Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಯನ್ಮಾರ್ ನ ಅಧ್ಯಕ್ಷರೊಂದಿಗೆ ಜಂಟಿ ಸುದ್ದಿಗೋಷ್ಠಿಯ ವೇಳೆ ಪ್ರಧಾನಮಂತ್ರಿಯವರ ಹೇಳಿಕೆಯ ಪಠ್ಯ (29ನೇ ಆಗಸ್ಟ್ 2016)

ಮಯನ್ಮಾರ್ ನ ಅಧ್ಯಕ್ಷರೊಂದಿಗೆ ಜಂಟಿ ಸುದ್ದಿಗೋಷ್ಠಿಯ ವೇಳೆ ಪ್ರಧಾನಮಂತ್ರಿಯವರ ಹೇಳಿಕೆಯ ಪಠ್ಯ (29ನೇ ಆಗಸ್ಟ್ 2016)


ಘನತೆವೆತ್ತ ಅಧ್ಯಕ್ಷರಾದ ಯು ಹಿತಿನ್ ಕ್ಯಾವ್ ಅವರೇ, ಮಾಧ್ಯಮ ಸದಸ್ಯರೇ,

ನಾನು ಮ್ಯಾನ್ಮಾರ್ ನ ಘನತೆವೆತ್ತ ಅಧ್ಯಕ್ಷ ಯು. ಹಿತಿನ್ ಕ್ಯಾವ್ ಮತ್ತು ಅವರ ಗೌರವಾನ್ವಿತ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ಹರ್ಷಿಸುತ್ತೇನೆ.
ಘನತೆವೆತ್ತರೇ, ನೀವು ನಿಮ್ಮ ಮೊದಲ ದ್ವಿಪಕ್ಷೀಯ ವಿದೇಶ ಭೇಟಿಗೆ ಭಾರತವನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ಗೌರವ ತಂದಿದೆ.

ಸ್ನೇಹಿತರೇ,

ಮ್ಯಾನ್ಮಾರ್ ನಮಗೆ ವಿಶೇಷವಾಗಿದೆ.

ಭಾರತದ ನೆರೆಹೊರೆಯಲ್ಲಿ ಅದಕ್ಕೆ ವಿಶಿಷ್ಠ ಸ್ಥಾನವಿದೆ.

ಇದು ಭಾರತ ಮತ್ತು ಆಗ್ನೇಯ ಏಷ್ಯಾವನ್ನು ಸಂಪರ್ಕಿಸುವ ಸೇತುವೆಯಾಗಿದೆ.

ನಮ್ಮ ಸಮಾಜದ ನಡುವಿನ ದೀರ್ಘಕಾಲದ ಸಾಂಸ್ಕೃತಿಕ ಮತ್ತು ಐತಿಹಾಸಿಕ ನಂಟು ನಮ್ಮ ಬಾಂಧವ್ಯಕ್ಕೆ ಭದ್ರವಾದ ಬುನಾದಿ ಹಾಕಿದೆ.

ಮೆಟ್ಟಾದ ಬೌದ್ಧ ತತ್ವಗಳು ಅಥವಾ ದಯೆಯನ್ನು ಪ್ರೀತಿಸುವುದು ಮತ್ತು ಸರ್ವಪಂಥ ಸಮಭಾವ, ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವುದು ನಮ್ಮ ಜೀವನವನ್ನು ವಿಶ್ಲೇಷಿಸುತ್ತದೆ.

ಗೌರವಾನ್ವಿತರೇ,

ನಿಮ್ಮ ಶ್ರೇಷ್ಠ ರಾಷ್ಟ್ರವು ಹೊಸ ಶಕೆ ಪ್ರವೇಶಿಸಿದೆ.

ನಿಮ್ಮ ಪ್ರೌಢ ನಾಯಕತ್ವ ಮತ್ತು ನಿಮ್ಮ ಜನರು ಪ್ರಜಾಪ್ರಭುತ್ವದ ಬಗ್ಗೆ ಹೊಂದಿರುವ ಬದ್ಧತೆಯ ಶಕೆ ಎಂದು ವಿಶ್ಲೇಷಿಸಲಾಗುತ್ತದೆ.

ಮತ್ತು, ಅದು ಸ್ಪಷ್ಟವಾದ ನೋಟ ಮತ್ತು ವಲಯದಲ್ಲಿ ಮ್ಯಾನ್ಮಾರ್ ಅನ್ನು ಸ್ಥಿರ ಮತ್ತು ಆರ್ಥಿಕವಾಗಿ ಪ್ರಗತಿದಾಯಕ ರಾಷ್ಟ್ರವನ್ನಾಗಿ ಮಾಡುವ ನಿಮ್ಮ ನಾಯಕತ್ವದ ಬಲವಾದ ಬಯಕೆಯನ್ನೂ ಒಳಗೊಂಡಿದೆ.

ಮ್ಯಾನ್ಮಾರ್ ನ ಹೊಸ ಸರ್ಕಾರವು ತನ್ನ ಪಯಣವನ್ನು ಹೀಗೆ ಆರಂಭಿಸುತ್ತಿದೆ:

· ಕೃಷಿಯಲ್ಲಿ ತನ್ನ ಪ್ರಗತಿ;

· ತನ್ನ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ;

· ತನ್ನ ಶಿಕ್ಷಣ ಬಲಪಡಿಸುವಿಕೆ;

· ತನ್ನ ಯುವಕರನ್ನು ಕೌಶಲಿಗಳನ್ನಾಗಿಸುವುದು;

· ಹೊಸ ಸಂಸ್ಥೆಗಳ ನಿರ್ಮಾಣ ಮತ್ತು ಇರುವುದನ್ನು ಬಲಪಡಿಸುವುದು;

· ತನ್ನ ಸಮಾಜವನ್ನು ಸುರಕ್ಷಿತಗೊಳಿಸುವುದು;

· ಆರ್ಥಿಕ ಪ್ರಗತಿಯತ್ತ ಸ್ಪಷ್ಟ ಹಾದಿ ತೋರುವುದು; ಈ ಮೇಲಿನ ಎಲ್ಲ ಮೀರಿ

· ಆಧುನಿಕ ರಾಷ್ಟ್ರ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆ ಮುಂದುವರಿಸುವುದು

· ನಿಮ್ಮ ಈ ಪ್ರತಿ ಹೆಜ್ಜೆಯಲ್ಲಿ 125 ಕೋಟಿ ಭಾರತೀಯರು ನಿಮ್ಮ ಮಿತ್ರರಾಗಿ-ಪಾಲುದಾರರಾಗಿ ನಿಮ್ಮೊಂದಿಗೆ ಇರುತ್ತಾರೆ ಎಂಬು ಭರವಸೆ ನೀಡುತ್ತೇನೆ.

ಸ್ನೇಹಿತರೇ,

ಅಧ್ಯಕ್ಷರು ಹಾಗೂ ನಾನು, ಈಗಷ್ಟೇ ನಮ್ಮ ದ್ವಿಪಕ್ಷೀಯ ಕಾರ್ಯಕ್ರಮಗಳ ಸಂಪೂರ್ಣ ಶ್ರೇಣಿಯ ಬಗ್ಗೆ ಉಪಯುಕ್ತ ಮಾತುಕತೆ ಮುಗಿಸಿದ್ದೇವೆ.

ನಮ್ಮ ಸುರಕ್ಷತೆಯ ಹಿತ ಹತ್ತಿರವಾಗಿ ಹೊಂದಿಕೊಂಡಿವೆ ಎಂಬುದನ್ನು ನಾವು ಗುರುತಿಸಿದ್ದೇವೆ.

ಮತ್ತು, ಇಬ್ಬರೂ ಪರಸ್ಪರ ಹಿತ ಮತ್ತು ಕಾಳಜಿಗೆ ಸ್ಪಂದಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದೇವೆ.

ಈ ನಿಟ್ಟಿನಲ್ಲಿ ನಾನು ಮತ್ತು ಅಧ್ಯಕ್ಷರು ನಮ್ಮ ಜನರ ಸುರಕ್ಷತೆ ಮತ್ತು ಭದ್ರತೆಗೆ ಒಗ್ಗೂಡಿ ಕೆಲಸ ಮಾಡಲು ಒಪ್ಪಿರುತ್ತೇವೆ.

ಮತ್ತು ಭಯೋತ್ಪಾದನೆ ಮತ್ತು ವಲಯದಲ್ಲಿನ ವಿಧ್ವಂಸಕ ಕೃತ್ಯಗಳಂಥ ಸಮಾನ ಸವಾಲುಗಳನ್ನು ಎದುರಿಸಲು ಸಕ್ರಿಯವಾಗಿ ಸಹಕಾರ ನೀಡಲು ಒಪ್ಪಿದ್ದೇವೆ.
21ನೇ ಶತಮಾನದ ಪ್ಯಾಂಗ್ಲಾಂಗ್ ಸಮಾವೇಶದ ಅಡಿಯಲ್ಲಿ ಶಾಂತಿ ಪ್ರಕ್ರಿಯೆ ಉಪಕ್ರಮಗಳಿಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂಬುದನ್ನೂ ನಾನು ತಿಳಿಸಿದ್ದೇನೆ.

ಸ್ನೇಹಿತರೇ,

ಭಾರತ-ಮ್ಯಾನ್ಮಾರ್ ಪಾಲುದಾರಿಕೆಯನ್ನು ಕೇವಲ ಒಳ್ಳೆಯ ಮಾತುಗಳಿಂದಷ್ಟೇ ಬಣ್ಣಿಸಲಾಗುವುದಿಲ್ಲ ಮತ್ತು ಶುದ್ಧ ಉದ್ದೇಶವನ್ನೂ ಹೊಂದಿದೆ.

ಇದರ ಆಳ ಮತ್ತು ವಿಸ್ತಾರ ಜನತೆಯೇ ಮೊದಲು ಎಂಬ ಬಲವಾದ ತತ್ವದ, ಬಲವಾದ ಅಭಿವೃದ್ಧಿಯ ಪಾಲುದಾರಿಕೆಯಿಂದ ರೂಪಿತವಾಗಿದೆ.

ಭಾರತದ ಸುಮಾರು 2 ಶತಕೋಟಿ ಡಾಲರ್ ಅಭಿವೃದ್ಧಿ ನೆರವು ಮ್ಯಾನ್ಮಾರ್ ನ ಸಾಮಾನ್ಯ ಜನರ ಜೀವನಕ್ಕೆ ಹತ್ತಿರವಾಗಿದೆ.

ನಮ್ಮ ಕಾರ್ಯಕ್ರಮಗಳು ಸಂಪರ್ಕ, ಮೂಲಸೌಕರ್ಯ, ಶಿಕ್ಷಣದ ಸಾಮರ್ಥ್ಯವರ್ಧನೆ, ಆರೋಗ್ಯ ಸೇವೆ ಮತ್ತು ಇತರ ವಲಯಗಳಿಗೆ ಬೆಂಬಲವಾಗಿದೆ.

ನಮ್ಮ ಪಾಲುದಾರಿಕೆಯಲ್ಲಿ ಕೆಲವು ಸಮಗ್ರ ಉದಾಹರಣೆಗಳು ಈ ಕೆಳಗಿನವನ್ನು ಒಳಗೊಂಡಿವೆ:

· ಈ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳಲಿರುವ ಅದರ ಬಂದರು ಮತ್ತು ಜಲ ಮಾರ್ಗ ಘಟಕಗಳ ಕಾಲಾಧನ್ ಯೋಜನೆ;

· ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ;

· ಮ್ಯಾನ್ಮಾರ್ ಮಾಹಿತಿ ತಂತ್ರಜ್ಞಾನ ಸಂಸ್ಥೆ;

· ಕೃಷಿ ಸಂಶೋಧನೆ ಮತ್ತು ಶಿಕ್ಷಣ ಕುರಿತ ಮುಂದುವರಿದ ಕೇಂದ್ರ; ಮತ್ತು

· ಆರೋಗ್ಯ, ಶಿಕ್ಷಣ ಮತ್ತು ಕೈಗಾರಿಕೆ ತರಬೇತಿ ವಲಯದಲ್ಲಿ ಅದೇ ಸ್ವರೂಪದ ಯೋಜನೆ,

ಇಂದು ಅಂಕಿತ ಹಾಕಲಾದ ಎರಡು ಕಾರ್ಯಾಚರಣೆ ಒಪ್ಪಂದಗಳು ತ್ರಿಪಕ್ಷೀಯ ಹೆದ್ದಾರಿ ಯೋಜನೆಯಲ್ಲಿ ಕಲೇವಾ-ಯಾರ್ಗಿ ರಸ್ತೆ ವಿಭಾಗದಲ್ಲಿ 69 ಸೇತುವೆಗಳ ಮೇಲ್ದರ್ಜೆ ಮತ್ತು ನಿರ್ಮಾಣಕ್ಕೆ ಅವಕಾಶ ನೀಡುತ್ತದೆ.

ನಾವು ನಮ್ಮ ಕೃಷಿ, ಬ್ಯಾಂಕಿಂಗ್, ಪವರ್ ಮತ್ತು ಇಂಧನ ಸಹಕಾರವನ್ನು ಮತ್ತಷ್ಟು ಆಳಗೊಳಿಸಲು ನಿರ್ಧರಿಸಿದ್ದೇವೆ.

ಪುನರ್ ನವೀಕರಿಸುವ ಇಂಧನ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ಸಹಕಾರವು ಈ ಕ್ಷೇತ್ರದಲ್ಲಿ ನಮ್ಮ ಸಹಕಾರವನ್ನು ಕಾರ್ಯರೂಪಗೊಳಿಸುತ್ತವೆ.

ನಾವು ಬೇಳೆಕಾಳುಗಳ ವ್ಯಾಪಾರದಲ್ಲಿ ಪರಸ್ಪರ ಮತ್ತು ದೀರ್ಘಕಾಲೀನ ದ್ವಿಪಕ್ಷೀಯ ವ್ಯವಸ್ಥೆಗೆ ಒಗ್ಗೂಡಿ ಶ್ರಮಿಸಲು ಒಪ್ಪಿದ್ದೇವೆ.

ಈ ವರ್ಷ ಏಪ್ರಿಲ್ ನಲ್ಲಿ, ನಾವು ಮ್ಯಾನ್ಮಾರ್ ನ ತಮುಗೆ ವಿದ್ಯುತ್ ಪೂರೈಸುವ ಸಣ್ಣ ಕ್ರಮ ಕೈಗೊಂಡೆವು.

ನಾನು ನಮ್ಮ ವಿದ್ಯುತ್ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಿಸುವ ಇಂಗಿತವನ್ನು ಅಧ್ಯಕ್ಷರ ಬಳಿ ವ್ಯಕ್ತಪಡಿಸಿದ್ದೇನೆ.

ಘನತೆವೆತ್ತರೇ,

ಭಾರತವು ಮ್ಯಾನ್ಮಾರ್ ನೊಂದಿಗಿನ ಅಭಿವೃದ್ಧಿ ಪಾಲುದಾರಿಕೆಯನ್ನು ಹೆಚ್ಚಿಸಲು ಸಿದ್ಧವಿದೆ.

ಮತ್ತು, ಮ್ಯಾನ್ಮಾರ್ ಸರ್ಕಾರದ ಆದ್ಯತೆಗನುಗುಣವಾಗಿ ಮಾಡಲಿದೆ.

ಸ್ನೇಹಿತರೇ,

ನಮ್ಮ ಬಾಂಧವ್ಯದ ಬುನಾದಿಯಲ್ಲಿ ಸಂಸ್ಕೃತಿ ಪ್ರಧಾನ ಕೇಂದ್ರವಾಗಿದೆ.

ನಮ್ಮಾ ಪಾಲುದಾರಿಕೆಯು ಮ್ಯಾನ್ಮಾರ್ ನ ಬಗಾನ್ ನಲ್ಲಿ ಆನಂದ ದೇವಾಲಯವನ್ನು ಪುನಾರಂಭಿಸುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಕಳೆದ ವಾರ ಭೂಕಂಪದಿಂದ ಹಾನಿಗೊಳಗಾಗಿರುವ ಇತರ ಐತಿಹಾಸಿಕ ಸ್ಮಾರಕಗಳು ಮತ್ತು ಪಗೋಡಗಳನ್ನು ಪುನರ್ ಸ್ಥಾಪಿಸಲು ನಾವು ಸಿದ್ಧರಿದ್ದೇವೆ.

ಘನತೆವೆತ್ತರೇ,

ನಿಮ್ಮ ಭೇಟಿಯು ಸಕಾಲಿಕವಾಗಿದೆ.

ಮತ್ತು, ಇಂದು ನಾವು ನಡೆಸಿದ ಮಾತುಕತೆ, ನಮ್ಮ ಸಹಕಾರಕ್ಕೆ ಒಂದು ಕ್ರಿಯಾ ಯೋಜನೆ ಮತ್ತು ನಕ್ಷೆಯನ್ನು ರೂಪಿಸಲು ಅನುವು ನೀಡಿದೆ.

ನಮ್ಮ ಬಾಂಧವ್ಯವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲು ನಾನು ನಿಮ್ಮೊಂದಿಗೆ ಜೊತೆಗೂಡಿ ಶ್ರಮಿಸಲು ಕಾತರದಿಂದ ನೋಡುತ್ತಿದ್ದೇನೆ.

ಮ್ಯಾನ್ಮಾರ್ ನ ಉಜ್ವಲ ಭವಿಷ್ಯ ಕೇವಲ ನಿಮ್ಮ ಉದ್ದೇಶ ಮಾತ್ರವಲ್ಲ.

ಇದು ನಮ್ಮ ಆಶಯ ಕೂಡ ಆಗಿದೆ.

ಮತ್ತೊಮ್ಮೆ ಘನತೆವೆತ್ತರೇ ನಿಮಗೆ ಭಾರತಕ್ಕೆ ಆತ್ಮೀಯ ಆಹ್ವಾನ.

ಧನ್ಯವಾದಗಳು

***

AKT/AK