ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಲೆಶಿಯಾದೊಂದಿಗೆ ಪರಿಷ್ಕೃತ ವಾಯು ಸೇವೆಗಳ ಒಪ್ಪಂದ (ಎ.ಎಸ್.ಎ.)ಗೆ ತನ್ನ ಅನುಮೋದನೆ ನೀಡಿದೆ.
ಎ.ಎಸ್.ಎ.ಯ ಪರಿಷ್ಕೃತ ಪಠ್ಯವನ್ನು 2011ರಲ್ಲಿ ಆರಂಭಿಸಲಾಗಿತ್ತು. ಆದಾಗ್ಯೂ, ವಿಧಿ 13ರಲ್ಲಿ ಕೆಲವು ತಿರುವುಗಳಿಂದಾಗಿ ಅಂದರೆ, ಗಳಿಕೆಗೆ ಸಂಬಂಧಿಸಿದ ಪಾವತಿಯಿಂದಾಗಿ ಈ ಒಪ್ಪಂದಕ್ಕೆ ಅಂಕಿತ ಹಾಕಲು ಆಗಿರಲಿಲ್ಲ. ಐ.ಸಿ.ಎ.ಎನ್. 2016ರ ಸಂದರ್ಭದಲ್ಲಿ ನಡೆದ ಸಭೆಯಲ್ಲಿ, ಮಲೇಷಿಯಾ ಕಡೆಯವರು ಮೇಲೆ ಹೇಳಲಾದ ವಿಧಿಯ ಪಠ್ಯವನ್ನು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಸಲಹೆಯಂತೆ ಪರಿಷ್ಕರಿಸಲು ಒಪ್ಪಿದ್ದರು.
ವಾಯು ಸೇವೆಗಳ ಒಪ್ಪಂದದ ಮುಖ್ಯಾಂಶಗಳು
• ಹಾಲಿ ಇರುವ ಎ.ಎಸ್.ಎ.ಗೆ 1974ರಲ್ಲಿ ಅಂಕಿತ ಹಾಕಲಾಗಿತ್ತು, ಹೀಗಾಗಿ ಇದರ ಪರಿಷ್ಕರಣೆ ಮತ್ತು ಆಧುನೀಕರಿಸುವ ಅಗತ್ಯವಿತ್ತು.
• ಹಾಲಿ ಇರುವ ಎ.ಎಸ್.ಎ. ಪಠ್ಯವನ್ನು ಇತ್ತೀಚಿನ ಐ.ಸಿ.ಎ.ಓ. ಮಾದರಿಯಂತೆ ಹೊಸ ಪಠ್ಯದೊಂದಿಗೆ ಬದಲಾವಣೆ ಮಾಡಲಾಗುವುದು.
• 3ನೇ ರಾಷ್ಟ್ರದ ವಾಯುಯಾನ ಸಂಸ್ಥೆಗಳ ಸಹಕಾರಿ ಮಾರುಕಟ್ಟೆ ಒಪ್ಪಂದಗಳನ್ನೂ ಸೇರಿಸಲಾಗುವುದು.
• ದೇಶೀಯ ಸಹ ಹಂಚಿಕೆಯ ನಿಯಮಾವಳಿಯನ್ನೂ ಸೇರಿಸಲಾಗುವುದು.
• ಸುರಕ್ಷತೆ ಮತ್ತು ಭದ್ರತೆಯ ವಿಧಿಗಳನ್ನು ಪರಿಷ್ಕೃತ ಎ.ಎಸ್.ಎ.ಯಲ್ಲಿ ಸೇರಿಸಲಾಗುವುದು.
• ‘ಮಧ್ಯಸ್ಥಿಕೆಯ ಸೇವೆಗಳು’ಗೆ ಸಂಬಂಧಿಸಿದ ವಿಧಿಗಳನ್ನೂ ಸಹ ಪರಿಷ್ಕೃತ ಎ.ಎಸ್.ಎ.ನಲ್ಲಿ ಸೇರಿಸಲಾಗುವುದು. ಅದು ವಿಮಾನ ಪ್ರಯಾಣಿಕರಿಗೆ ಮತ್ತು ಸರಕು ಯಾವುದೇ ಮಧ್ಯಸ್ಥಿಕೆಯ ಸಾರಿಗೆಯಲ್ಲಿ ತನ್ನ ಎಲ್ಲೆಯಲ್ಲಿ ಯಾವುದೇ ಸ್ಥಳದಿಂದ ಮತ್ತೊಂದು ಪಕ್ಷಕಾರರ ಸ್ಥಳಕ್ಕೆ ಸಾಗಲು ಅವಕಾಶ ನೀಡುತ್ತದೆ.
AKT/VBA/SH