Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಬ್ರೆಜಿಲ್ ನಡುವೆ ಸಾಮಾಜಿಕ ಸುರಕ್ಷಾ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಗಣರಾಜ್ಯ ಮತ್ತುಬ್ರೆಜಿಲ್ ಒಕ್ಕೂಟ ಗಣರಾಜ್ಯದ ನಡುವೆ ಸಾಮಾಜಿಕ ಸುರಕ್ಷೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿತು.

ಹಿನ್ನೆಲೆ

ವಿದೇಶಗಳಲ್ಲಿ ಅಲ್ಪಕಾಲಾವಧಿಗೆ ಕೆಲಸ ಮಾಡುತ್ತಿರುವ ಭಾರತೀಯ ವೃತ್ತಿಪರರು/ ಕೌಶಲ್ಯಯುಕ್ತ ಕೆಲಸಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತವು ಇತರ ದೇಶಗಳ ಜೊತೆ ದ್ವಿಪಕ್ಷೀಯ ಸಾಮಾಜಿಕ ಸುರಕ್ಷಾ ಒಪ್ಪಂದಗಳನ್ನು (ಎಸ್.ಎಸ್.ಎ.ಗಳು) ಮಾಡಿಕೊಳ್ಳುತ್ತಿದೆ. ಭಾರತೀಯ ಕಂಪೆನಿಗಳ ಸ್ಪರ್ಧಾತ್ಮಕತೆ ಹೆಚ್ಚಳಕ್ಕೂ ಇದು ಅನುಕೂಲವಾಗುತ್ತಿದೆ. ಎಸ್.ಎಸ್.ಎ.ಗಳು ಸ್ಥೂಲವಾಗಿ ಈ ಕೆಳಗಿನ ಮೂರು ಪ್ರಯೋಜನಗಳನ್ನುಒದಗಿಸುತ್ತವೆ.

i. ಕಾರ್ಮಿಕರು ದುಪ್ಪಟ್ಟು ಸಾಮಾಜಿಕ ಸುರಕ್ಷಾ ದೇಣಿಗೆ ನೀಡುವುದನ್ನು ತಡೆಯುತ್ತದೆ;

ii. ಪ್ರಯೋಜನಗಳ ಲಭ್ಯತೆಯನ್ನುಸುಲಭ ಮಾಡುತ್ತದೆ.

iii. ಉಭಯ ದೇಶಗಳಲ್ಲಿ ದೇಣಿಗೆ ಅವಧಿಯನ್ನು ಸರಾಸರಿ ಮಾಡಿಪ್ರಯೋಜನಗಳು ನಷ್ಟವಾಗುವುದನ್ನು ತಡೆಯುತ್ತದೆ.

ಒಪ್ಪಂದವು ವಿದೇಶಗಳಲ್ಲಿ ಕೆಲಸ ಮಾಡುವಭಾರತೀಯರಿಗೆ ಅಂಗವೈಕಲ್ಯ ವಿಮಾ ಪ್ರಯೋಜನಗಳನ್ನೂ ಒದಗಿಸುತ್ತದೆ. ಇದುವರೆಗೆ ಭಾರತವು 18 ದೇಶಗಳ ಜೊತೆ ಎಸ್.ಎಸ್.ಎ.ಗಳಿಗೆಅಂಕಿತ ಹಾಕಿದೆ.

ಜಿನೇವಾದಲ್ಲಿ 2016ರ ಜೂನ್‌ ತಿಂಗಳ 9 ರಂದು ನಡೆದ ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಜೊತೆಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಒಪ್ಪಂದಕ್ಕೆ ಅಂಕಿತ ಹಾಕುವುದರ ಬಗ್ಗೆಚರ್ಚೆಯಾಗಿತ್ತು, ಮತ್ತು ಹೊಸದಿಲ್ಲಿಯಲ್ಲಿ 2016 ರ ಸೆಪ್ಟೆಂಬರ್ 27-28 ರಂದು ನಡೆದ ಸಭೆಯಲ್ಲೂ ಚರ್ಚೆ ನಡೆದಿತ್ತು. ಬ್ರಿಕ್ಸ್‌ ರಾಷ್ಟ್ರ ಗಳ ನಡುವೆ ಸಾಮಾಜಿಕ ಸುರಕ್ಷಾ ಒಪ್ಪಂದಗಳನ್ನು ಅಂತಿಮಗೊಳಿಸುವ ಸಾಧ್ಯತೆಯ ಬಗ್ಗೆ 8ನೆ ಬ್ರಿಕ್ಸ್ ನಾಯಕರ ಶೃಂಗದ ಗೋವಾ ಘೋಷಣೆಯಲ್ಲೂ ಪ್ರಸ್ತಾಪವಾಗಿತ್ತು. ಗೋವಾ ಘೋಷಣೆಯ ಸ್ಪೂರ್ತಿಯ ಹಿನ್ನೆಲೆಯಲ್ಲಿ, ಅದರ ಮುಂದುವರಿಕೆಯಾಗಿ ಭಾರತ ಮತ್ತು ಬ್ರೆಜಿಲ್ ಗಳು ಬ್ರೆಸಿಲಿಯಾದಲ್ಲಿ 2017 ರ ಮಾರ್ಚ್ 13-16 ರವರೆಗೆ ಎಸ್.ಎಸ್.ಎ.ಗಳ ಬಗ್ಗೆ ಸಮಾಲೋಚನೆ ನಡೆಸಿದವು. ಮಾತುಕತೆಗಳಕೊನೆಯಲ್ಲಿ ಉಭಯ ಕಡೆಯವರೂ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಒಪ್ಪಂದದ ಅಂತಿಮ ಪಠ್ಯಕ್ಕೆ ಅಂಕಿತಹಾಕಿದವು.

ಭಾಗೀದಾರರ ಮಾಹಿತಿಗಾಗಿ,ಅಂಕಿತ ಹಾಕಲಾದ ಒಪ್ಪಂದವನ್ನು ಸಚಿವಾಲಯದ ಜಾಲತಾಣದಲ್ಲಿ ಹಾಕಲಾಗುವುದು ಮತ್ತು ಸಿಬ್ಬಂದಿಗಳಭವಿಷ್ಯ ನಿಧಿ ಸಂಘಟನೆಯ ಜಾಲತಾಣದಲ್ಲಿಯೂ ಹಾಕಲಾಗುವುದು. ಇದರಿಂದ ಅವರು ತಮ್ಮನ್ನು ಒಳಗೊಂಡವ್ಯಾಪ್ತಿಯ ಪ್ರಮಾಣ ಪತ್ರವನ್ನು ಪಡೆಯಬಹುದು , ಆ ಮೂಲಕ ಸಾಮಾಜಿಕ ಸುರಕ್ಷೆಗಾಗಿ ದುಪ್ಪಟ್ಟುಪಾವತಿಯನ್ನು ತಪ್ಪಿಸಬಹುದು.

ಪ್ರಸ್ತುತ , ಸುಮಾರು 1000 ಬ್ರೆಜಿಲಿಯನ್ನರು ಭಾರತದಲ್ಲಿದ್ದಾರೆ, ಮತ್ತು ಸುಮಾರು 4,700 ಭಾರತೀಯರು ಬ್ರೆಜಿಲಿನಲ್ಲಿವಾಸವಾಗಿದ್ದಾರೆ. ಅಲ್ಲಿ ನಿಯೋಜಿತರಾದ /ಅಲ್ಲಿರುವ ಎಲ್ಲಾ ಕಾರ್ಮಿಕರು ಮತ್ತು ಸ್ವ ಉದ್ಯೋಗಿಗಳುಯಾವುದೇ ತಾರತಮ್ಯ ಇಲ್ಲದೆ ಈ ಪ್ರಸ್ತಾಪದಿಂದ ಲಾಭ ಪಡೆಯುತ್ತಾರೆ. ಹೀಗೆ ಅದು ಸಮಾನವಾಗಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಸ್ತಾಪವಾಗಿದೆ. ಬ್ರೆಜಿಲ್ ನಿಂದ ಸ್ಥಳಾಂತರಗೊಂಡಬಳಿಕವೂ ಭಾರತೀಯ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಪ್ರಯೋಜನಗಳ ರಫ್ತು ಅಲ್ಲಿ ಸಾಮಾಜಿಕ ಸುರಕ್ಷಾಸೌಲಭ್ಯಗಳು ನಷ್ಟವಾಗದೇ ಇರುವುದನ್ನು ಖಾತ್ರಿ ಪಡಿಸುವ ನವೀನ ವ್ಯವಸ್ಥೆಯಾಗಿದೆ. ಮತ್ತು ಒಟ್ಟುವೆಚ್ಚವನ್ನು ಕಡಿಮೆ ಮಾಡುವ ಮೂಲಕ ಭಾರತೀಯ ಕಂಪೆನಿಗಳ ಸ್ಪರ್ಧಾತ್ಮಕತೆಯ ಹೆಚ್ಚಳಕ್ಕೂ ಇದು ಸಹಕಾರಿಯಾಗಲಿದೆ.

ಎಸ್.ಎಸ್.ಎ. ಗಣರಾಜ್ಯಭಾರತ ಮತ್ತು ಒಕ್ಕೂಟವಾದಿ ಬ್ರೆಜಿಲ್ ಗಣರಾಜ್ಯಗಳ ಭೂಭಾಗಗಳ ವ್ಯಾಪ್ತಿಯನ್ನು ಹೊಂದಿದೆ.