ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಸಮೂಹ ಮಾಧ್ಯಮ ಕ್ಷೇತ್ರದಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ತಿಳಿವಳಿಕೆ ಒಪ್ಪಂದದ ಮುಖ್ಯಾಂಶಗಳು
ಸಹಕಾರದ ಪ್ರಮುಖ ಕ್ಷೇತ್ರಗಳು:
i. ಸಮೂಹ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರದ ಸಿಬ್ಬಂದಿಯ ತರಬೇತಿ/ಅಧ್ಯಯನ ಪ್ರವಾಸಕ್ಕೆ ಎರಡೂ ರಾಷ್ಟ್ರಗಳು ಅವಕಾಶ ಕಲ್ಪಿಸುವುದು.
ii. ಸಮೂಹ ಮಾಧ್ಯಮ ಕ್ಷೇತ್ರದಲ್ಲಿನ ತಜ್ಞರ ವಿನಿಮಯ ಉತ್ತೇಜಿಸುವುದು.
iii. ಸಮೂಹ ಮಾಧ್ಯಮ ಮತ್ತು ಸಂವಹನ ಕ್ಷೇತ್ರದ ಶೈಕ್ಷಣಿಕ, ತರಬೇತಿ ಮತ್ತು ಸಂಶೋಧನೆ ಸಂಸ್ಥೆಗಳ ನಡುವೆ ಸಹಕಾರ ಉತ್ತೇಜಿಸುವುದು. ಈ ಸಂಸ್ಥೆಗಳು ಪ್ರಕಟಿಸಿದ ಕೃತಿಗಳ ವಿನಿಮಯಕ್ಕೂ ಅವಕಾಶ ನೀಡುವುದು.
iv. ಸಮೂಹ ಮಾಧ್ಯಮ ಚಟುವಟಿಕೆಗಲು ಮತ್ತು ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಅಂಕಿಸಂಖ್ಯೆಗಳ ದತ್ತಾಂಶ ಕ್ಷೇತ್ರದ ನಿಯಂತ್ರಣದ ಅನುಭವ ವಿನಿಮಯ ಮತ್ತು ಸಹಕಾರ.
ಮಾನ್ಯತೆ ಪಡೆದ ಸಮೂಹ ಮಾಧ್ಯಮ ಪ್ರತಿನಿಧಿಗಳಿಗೆ ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಣೆಗಾಗಿ ಅಗತ್ಯ ಬಿದ್ದರೆ ಪರಸ್ಪರ ಆಧಾರದ ಮೇಲೆ ಕಚೇರಿಯನ್ನು ಸ್ಥಾಪಿಸಲು ಅವಕಾಶ ಕಲ್ಪಿಸುವುದು.
AKT/VBA/SH