಂಡಂತೆ ಅನುಮೋದನೆ ನೀಡಿತು. ಈ ತಿಳುವಳಿಕಾ ಒಡಂಬಡಿಕೆಗೆ 2018 ರ ಫೆಬ್ರವರಿ 23 ರಂದು ಅಂಕಿತ ಹಾಕಲಾಗಿದ್ದು , ಇದು ಬೌದ್ಧಿಕ ಆಸ್ತಿ (ಐ.ಪಿ.) ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಕಾರ್ಯಚಟುವಟಿಕೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಈ ತಿಳುವಳಿಕಾ ಒಡಂಬಡಿಕೆಯು ಅನ್ವೇಷಣೆ, ಸೃಜನಶೀಲತೆ ಮತ್ತು ಉಭಯ ದೇಶಗಳಲ್ಲೂ ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ಈ ತಿಳುವಳಿಕಾ ಒಡಂಬಡಿಕೆಯು ಉಭಯ ದೇಶಗಳು ಉತ್ತಮ ಪದ್ದತಿಗಳನ್ನು ವಿನಿಮಯಗೊಳಿಸಲು ಮತ್ತು ಐ.ಪಿ.ಆರ್.ಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ತರಬೇತಿ ಕಾರ್ಯಕ್ರಮಗಳು ಮತ್ತು ತಾಂತ್ರಿಕ ವಿನಿಮಯಗಳಿಗೆ ಸಂಬಂಧಿಸಿ ಒಗ್ಗೂಡಿ ಕೆಲಸ ಮಾಡುವುದಕ್ಕೆ ವಿಸ್ತಾರವಾದ ಮತ್ತು ಹೊಂದಾಣಿಕೆ ಮಾಡಬಹುದಾದ ಚೌಕಟ್ಟೊಂದನ್ನು ಒದಗಿಸುತ್ತದೆ. ಮತ್ತು ಭೌದ್ದಿಕ ಆಸ್ತಿ ಹಕ್ಕುಗಳನ್ನು (ಐ.ಪಿ.ಆರ್.ಗಳು) ರಕ್ಷಿಸಲು ಉತ್ತಮ ಹಾದಿಗಳನ್ನು ಒದಗಿಸುತ್ತದೆ.

ಈ ತಿಳುವಳಿಕಾ ಒಪ್ಪಂದದಡಿಯಲ್ಲಿ ಈ ಕೆಳಗಿನ ಆದ್ಯತಾ ಕ್ರಮಗಳು ಸೇರಿವೆ.

೧) ಉತ್ತಮ ಪದ್ದತಿ, ಅನುಭವಗಳ ವಿನಿಮಯ ಮತ್ತು ಐ.ಪಿ. ಜಾಗೃತಿಯ ಬಗ್ಗೆ ಉಭಯದೇಶಗಳ ಜನರಲ್ಲಿ , ವ್ಯಾಪಾರೋದ್ಯಮಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹೇಗೆ ತಿಳುವಳಿಕೆ ಮೂಡಿಸಬಹುದು ಎಂಬ ಮಾಹಿತಿಯ ವಿನಿಮಯ.

೨) ಐ.ಪಿ ಕ್ಷೇತ್ರದಲ್ಲಿ ವಿಶೇಷವಾಗಿ ತೊಡಗಿಕೊಂಡಿರುವ ಮಾನವ ಸಂಪನ್ಮೂಲದ ಜತೆ ಸಂವಾದಕ್ಕೆ ತಜ್ಞರ ವಿನಿಮಯ.

೩) ಕೈಗಾರಿಕೋದ್ಯಮ, ವಿಶ್ವವಿದ್ಯಾಲಯಗಳು, ಸಂಶೋಧನಾ ಮತ್ತು ಅಭಿವೃದ್ದಿ ಸಂಘಟನೆಗಳು ಮತ್ತು ಸಣ್ಣ ಹಾಗು ಮಧ್ಯಮ ಗಾತ್ರದ ಕೈಗಾರಿಕೆಗಳು (ಎಸ್.ಎಂ.ಇ.ಗಳು ) ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ , ತರಬೇತಿ ಹೊಂದುವ ಮೂಲಕ, ಮತ್ತು ಸಹಭಾಗಿಗಳು ಜಂಟಿಯಾಗಿ ಅಥವಾ ಏಕಾಂಗಿಯಾಗಿ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಐ.ಪಿ.ಯ ಉತ್ತಮ ಪದ್ದತಿಗಳು, ಅನುಭವಗಳು ಮತ್ತು ಮಾಹಿತಿಯ ವಿನಿಮಯ ಮತ್ತು ಪ್ರಸಾರ.

೪) ಸ್ವಯಂಚಾಲಿತ ತಂತ್ರಜ್ಞಾನ ವ್ಯವಸ್ಥೆಯ ಅಭಿವೃದ್ದಿ, ಆಧುನೀಕರಣ ಯೋಜನೆಗಳ ಅನುಷ್ಟಾನ , ಐ.ಪಿ.ಯಲ್ಲಿ ಹೊಸ ಮತ್ತು ಹಾಲಿ ಇರುವ ದಾಖಲೀಕರಣ ಮತ್ತು ಮಾಹಿತಿ ವ್ಯವಸ್ಥೆ ಮತ್ತು ಐ.ಪಿ.ನಿರ್ವಹಣೆಯ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸಹಕಾರ.

೫) ಸಾಂಪ್ರದಾಯಿಕ ಜ್ಞಾನವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ತಿಳಿದುಕೊಳ್ಳಲು ಸಹಕಾರ, ಮತ್ತು ಸಾಂಪ್ರದಾಯಿಕ ಜ್ಞಾನಕ್ಕೆ ಸಂಬಂಧಿಸಿದ ದತ್ತಾಂಶಗಳ ಆಧಾರದಲ್ಲಿ ಉತ್ತಮ ಪದ್ದತಿಗಳ ವಿನಿಮಯ ಮತ್ತು ಹಾಲಿ ಇರುವ ಐ.ಪಿ. ವ್ಯವಸ್ಥೆಯ ಬಗೆ ಜಾಗೃತಿ ಮೂಡಿಸುವುದು.

೬) ಸ್ಥಳೀಯ ಐ.ಪಿ. ಮತ್ತು ವ್ಯಾಪಾರೋದ್ಯಮ ಸಮುದಾಯಗಳಿಗೆ ಐ.ಪಿ. ಸಂಬಂಧಿ ತರಬೇತಿಯಲ್ಲಿ ಸಹಯೋಗ , ಮತ್ತು

೭) ಈ ತಿಳುವಳಿಕಾ ಒಡಂಬಡಿಕೆಯ ವ್ಯಾಪ್ತಿಯ ಅಡಿಯಲ್ಲಿ ಪರಸ್ಪರ ನಿರ್ಧರಿಸಬಹುದಾದ ಇತರ ಯಾವುದೇ ಸಹಕಾರ ಕಾರ್ಯಚಟುವಟಿಕೆಗಳು.