Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಫ್ರಾನ್ಸ್ ನಡುವೆ ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ ಕುರಿತ ಒಪ್ಪಂದಕ್ಕೆ ಸಂಪುಟ ಅಂಗೀಕಾರ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಫ್ರಾನ್ಸ್ ನಡುವೆ 2018ರ ಮಾರ್ಚ್ ತಿಂಗಳಲ್ಲಿ ಅಂಕಿತ ಹಾಕಲಾದ ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ ಕುರಿತ ಒಪ್ಪಂದದ ಪರಾಮರ್ಶೆ ನಡೆಸಿತು.ಈ ಒಪ್ಪಂದವು ಐದು ವರ್ಷ ಕಾಲ ಜಾರಿಯಲ್ಲಿರುತ್ತದೆ.

ವಿವರಗಳು

ಈ ಒಪ್ಪಂದದ ಉದ್ದೇಶ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ, ನಗರ ಜನಸಮೂಹ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿ, ನಗರ ಜನವಸತಿ ಮತ್ತು ಸೌಲಭ್ಯಗಳು ( ನೀರು ಸರಬರಾಜು ಮತ್ತು ತ್ಯಾಜ್ಯ ಸಾಗಾಣಿಕೆ ವ್ಯವಸ್ಥೆಗಳು) , ಘನ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ, ಭೂಕಂದಕಗಳಲ್ಲಿ ತ್ಯಾಜ್ಯ ಪರಿಹಾರ , ಆದಾಯವಿಲ್ಲದ ನೀರಿನ ನಿರ್ವಹಣೆ, ನೀರಿನ ಪುನರ್ಬಳಕೆ ಮತ್ತು ಸಂಸ್ಕರಣೆ, ತಂತ್ರಜ್ಞಾನ ವರ್ಗಾವಣೆ, ಅಂತರ್ಜಲ ಹಿಡಿದಿಟ್ಟುಕೊಳ್ಳುವ ಭೂಮಿಯ ಒಳಗಿನ ವ್ಯವಸ್ಥೆಗೆ ಕೃತಕ ಜಲಪೂರಣ ಮಾಡುವ ಮೂಲಕ ತಾಜಾ ನೀರಿನ ಸಂರಕ್ಷಣೆ, ಆರ್ಥಿಕ ವೃತ್ತ, ಸಾಮೂಹಿಕ ವಸತಿ, ಹಸಿರು ಮನೆಗಳು, ನಗರ ಯೋಜನೆ, ಪರಂಪರೆ, ಮಾನವ ಸಂಪನ್ಮೂಲ ಅಭಿವೃದ್ದಿ, ಸಾಮರ್ಥ್ಯ ವರ್ಧನೆ, ಮತ್ತು ಪರಸ್ಪರ ಒಪ್ಪಿಕೊಂಡ ಇತರ ವಲಯಗಳಲ್ಲಿ ಸಹಕಾರ

ಅನುಷ್ಟಾನ ಕಾರ್ಯತಂತ್ರ

ಈ ಒಪ್ಪಂದದಡಿಯಲ್ಲಿ ಸಹಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ರೂಪುರೇಖೆ ರೂಪಿಸಲು ಮತ್ತು ಅನುಷ್ಟಾನಕ್ಕಾಗಿ ಜಂಟಿ ಕಾರ್ಯಪಡೆಯನ್ನು (ಜೆ.ಡಬ್ಲ್ಯು.ಜಿ.) ಸ್ಥಾಪಿಸಲಾಗುವುದು. ಜಂಟಿ ಕಾರ್ಯಪಡೆಯು ವರ್ಷಕ್ಕೊಂದು ಬಾರಿ ಸಭೆ ಸೇರಲಿದ್ದು ಪರ್ಯಾಯ ರೀತಿಯಲ್ಲಿ ಒಂದು ವರ್ಷ ಭಾರತದಲ್ಲಿ ಸಭೆ ನಡೆದರೆ ಮತ್ತೊಂದು ವರ್ಷ ಫ್ರಾನ್ಸ್ ನಲ್ಲಿ ಸಭೆ ನಡೆಯಲಿದೆ.

ಪ್ರಮುಖ ಪರಿಣಾಮ

ಈ ಒಪ್ಪಂದವು ಎರಡೂ ದೇಶಗಳ ನಡುವೆ ಸುಸ್ಥಿರ ನಗರ ಅಭಿವೃದ್ದಿ ಕ್ಷೇತ್ರಕ್ಕೆ ಸಂಬಂಧಿಸಿ ದ್ವಿಪಕ್ಷೀಯ ಸಹಕಾರ ವರ್ಧನೆಗೆ ಪ್ರಚೋದಕವಾಗಲಿದೆ.

ಪ್ರಯೋಜನಗಳು

ಈ ಒಪ್ಪಂದವು ಸ್ಮಾರ್ಟ್ ನಗರಗಳ ಅಭಿವೃದ್ದಿ, ನಗರ ಸಾಮೂಹಿಕ ಸಾರಿಗೆ ವ್ಯವಸ್ಥೆ, ನಗರ ಜನ ವಸತಿ ಮತ್ತು ಸೌಲಭ್ಯಗಳು (ನೀರು ಸರಬರಾಜು ಮತ್ತು ತ್ಯಾಜ್ಯ ಸಾಗಾಟ ವ್ಯವಸ್ಥೆಗಳು) , ಘನ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ, ಭೂಕಂದಕಗಳಲ್ಲಿ ತುಂಬಿಸುವಿಕೆ ಪರಿಹಾರ, ಕೈಗೆಟಕುವ ದರದಲ್ಲಿ ವಸತಿ, ತ್ಯಾಜ್ಯ ನಿರ್ವಹಣೆ, ನಗರ ಪರಿಸರ ಮತ್ತು ಪರಂಪರೆ ಸಂರಕ್ಷಣೆ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವ ನಿರೀಕ್ಷೆ ಇದೆ.