ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಫ್ರಾನ್ಸ್ ನಡುವೆ ಪುನರ್ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿ 2018 ರ ಮಾರ್ಚ್ 10 ರಂದು ಹೊಸದಿಲ್ಲಿಯಲ್ಲಿ ಸಹಿ ಹಾಕಲಾದ ತಿಳುವಳಿಕಾ ಒಡಂಬಡಿಕೆಗೆ ಪೂರ್ವಾನ್ವಯಗೊಂಡಂತೆ ತನ್ನ ಅನುಮೋದನೆ ನೀಡಿತು.
ಇದರನ್ವಯ ಎರಡೂ ದೇಶಗಳು ಸಂಶೋಧನಾ/ ಪ್ರದರ್ಶನ/ ಪೈಲೆಟ್ ಯೋಜನೆಗಳನ್ನು ಗುರುತಿಸಿ ಭಾರತದ ರಾಷ್ಟ್ರೀಯ ಸೌರ ಶಕ್ತಿ ಸಂಸ್ಥೆ (ಎನ್.ಐ.ಎಸ್.ಇ.) ಮತ್ತು ಫ್ರಾನ್ಸಿನ ಸಿ.ಇ.ಎ. ಜೊತೆಯಲ್ಲಿ ಪರಸ್ಪರ ಲಾಭದಾಯಕವಾಗುವ ರೀತಿಯಲ್ಲಿ ಅನುಷ್ಟಾನಿಸುವ ಉದ್ದೇಶವನ್ನು ಹೊಂದಿವೆ. ಪರಸ್ಪರ ಒಪ್ಪಂದದ ಆಧಾರದಲ್ಲಿ ಉಭಯ ದೇಶಗಳು ಐ.ಎಸ್.ಎ. ಸದಸ್ಯ ರಾಷ್ಟ್ರಗಳಲ್ಲಿ ಪೈಲೆಟ್ ಯೋಜನೆಯ ಅನುಷ್ಟಾನದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿವೆ. ಜಂಟಿ ಸಂಶೋಧನಾ ಯೋಜನೆಗಳು, ಜಂಟಿ ಸಂಶೋಧನೆ ಮತ್ತು ಅಭಿವೃದ್ದಿ , ಜಂಟಿ ಕಾರ್ಯಾಗಾರಗಳು, ಸಂಶೋಧನೆ ಮತ್ತು ತಂತ್ರಜ್ಞಾನ ವಿನಿಮಯ , ತಜ್ಞತೆಯ ವಿನಿಮಯವೂ ಸೇರಿದಂತೆ ಹಲವು ವಿಧದಲ್ಲಿ ಸಹಯೋಗಕ್ಕೆ ಇದರಲ್ಲಿ ಅವಕಾಶವಿದೆ. ಈ ತಿಳುವಳಿಕಾ ಒಡಂಬಡಿಕೆ ತಜ್ಞತೆಯ ವಿನಿಮಯ ಮತ್ತು ಮಾಹಿತಿಯ ಜಾಲದ ಉದ್ದೇಶವನ್ನು ಒಳಗೊಂಡಿದೆ.
ಈ ತಿಳುವಳಿಕಾ ಒಡಂಬಡಿಕೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಸಹಾಯವಾಗಲಿದೆ.
***