ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭೋಪಾಲ್‍ನ ಭೋಪಾಲ್ ಸ್ಮಾರಕ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಾಮಾನ್ಯ ಕರ್ತವ್ಯದ ವೈದ್ಯರು, ತಜ್ಞ ಶ್ರೇಣಿಯ ವೈದ್ಯ ರು ಹಾಗೂ ವೈದ್ಯ ಶಿಕ್ಷಕರ ನಿವೃತ್ತಿಯ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಬೇಕೆಂಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಆರೋಗ್ಯ ಸಂಶೋಧನೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸಂಪುಟ ಸಮ್ಮತಿಸಿದೆ. ಈ ಸೌಲಭ್ಯವು ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ವೈದ್ಯರು ಹಾಗೂ ಕೇಂದ್ರ ಸರ್ಕಾರದ ಆಸ್ಪತ್ರೆಗಳು/ಸಂಸ್ಥೆಗಳ ವೈದ್ಯರಿಗೆ ಮಾತ್ರ ಲಭ್ಯವಿತ್ತು.
ಜನವರಿ 2018ರ ಅಧಿಸೂಚನೆ ಪ್ರಕಾರ, ಕೇಂದ್ರೀಯ ಆರೋಗ್ಯ ಸೇವೆಗಳ ಶಿಕ್ಷಕರು, ಶಿಕ್ಷಕರಲ್ಲದವರು ಹಾಗೂ ಸಾರ್ವಜನಿಕ ಆರೋಗ್ಯದ ಉಪ ಕೇಡರ್ ಸೇರಿದಂತೆ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿಗಳು ಹಾಗೂ ತಜ್ಞ ವೈದ್ಯರಿಗೆ ನಿವೃತ್ತಿ ವಯಸ್ಸನ್ನು 65ಕ್ಕೆ ಹೆಚ್ಚಳಗೊಳಿಸಲಾಗಿತ್ತು.
ಬಿಎಂಎಚ್‍ಆರ್‍ಸಿಯಲ್ಲಿ ತಜ್ಞ ವೈದ್ಯರು ಹಾಗೂ ಶಿಕ್ಷಕರ ಕೊರತೆಯನ್ನು ನೀಗಿಸಲು ಹಾಗೂ ಭೋಪಾಲ್ ಅನಿಲ ದುರಂತರ ಸಂತ್ರಸ್ಥರು ಹಾಗೂ ಅವರ ಕುಟುಂಬದ ಸದಸ್ಯರ ಆರೋಗ್ಯ ರಕ್ಷಣೆ ಸೇವೆಯನ್ನು ಈ ನಿರ್ಧಾರದಿಂದ ಸುಧಾರಿಸಬಹುದಾಗಿದೆ.