ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸೆನೆಗಲ್ ನಡುವೆ ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿನ ತಿಳಿವಳಿಕೆ ಒಪ್ಪಂದ(ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಎರಡೂ ಪಕ್ಷಕಾರರ ನಡುವೆ ಸಹಕಾರದ ಪ್ರಮುಖ ಕ್ಷೇತ್ರಗಳು ಈ ಕೆಳಗಿನವುಗಳನ್ನೂ ಒಳಗೊಂಡಿವೆ:
i. ರೋಗಗಳ ಸಂಘಟಿತ ಕಣ್ಗಾವಲು
ii. ವೈದ್ಯಕೀಯ ಸಂಶೋಧನೆ
iii. ತುರ್ತು ಪರಿಹಾರ
iv. ಆಸ್ಪತ್ರೆಗಳ ನಿರ್ವಹಣೆ
v. ಔಷಧ ಮತ್ತು ಔಷಧ ಉತ್ಪನ್ನಗಳು/ಆಸ್ಪತ್ರೆ ಸಲಕರಣೆಗಳು
vi. ಸಾಂಪ್ರದಾಯಿಕ ವೈದ್ಯ
vii. ಏಡ್ಸ್ ನಿಯಂತ್ರಣ
viii. ಪರಸ್ಪರ ಹಿತದ ಯಾವುದೇ ಕ್ಷೇತ್ರ
ಈ ತಿಳಿವಳಿಕೆ ಒಪ್ಪಂದದ ಜಾರಿಯ ನಿಗಾ ಮತ್ತು ಸಹಕಾರದ ವಿಸ್ತೃತ ಸಹಯೋಗಕ್ಕಾಗಿ ಒಂದು ಕಾರ್ಯಪಡೆಯನ್ನು ಸ್ಥಾಪಿಸಲಾಗುತ್ತದೆ.
AKT/VBA/SH