Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಲೇಷಿಯಾ ಪ್ರಧಾನಮಂತ್ರಿ ಅವರೊಂದಿಗೆ ಭಾರತದ ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಅವರ ಕೌಲಲಾಂಪುರ್‍ನಲ್ಲಿನ ದಿ ಎಕಾನಮಿಕ್ ಟೈಮ್ಸ್ ಏಷ್ಯಿನ್ ಬಿಸಿನಸ್ ಲೀಡರ್ಸ್ ಸಂಕಿರಣದ ಜಂಟೀ ಉದ್ಘಾಟನೆಯ ಹೇಳಿಕೆ (ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ)


ಮಲೇಷಿಯಾ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಡಾಟೋ ಶ್ರೀ ಮೊಹಮದ್ ನಜೀಬ್ ಅವರೇ,
ಎಕಾನಮಿಕ್ ಟೈಮ್ಸ್ ನ  ನಿರ್ವಹಣಾ ಸದಸ್ಯರೇ,
ಉದ್ಯಮದ ಮುಖಂಡರೇ,
ಗಣ್ಯರೇ,
 
ಶ್ರೀಯುತರಾದ  ಮಲೇಷಿಯಾ ಪ್ರಧಾನಿಯವರೊಂದಿಗೆ ಎಕಾನಮಿಕ್ ಟೈಮ್ಸ್ ಏಷ್ಯಿನ್ ಬಿಸಿನಸ್ ಲೀಡರ್ಸ್ ಸಂಕಿರಣದ ಜಂಟೀ ಉದ್ಘಾಟನೆ ನನಗೆ ಅತೀವ ಸಂತಸ ತಂದಿದೆ.
 
ಎಕಾನಮಿಕ್ ಟೈಮ್ಸ್ ಏಷ್ಯಾದ ವಾಣಿಜ್ಯ ಮುಖಂಡರ ಸಂಕಿರಣ 2016ಕ್ಕೆ ಕೌಲಲಾಂಪುರವನ್ನು ಆಯ್ಕೆ ಮಾಡಿಕೊಂಡಿರುವುದೇ ಮಲೇಷಿಯಾದ ಪ್ರಾಮುಖ್ಯತೆಯನ್ನು ಸಾರುತ್ತದೆ.
 
ಸಂಕಿರಣಕ್ಕೆ ನನ್ನ ಶುಭಕಾಮನೆಗಳು:
ಮಿತ್ರರೇ,
 
ಗೌರವಾನ್ವಿತ ಪ್ರಧಾನಿಯವರ ನೇತೃತ್ವದಲ್ಲಿ ಮಲೇಷಿಯಾ 2020ರ ವೇಳೆಗೆ ಅಭಿವೃದ್ಧಿಹೊಂದಿದ  ದೇಶಗಳ ಸ್ಥಾನಮಾನ ಪಡೆಯುವ ಗುರಿಯತ್ತ ಸಾಗುತ್ತಿದೆ.
 
ಜಾಗತಿಕ ಆರ್ಥಿಕ ಪರಿಸ್ಥಿತಿಯೊಂದಿಗೆ ಮಲೇಷಿಯಾ ಸದಾ ಹೊಂದಾಣಿಕೆ ಪ್ರದರ್ಶಿಸಿದೆ.
 
ಭಾರತ-ಮಲೇಷಿಯಾ ನಡುವಣ ಕಾಲಾತೀತ ಬಂಧನಗಳಿಗೆ ಇಲ್ಲಿ ನೆಲೆಸಿರುವ ಬೃಹತ್ ಭಾರತೀಯ ಸಮುದಾಯ ಕಾರಣವಾಗಿದೆ.
ಕೌಲಾಲಾಂಪುರದ ಹೃದಯ ಭಾಗದಲ್ಲಿನ ಟರೋನಾ ಗೇಟ್ ಎರಡೂ ದೇಶಗಳನ್ನು ಮತ್ತು ಎರಡೂ ಉತೃಷ್ಟ ಸಂಸ್ಕತಿಗಳನ್ನು ಬೆಸೆಯುವ ನಮ್ಮ ಇತಿಹಾಸದ ಇತ್ತೀಚಿಗಿನ ಪ್ರತೀಕವಾಗಿದೆ.
 
ಇತ್ತೀಚಿನ ದಿನಗಳಲ್ಲಿ ನಾವು ಎರಡೂ ದೇಶಗಳ ನಡುವೆ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಒತ್ತು ನೀಡಿದ್ದೇವೆ.
ಹಲವು ವಿಷಯಗಳಲ್ಲಿ ಈ ಯೋಜಿತ ಸಹಭಾಗಿತ್ವಕ್ಕೆ ಇಂಬು ನೀಡಲು ನನ್ನ ಕಳೆದ ವರ್ಷದ ನವೆಂಬರ್‍ನಲ್ಲಿನ ಮಲೇಷಿಯಾ ಭೇಟಿ ಸಕಾರಾತ್ಮಕವಾದದ್ದು.
 
ಪೂರ್ವ ದೇಶದೊಂದಿನ ನಮ್ಮ ನೀತಿಯ ಯಶಸ್ಸಿಗೆ ಮಲೇಷಿಯಾದೊಂದಿಗಿನ ಉತ್ತಮ ನಿಕಟ ಬಾಂಧವ್ಯ ಅವಶ್ಯಕವಾದದ್ದು.
ಯೋಜನಾ ಅಭಿವೃದ್ಧಿ ನಿಧಿ ಮತ್ತು ಸಾಲದ ನೀತಿಯಂತಹ ಭಾರತದ ಕ್ರಮಗಳು ಭಾರತ-ಆಷಿಯಾನ್ ಸಹಕಾರಕ್ಕೆ ಅಪಾರ ಕೊಡುಗೆ ನೀಡಿವೆ.
 
ಮಿತ್ರರೇ,
ಆಷಿಯಾನ್ ದೇಶಗಳ ನಾಯಕರು ಈ ಪ್ರದೇಶದ ದೇಶಗಳನ್ನು ಒಂದೆಡೆ ತರಲು ಶ್ರಮವಹಿಸಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಈ ಎಲ್ಲಾ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ.
21ನೇ ಶತಮಾನ ಏಷ್ಯಾ ದೇಶಗಳ ಶತಮಾನ ಎಂದು ಈ ಹಿಂದೆ ಹಲವಾರು ಭಾರೀ ಹೇಳಿದ್ದೇನೆ.
ಉದ್ಯೋಗಕ್ಕಾಗಿ ಕೈಗಳು, ವಾಸಿಸಲು ಮನೆ ಮತ್ತು ಮುಖಂಡರು ವಿನಯವನ್ನು ಕಲಿಯಲು ಏಷ್ಯಾ ಸಿದ್ಧವಿದೆ.
ಪ್ರತಿಕೂಲ ಮತ್ತು ಅನಿಶ್ಚಿತ ಜಾಗತಿಕ ಆರ್ಥಿಕ ಪರಿಸ್ಥಿತಿ ಇದ್ದರೂ, ಏಷ್ಯಾ ದೇಶಗಳ ಪ್ರಗತಿ ವಿಶ್ವಾಸದ ಬೆಳಕಿನ ಗೆರೆಗಳಾಗಿವೆ.
 
ಮಿತ್ರರೇ,
ಭಾರತ ಪ್ರಸ್ತುತ ಆರ್ಥಿಕ ಬದಲಾವಣೆಗೆ ಸಾಕ್ಷಿಯಾಗಿದೆ.
ಭಾರತ ಜಗತ್ತಿನಲ್ಲೇ ಕ್ಷಿಪ್ರವಾಗಿ ಪ್ರಗತಿ ಹೊಂದುತ್ತಿರುವ ದೇಶ ಮಾತ್ರವೇ ಆಗಿಲ್ಲ. ಹಲವು ಕಾರ್ಯಕ್ರಮಗಳ ಕೇಂದ್ರಬಿಂದುವೂ ಆಗಿದೆ,
 
-ಸರಳ ವ್ಯಾಪಾರದ ತಾಣ
-ಪಾರದರ್ಶಿಕ ಮತ್ತು ಸಮರ್ಥ ಆಡಳಿತ
-ನಿಯಂತ್ರಣ ವ್ಯವಸ್ಥೆ ಭಾರದ ಇಳಿಕೆ
 
ಪ್ರಸ್ತುತ ದೇಶದಲ್ಲಿನ ಕಪ್ಪುಹಣ ಮತ್ತು ಭ್ರಷ್ಟಾಚಾರವನ್ನು ತೊಡೆದು ಹಾಕುವುದು ನನ್ನ ಆದ್ಯತೆ ಆಗಿದೆ.
ಡಿಜಿಟೈಸೇಷೇನ್ ಮತ್ತು ಜಿಎಸ್‍ಟಿ ಪರಿಚಯದ ಅವಧಿಯಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಭಾರತದಲ್ಲಿನ ಈ ಕ್ರಮಗಳು ಜಾಗತಿಕ ಸಂಸ್ಥೆಗಳ ಹಲವಾರು   ಶ್ರೇಯಾಂಕ ಗಳಲ್ಲಿ    ಈಗಾಗಲೇ ಪ್ರತಿಫಲಿಸುತ್ತಿವೆ.
ವಿಶ್ವಬ್ಯಾಂಕ್‍ನ ಸರಳ ವ್ಯಾಪಾರ ವರದಿಯಲ್ಲಿ ಭಾರತದ ಶ್ರೇಯಾಕ    ಹೆಚ್ಚಳವಾಗಿದೆ.
 
ಜಾಗತಿಕ ಮತ್ತು ಭಾರತದಲ್ಲಿನ ವ್ಯಾಪಾರ ವಹಿವಾಟಿನ ಪ್ರಕ್ರಿಯೆಯ ಅಂತರವನ್ನು ತ್ವರಿತವಾಗಿ ನಾವು ಕಡಿತಗೊಳಿಸುತ್ತಿದ್ದೇವೆ.
ಯುಎನ್‍ಸಿಟಿಎಡಿಯ 2016ರ ಜಾಗತಿಕ ಬಂಡವಾಳ ಹೂಡಿಕೆಯ ವರದಿಯಲ್ಲಿ 2016-18ರ ನಡುವಿನ ಮೂರನೇ ಅತ್ಯಂತ ಪ್ರಶಸ್ತ ದೇಶವಾಗಿ ಶ್ರೇಯಾಂಕ    ಪಡೆದುಕೊಂಡಿದೆ.
 
ವಿಶ್ವ ಆರ್ಥಿಕ ವೇದಿಕೆಯ 2015-16 ಮತ್ತು 2016-17ರ ಜಾಗತಿಕ ಸ್ಪರ್ಧಾತ್ಮಕತೆ ವರದಿಯಲ್ಲಿ ಭಾರತ 32 ಸ್ಥಾನಗಳಷ್ಟು ಮೇಲಕ್ಕೇರಿದೆ.
 
2016ರ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 16 ಸ್ಥಾನಗಳ ಏರಿಕೆ ಹಾಗೂ 2016ರ ವಿಶ್ವಬ್ಯಾಂಕ್‍ನ ವ್ಯವಸ್ಥಾಪನ ಪ್ರದರ್ಶನ ಸೂಚ್ಯಂಕದಲ್ಲಿ 16 ಸ್ಥಾನಗಳ ಏರಿಕೆ ಕಂಡಿದೆ.
 
ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೊಸ ಕ್ಷೇತ್ರಗಳನ್ನು ತೆರೆಯಲಾಗಿದೆ ಮತ್ತು ಹಾಲಿ ಕ್ಷೇತ್ರಗಳ ವಿನಿಯೋಗ ಮಿತಿಯನ್ನು ಹೆಚ್ಚಳಗೊಳಿಸಿದ್ದೇವೆ.
 
ವಿದೇಶಿ ನೇರ ಬಂಡವಾಳ ನೀತಿಗಳನ್ನು ಪುನರ್‍ರೂಪಿಸಲಾಗಿದ್ದು, ಹೂಡಿಕೆಯ ಪರಿಸರವನ್ನು ಮತ್ತಷ್ಟು ಸರಳಗೊಳಿಸಲಾಗಿದೆ.
ಇವುಗಳ ಫಲಿತಾಂಶ ಎಲ್ಲರಿರೂ ಗೋಚರಿಸುತ್ತಿವೆ.
 
ಕಳೆದ ಎರಡೂವರೆ ವರ್ಷಗಳಲ್ಲಿ ದೇಶಕ್ಕೆ ಹರಿದು ಬಂದ ಒಟ್ಟಾರೆ ವಿದೇಶಿ ನೇರ ಬಂಡವಾಳ 130 ಅಮೆರಿಕನ್ ಬಿಲಿಯನ್ ಡಾಲರ್‍ಗಳಷ್ಟು ಮುಟ್ಟಿದೆ.
 
ಈ ಹಿಂದಿಗಿಂತ ಅತಿಹೆಚ್ಚು ವಿದೇಶಿ ನೇರ ಬಂಡವಾಳವನ್ನು ಕಳೆದ ವರ್ಷ ಭಾರತ ಪಡೆದಿದೆ.
ಕಳೆದ ಎರಡು ವರ್ಷಗಳಲ್ಲಿ ವಿದೇಶಿ ನೇರ ಬಂಡವಾಳ ಪ್ರಮಾಣದ ಒಳಹರಿವು ಅದರ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಶೇ.52ರಷ್ಟು ಹೆಚ್ಚಳವಾಗಿದೆ
 
ವಿದೇಶಿ ನೇರ ಬಂಡವಾಳದ ಮೂಲ ಮತ್ತು ಕ್ಷೇತ್ರಗಳು ವೈವಿಧ್ಯವಾಗಿವೆ.
ಭಾರತವನ್ನು ಉತ್ಪಾದನೆ, ವಿನ್ಯಾಸ ಮತ್ತು ಆವಿಷ್ಕಾರದ ತಾಣವನ್ನಾಗಿ ಮಾಡಲು ಉದ್ದೇಶಿಸಿ ಆರಂಭಿಸಿದ ‘ಮೇಕ್ ಇನ್ ಇಂಡಿಯಾ’ ಯೋಜನೆ ಎರಡನೇ ವಾರ್ಷಿಕೋತ್ಸವ ಆಚರಿಸುತ್ತಿದೆ.
 
ನಮ್ಮ ಕೆಲವು ಸಾಧನೆಗಳನ್ನು ಹೆಸರಿಸಲು ಇಚ್ಚಿಸುತ್ತೇನೆ:
 
ಜಗತ್ತಿನ ಆರನೇ ಉತ್ಪಾದನಾ ದೇಶವಾಗಿ ಹೊರಹೊಮ್ಮಿದ್ದೇವೆ.
2015-16ರ ಉತ್ಪಾದನೆಯಲ್ಲಿ ಒಟ್ಟಾರೆ ಮೌಲ್ಯ ಶೇ. 9.3ರಷ್ಟು ಅಭಿವೃದ್ಧಿ ಕಂಡಿದೆ.
ಕಳೆದ ಎರಡು ವರ್ಷಗಳಲ್ಲಿ 51 ಶೀತಲೀಕರಣ ಯೋಜನೆಗಳನ್ನು ಪೂರ್ಣಗೊಳಿಸಿದ್ದು, 2014ರಲ್ಲಿ ಆರು ಹೊಸ ಬೃಹತ್ ಫುಡ್ ಪಾರ್ಕ್‍ಗಳನ್ನು ನಿರ್ಮಿಸಲಾಗಿದೆ.
 
19 ಹೊಸ ಜವಳಿ ಪಾರ್ಕ್‍ಗಳಿಗೆ ಅನುಮತಿ ನೀಡಲಾಗಿದ್ದು, ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ 200 ಹೊಸ ಉತ್ಪಾದನಾ ಘಟಕಗಳು ಹಾಲಿ ಇರುವ ಜವಳಿ ಪಾರ್ಕ್‍ಗಳಲ್ಲಿ ತಲೆ ಎತ್ತಿವೆ.
 
ಈ ವರ್ಷ, ಮೊಬೈಲ್ ಫೋನ್ ಉತ್ಪಾದನಾ ಘಟಕಗಳ ಸಂಖ್ಯೆ ಶೇ. 90ರಷ್ಟು ಹೆಚ್ಚಳವಾಗಿದೆ.
ಜಾಗತಿಕ ಮುಂಚೂಣಿ ಆಟೋಮೊಬೈಲ್ ಸಂಸ್ಥೆಗಳು ದೇಶದಲ್ಲಿ ಹೊಸ ಜೋಡಣೆ ಹಾಗೂ ಹೊಸ ಉತ್ಪಾದನಾ ಘಟಕಗಳನ್ನು ನಿರ್ಮಿಸಿವೆ.
 
ಮಿತ್ರರೇ,
ಭಾರತದಲ್ಲಿ ‘ಸರಳ ಉದ್ದಿಮೆ’ ಸೃಷ್ಠಿಸುವ ನಮ್ಮ ಪ್ರಯತ್ನಗಳು ಸಮಗ್ರವಾಗಿದ್ದು, ಕಾನೂನಾತ್ಮಕ ಮತ್ತು ವ್ಯವಸ್ಥಿತವಾಗಿವೆ.
ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ:
 
ಸರಕು ಮತ್ತು ಸೇವಾ ತೆರಿಗೆ ಸಂಬಂಧಿತ ಕಾನೂನಾತ್ಮಕ ತಿದ್ದುಪಡಿಯ ಅಂಗೀಕಾರವಾಗಿದೆ.
2017ರಲ್ಲೇ ಇದನ್ನು ಜಾರಿಗೆ ತರವ ಉದ್ದೇಶವಿದೆ.
 
ಡಿಜಿಟಲ್ ಮತ್ತು ಹಣರಹಿತ ಆರ್ಥಿಕತೆಯೆಡೆಗೆ ನಾವು ಮುನ್ನಡೆಯುತ್ತಿದ್ದೇವೆ.
 
ನಮ್ಮ ಪರವಾನಿಗೆ ನೀತಿಯನ್ನು ತರ್ಕಬದ್ಧಗೊಳಿಸಲಾಗಿದೆ
ಉದ್ಯಮದ ನೋಂದಾವಣೆ, ಆಮದು ಸಂಬಂಧಿತ ಕಸ್ಟಮ್ಸ್ ನೀತಿಗಳು ಮತ್ತು ಕಾರ್ಮಿಕ ನೀತಿಗಳನ್ನು ಒಂದೇ ವೇದಿಕೆಯಡಿ ತರಲಾಗಿದೆ.
 
ನೀರು ಮತ್ತು ವಿದ್ಯುತ್‍ನಂತಹ ಸೇವೆಗಳನ್ನು ಪಡೆಯಲು ಇದ್ದ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ.
ಹೂಡಿಕೆದಾರರಿಗೆ ಅನುವಾಗಲು ಮತ್ತು ಮಾರ್ಗದರ್ಶನ ನೀಡಲು ಹೂಡಿಕೆದಾರ ಸೌಲಭ್ಯ ಕಿರುಕಚೇರಿ ತೆರೆಯಲಾಗಿದೆ.
.ಮೇಕ್ ಇನ್ ಇಂಡಿಯಾ. ಕಾರ್ಯಕ್ರಮ ಆರಂಭಿಸಿದ ನಂತರ ರಾಜ್ಯಗಳ ಸಹಭಾಗಿತ್ವದಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ.
2015ರಲ್ಲಿ ಒಪ್ಪಿತ ಅಂಶಗಳ ಮತ್ತು ಉದ್ದಿಮೆ ನೀತಿಗಳ ಅನ್ವಯ ವಿಶ್ವಬ್ಯಾಂಕ್‍ನ ಸಹಯೋಗದಲ್ಲಿ ರಾಜ್ಯಗಳ ಶ್ರೇಯಾಂಕ ಹೊರತರಲಾಗಿದೆ.
 
ಇದನ್ನು 2016ರ ವರ್ಷಕ್ಕೂ ವಿಸ್ತರಿಸಲಾಗಿದೆ.
 
ಬೌದ್ಧಿಕ  ಸ್ವಾಮ್ಯ ಮಾರ್ಗಸೂಚಿಯಾಗಿ ‘ಸಮಗ್ರ ರಾಷ್ಟ್ರೀಯ ಬೌದ್ಧಿಕ  ಆಸ್ತಿ ಹಕ್ಕುಗಳ ನೀತಿ’ಯನ್ನು ಮೊದಲ ಬಾರಿಗೆ ಸ್ವೀಕರಿಸಲಾಗಿದೆ.
 
‘ಸೃಜನಾತ್ಮಕ ವಿನಾಶ’ದ ಪ್ರಕ್ರಿಯೆ ಉತ್ತೇಜಿಸಲು ಹಲವು ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 
ಕಂಪೆನಿಗಳನ್ನು ಪುನರ್‍ನಿರ್ಮಿಸಲು ಮತ್ತು ಹೊರಬರಲು ಅನುವಾಗುವಂತೆ ಕ್ರಮ ಕೈಗೊಳ್ಳಲಾಗಿದೆ . 
ದಿವಾಳಿತನ ಮತ್ತು ದಿವಾಳಿತನ ನಿಯಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದು, ಹೊರಬರಲು ಭಾರತದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರವಾಗಿದೆ.
 
ವಾಣಿಜ್ಯ ವ್ಯಾಜ್ಯಗಳನ್ನು ತ್ವರಿತವಾಗಿ ತೀರ್ಮಾನಿಸಲು ಹೊಸ ವಾಣಿಜ್ಯ ನ್ಯಾಯಾಲಯಗಳನ್ನು ರಚಿಸಲಾಗಿದೆ. 
ವಿಚಾರಣೆಗಳ ಶೀಘ್ರ ವಿಲೇವಾರಿಗಾಗಿ ಮಧ್ಯಸ್ಥಿಕ ಕಾನೂನುಗಳನ್ನು ತಿದ್ದುಪಡಿಮಾಡಲಾಗಿದೆ. 
 
ಮಿತ್ರರೇ,
 
ಹಿಂದೆಂದೂ ಇಲ್ಲದಂತಹ ಹೊಸ ಉದ್ಯಮಶೀಲತೆ ಭಾರತದಲ್ಲಿ ಆರಂಭವಾಗಿದೆ
ಭಾರತದಲ್ಲಿನ ಮುಂದಿನ ಬಹುದೊಡ್ಡ ಆರ್ಥಿಕ ಶಕ್ತಿ ಸ್ಟಾರ್ಟ್-ಅಪ್‍ಗಳಾಗಿವೆ ಮತ್ತು ಇವು ಯಾವುದೇ ಕ್ರಾಂತಿಗೆ ಕಡಿಮೆ ಇಲ್ಲ.
ನಮ್ಮ ಸ್ಟಾರ್ಟ್-ಅಪ್ ಇಂಡಿಯಾ ಕಾರ್ಯಕ್ರಮ ದೇಶದಲ್ಲಿನ ಈ ಶಕ್ತಿಯನ್ನು ಅನಾವರಣಗೊಳಿಸುವ ಉದ್ದೇಶ ಹೊಂದಿದೆ.
ಹೊಸ ಉದ್ಯೋಗಗಳನ್ನು  ರೂಪಿಸಲು   ಅಥವಾ ಸ್ವಂತ ಉದ್ದಿಮೆಯನ್ನು ಸೃಷ್ಟಿಸಲು ಅನುವಾಗುವಂತೆ ನಮ್ಮ ಆರ್ಥಿಕ ಪ್ರಕ್ರಿಯೆಯನ್ನು ಅನುವುಗೊಳಿಸಲಾಗಿದೆ. 
 
ದೇಶದ ಜನತೆಗೆ ಲಾಭಾಂಶ ದೊರೆಯುವಂತೆ ಮಾಡಲು ಇರುವ ದಾರಿ ಇದೊಂದೆ. 
‘ಸ್ಕಿಲ್ ಇಂಡಿಯಾ’ ಮತ್ತು ಅದರ ಸಂಬಂಧಿತ ಕಾರ್ಯಕ್ರಮಗಳ ಮೂಲಕ ಮಾರುಕಟ್ಟೆಗೆ ಅವಶ್ಯಕವಾದ ಕೌಶಲ್ಯವನ್ನು ಒಟ್ಟಾಗಿ ತರಲು ಪ್ರಯತ್ನಿಸಲಾಗುತ್ತಿದೆ. 
 
ಭವಿಷ್ಯಕ್ಕೆ ಅನುಗುಣವಾದ ಮೂಲಸೌಕರ್ಯಗಳನ್ನು ನಿರ್ಮಿಸುವುದು ನಮ್ಮ ದೊಡ್ಡ ಸವಾಲಾಗಿದೆ. 
ದೇಶಾದ್ಯಂತ ಪೆಂಟಗಾನ್‍ನಂತಹ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ದೇಶಾದ್ಯಂತ ನಿರ್ವಹಣೆ ಮೇಲಿರುವ ಹಲವಾರು ನಿರ್ಬಂಧಗಳನ್ನು ತೆಗೆದುಹಾಕಲು ಗಮನ ನೀಡಲಾಗಿದೆ. 
ದೇಶಾದ್ಯಂತ ರಸ್ತೆ, ರೈಲು ಮತ್ತು ಬಂದರುಗಳನ್ನು ಉನ್ನತ ದರ್ಜೆಗೆ ಏರಿಸಲಾಗುತ್ತಿದೆ. 
ಅಂತಹ ಮೂಲಭೂತಸೌಕರ್ಯ ನಿರ್ಮಿಸಲು ನಾವು, ವಿದೇಶಿ ನಿಧಿಯೊಂದಿಗೆ ರಾಷ್ಟ್ರೀಯ ಬಂಡವಾಳ ಮತ್ತು ಮೂಲಸೌಕರ್ಯ ನಿಧಿ ಸ್ಥಾಪಿಸಿದ್ದೇವೆ.
 
ಮಿತ್ರರೇ,
 
ಇದು ಏಕೀಕರಣಕ್ಕೆ ಪೂರಕವಾದ ಸಮಯ.
ಮುಕ್ತತೆ ಇಲ್ಲದೆ ಏಕೀಕರಣ ಸಾಧ್ಯವಿಲ್ಲ.
ಭಾರತ ತನ್ನ ಹೃದಯದಲ್ಲಿ ಎಂದಿಗೂ ಮುಕ್ತವಾಗಿದೆ.
ಈಗ, ಆರ್ಥಿಕ ಹಂತಗಳಲ್ಲೂ ನಾವು ಜಗತ್ತಿನಲ್ಲೇ ಅತ್ಯಂತ ಮುಕ್ತ ಮತ್ತು ಏಕೀಕೃತ ಅರ್ಥವ್ಯವಸ್ಥೆಯಾಗಿದ್ದೇವೆ.
ಇದುವರೆಗೂ ಯಾರು ಭಾರತದಲ್ಲಿಲ್ಲವೋ ಅವರನ್ನೂ ನಾವು ಆಹ್ವಾನಿಸುತ್ತಿದ್ದೇವೆ.
ನಿಮಗೆ ಅವಶ್ಯಕತೆ ಇದ್ದಲ್ಲಿ ನಾನೇ ವೈಯಕ್ತಿಕವಾಗಿ ನಿಮಗೆ ಲಭ್ಯವಿರುತ್ತೇನೆ ಎಂದು ಭರವಸೆ ನೀಡುತ್ತಿದ್ದೇನೆ.
ಭಾರತ ಉತ್ತಮ ತಾಣ ಮಾತ್ರವಲ್ಲ;
ಭಾರತದಲ್ಲಿರುವ ನಿರ್ಧಾರ ಎಂದಿಗೂ ಒಳ್ಳೆಯದೇ.
ಧನ್ಯವಾದಗಳು.
 
***