Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಲೇಷಿಯಾದಲ್ಲಿ ಯೂರಿಯಾ ಉತ್ಪಾದನೆ ಘಟಕ ಕುರಿತ ಎಂ.ಓ.ಯುಗೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಲೇಷಿಯಾದೊಂದಿಗೆ ಮಲೇಷಿಯಾದಲ್ಲಿ ಯೂರಿಯಾ ಮತ್ತು ಅಮೋನಿಯಾ ಉತ್ಪಾದನೆ ಘಟಕ ಅಭಿವೃದ್ಧಿ ಹಾಗೂ ಭಾರತಕ್ಕೆ ಯೂರಿಯಾ ಪೂರೈಕೆ ಮತ್ತು/ಅಥವಾ ಹಾಲಿ ಹೆಚ್ಚುವರಿ ಯೂರಿಯಾವನ್ನು ಮಲೇಷಿಯಾದಿಂದ ಭಾರತಕ್ಕೆ ಪೂರೈಕೆ ಮಾಡುವ ಕುರಿತಂತೆ ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ಯೋಜನೆಯ ಅಂದಾಜು ವೆಚ್ಚ 2.1ಶತಕೋಟಿ ಅಮೆರಿಕನ್ ಡಾಲರ್ ಆಗಲಿದ್ದು, ಇದು ವಾರ್ಷಿಕ 2.4 ದಶಲಕ್ಷ ಟನ್ ಯೂರಿಯಾ ಮತ್ತು 1.35 ದಶಲಕ್ಷ ಟನ್ ಅಮೋನಿಯಾ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಭಾರತೀಯ ಮಾರುಕಟ್ಟೆಗೆ ಪೂರೈಸಲು ಸಮರ್ಪಿತವಾಗಿದೆ.
ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕುವುದು ಇದರಲ್ಲಿ ಪಾಲ್ಗೊಳ್ಳುವ ಇಬ್ಬರ ಒಪ್ಪಿಗೆಯೊಂದಿಗೆ ಭಾರತದ ಅಗತ್ಯವನ್ನು ಪೂರೈಸಲು ಕಡಿಮೆ ದರದಲಲ್ಲಿ ಯೂರಿಯಾ ಮತ್ತು ಅಮೋನಿಯಾವನ್ನು ನಿರಂತರವಾಗಿ ಪೂರೈಸುವುದನ್ನು ಖಾತ್ರಿಪಡಿಸುತ್ತದೆ.

****

AKT/VBA/SH