Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಜಪಾನ್ ನಡುವೆ ರೈಲ್ವೆ ಸುರಕ್ಷತೆ ಸಹಕಾರಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರೈಲ್ವೆ ಸುರಕ್ಷತೆ ಕುರಿತಂತೆ ಭಾರತ ಮತ್ತು ಜಪಾನ್ ನಡುವಿನ ಸಹಕಾರ ಒಪ್ಪಂದ(ಎಂ.ಓ.ಸಿ.)ದ ಅಂಕಿತಕ್ಕೆ ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ. ಈ ಎಂ.ಓ.ಸಿ.ಗೆ ಈಗಾಗಲೇ 2017ರ ಫೆಬ್ರವರಿಯಲ್ಲಿ ಅಂಕಿತ ಹಾಕಲಾಗಿದೆ.

ಎಂ.ಓ.ಸಿ.ಯ ಅಂಕಿತ ಈ ಕೆಳಗಿನ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಅವಕಾಶ ನೀಡುತ್ತದೆ:

i. ಹಳಿಗಳ ಸುರಕ್ಷತೆ (ಉದಾಹರಣೆಗೆ ಹಳಿಗಳ ಬೆಸುಗೆ, ರೈಲುಗಳ ಪರೀಕ್ಷೆ, ಹಳಿಗಳ ಸರ್ಕೀಟ್ ಇತ್ಯಾದಿ)

ii. ರೈಲ್ವೆ ಹಳಿ ಸುರಕ್ಷತೆಗೆ ಸಂಬಂಧಿಸಿದಂತೆ ಇತ್ತೀಚಿನ ತಂತ್ರಜ್ಞಾನ (ಸ್ವಯಂ ಪರೀಕ್ಷಾ ತಂತ್ರಜ್ಞಾನ ಇತ್ಯಾದಿ)

iii. ರೋಲಿಂಗ್ ಸ್ಟಾಕ್ ಸುರಕ್ಷತೆ ( ಉದಾಹರಣೆಗೆ ನಿರ್ವಹಣೆ ಇತ್ಯಾದಿ)

iv. ಅಪಘಾತದ ಕಾರಣಗಳ ವಿಶ್ಲೇಷಣೆಯ ಆಧಾರದ ಮೇಲೆದೊಡ್ಡ ರೈಲ್ವೆ ಅಫಘಾತ ತಡೆಯ ಪರಿಗಣನೆಯೊಂದಿಗೆ ಎಂ.ಓ.ಸಿ.ಯ ಸ್ವರೂಪದೊಳಗೆ ಎರಡೂ ಕಡೆಯವರು ಜಂಟಿಯಾಗಿ ಒಪ್ಪಿದ ಇನ್ನಾವುದೇ ಇತರೆ ಸೂಕ್ತ ರೈಲ್ವೆ ಸುರಕ್ಷತೆ ವಿಚಾರ.

ರೈಲ್ವೆ ವಲಯದಲ್ಲಿನ ಇತ್ತೀಚಿನ ಅಭಿವೃದ್ಧಿ ಮತ್ತು ಜ್ಞಾನದ ವಿನಿಮಯ ಮತ್ತು ಸಮಾಲೋಚನೆಯೊಂದಿಗೆ ಭಾರತೀಯ ರೈಲ್ವೆಗೆ ಈ ಎಂ.ಓ.ಸಿ.ಯು ವೇದಿಕೆಯನ್ನು ಒದಗಿಸುತ್ತದೆ. ಈ ಎಂ.ಓ.ಸಿ.ಯಡಿಯಲ್ಲಿನ ಸಹಕಾರ ಇವುಗಳನ್ನು ಒಳಗೊಂಡಿದೆ:

a. ತಜ್ಞರ ರವಾನೆ.

b. ಪ್ರಮುಖ ಸಿಬ್ಬಂದಿಗೆ ಜಪಾನ್ ನಲ್ಲಿ ತರಬೇತಿ

c. ಉತ್ತಮ ಪದ್ಧತಿಗಳ ಮತ್ತು ಮಾಹಿತಿ ವಿನಿಮಯ

d. ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟದ ಸಂಸ್ಥೆ (ಆರ್.ಡಿ.ಎಸ್.ಓ.) ಮತ್ತು ಜಪಾನ್ ನ ರಾಷ್ಟ್ರೀಯ ಸಂಚಾರ ಸುರಕ್ಷತೆ ಮತ್ತು ಪರಿಸರ ಪ್ರಯೋಗಾಲಯದ ಕೊಡುಗೆ ಸೇರಿದಂತೆ ಎಲ್ಲಿ ಅಗತ್ಯವೋ ಅಲ್ಲಿ ಆಯಾ ರಾಷ್ಟ್ರಗಳ ಕಾನೂನು ಮತ್ತು ನಿಯಂತ್ರಣಗಳಿಗೆ ಒಳಪಟ್ಟು ಇತರ ಸಂಸ್ಥೆಗಳ, ಸಂಘಟನೆಗಳ ಮತ್ತು ಸಚಿವಾಲಯಗಳ ಪಾಲ್ಗೊಳ್ಳುವಿಕೆಗೆ ಅವಕಾಶ.

****

AKT/VBA/SH