ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಹಾಕಿರುವ ಅಂಕಿತಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 08.07.2016ರಂದು ಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದದ ಪ್ರಮುಖ ಉದ್ದೇಶಗಳು ಹೀಗಿವೆ:
a) ಪ್ರವಾಸೋದ್ಯಮ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ವಿಸ್ತರಣೆಗಾಗಿ;
b) ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ದತ್ತಾಂಶಗಳ ವಿನಿಮಯಕ್ಕಾಗಿ;
c) ಹೊಟೆಲುಗಳು ಮತ್ತು ಪ್ರವಾಸೋದ್ಯಮ ಕಾರ್ಯಚರಣೆದಾರರು ಸೇರಿದಂತೆ ಪ್ರವಾಸೋದ್ಯಮ ಬಾಧ್ಯಸ್ಥರ ನಡುವೆ ಸಹಕಾರ ಉತ್ತೇಜನಕ್ಕಾಗಿ.
d)ಮಾನವ ಸಂಪನ್ಮೂಲ ಅಭಿವೃದ್ಧಿ ಸಹಕಾರಕ್ಕಾಗಿ ವಿನಿಮಯ ಕಾರ್ಯಕ್ರಮ ರೂಪಿಸಲು;
e) ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ ಹೂಡಿಕೆಗಾಗಿ;
f) ಎರಡೂ ಕಡೆಗಳಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಪ್ರವಾಸ ಏರ್ಪಡಿಸುವವರು/ಮಾಧ್ಯ/ಅಭಿಪ್ರಾಯ ರೂಪಿಸುವವರು ಮತ್ತು ಪ್ರವಾಸಿಗರ ಭೇಟಿಗೆ ಉತ್ತೇಜನ ನೀಡುವುದು;
g)ಶಿಕ್ಷಣ, ಮಾರುಕಟ್ಟೆ, ತಾಣ ಅಭಿವೃದ್ಧಿ ಮತ್ತು ನಿರ್ವಹಣೆಯ ಉತ್ತೇಜನ ಕ್ಷೇತ್ರಗಳ ಅನುಭವಗಳ ವಿನಿಮಯಕ್ಕಾಗಿ;
h)ಪರಸ್ಪರರ ರಾಷ್ಟ್ರಗಳಲ್ಲಿ ಪ್ರವಾಸ ಮೇಳ/ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು.
i) ಸುರಕ್ಷಿತ, ಗೌರವಾನ್ವಿತ ಮತ್ತು ಸುಸ್ಥಿರ ಪ್ರವಾಸೋದ್ಯಮ ಉತ್ತೇಜಿಸುವುದು.
ಹಿನ್ನೆಲೆ:
ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ಆತ್ಮೀಯ ದ್ವಿಪಕ್ಷೀಯ ಬಾಂಧವ್ಯವನ್ನು ಹೊಂದಿವೆ. ದಕ್ಷಿಣ ಆಫ್ರಿಕಾವು ಭಾರತಕ್ಕೆ ಹೊರಹೊಮ್ಮುತ್ತಿರುವ ಪ್ರವಾಸೋದ್ಯಮ ಮಾರುಕಟ್ಟೆ ಮೂಲವಾಗಿದೆ (ಭಾರತವು 2015ರಲ್ಲಿ ದಕ್ಷಿಣ ಆಫ್ರಿಕಾದಿಂದ ಸುಮಾರು 51922 ಪ್ರವಾಸಿಗಳನ್ನು ಆಕರ್ಷಿಸಿದೆ). ಭಾರತವು ವಿದ್ಯುನ್ಮಾನ ಪ್ರವಾಸಿ ವೀಸಾ (ಇಟಿವಿ) ಸೌಲಭ್ಯವನ್ನು ದಕ್ಷಿಣ ಆಫ್ರಿಕಾ ಪ್ರಜೆಗಳಿಗೆ ವಿಸ್ತರಿಸಿದ್ದು, ಇದು ಎರಡೂ ಕಡೆಗಳಿಗೆ ಪ್ರವಾಸಕ್ಕೆ ಉತ್ತಮ ಸ್ಪಂದನೆ ಒದಗಿಸಿದೆ. ಈ ತಿಳಿವಳಿಕೆ ಒಪ್ಪಂದವು ಈ ಉದಯೋನ್ಮುಖ ಮೂಲದ ಮಾರುಕಟ್ಟೆಯಲ್ಲಿ ಆಗಮನದ ಹೆಚ್ಚಳಕ್ಕೆ ಸಾಧನವಾಗಲಿದೆ.
AD/VBA/SH