Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಪೋರ್ಚುಗಲ್ ನಡುವೆ ಐಟಿ ಮತ್ತು ಇ ಕ್ಷೇತ್ರದ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಪೋರ್ಚುಗಲ್ ನಡುವೆ ಐಟಿ ಮತ್ತು ಇ ಕ್ಷೇತ್ರದ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ (ಎಂ.ಓ.ಯು) ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಜನವರಿ 6ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.

ಈ ತಿಳಿವಳಿಕೆ ಒಪ್ಪಂದವು, ಆಯಾ ರಾಷ್ಟ್ರಗಳ ಕಾನೂನು ಮತ್ತು ನಿಯಂತ್ರಣಗಳ ಅನ್ವಯ ಐಟಿ ಮತ್ತು ಇ ಕ್ಷೇತ್ರದಲ್ಲಿ ಪರಸ್ಪರ ಹಿತ ಮತ್ತು ಸಮಾನತೆಯ ಆಧಾರದ ಮೇಲೆ ದೀರ್ಘ ಕಾಲೀನ ಮತ್ತು ಸುಸ್ಥಿರ ಸಹಕಾರದ ಅಭಿವೃದ್ಧಿಗೆ ನೆರವಾಗಲಿದೆ.

*****

AKT/VBA/SH