Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಲೇಷ್ಯಾ ಪ್ರಧಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಟ್ಟ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆ

ಮಲೇಷ್ಯಾ ಪ್ರಧಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಟ್ಟ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆ


ಮಲೇಷ್ಯಾದ ಪ್ರಧಾನಿ ಗೌರವಾನ್ವಿತ ಡಾಟೋ ಶ್ರೀ ಮೊಹಮ್ಮದ್ ನಜೀಬ್ ಬಿನ್ ತುನ್ ಅಬ್ದುಲ್ ರಜಾಕ್ ಅವರೇ,

ಮಾಧ್ಯಮ ಪ್ರತಿನಿಧಿಗಳೇ,

ಮಲೇಷ್ಯಾದ ಗೌರವಾನ್ವಿತ ಪ್ರಧಾನಿ ಅವರನ್ನು ಭಾರತಕ್ಕೆ ಸ್ವಾಗತಿಸಲು ತುಂಬ ಸಂತಸದ ವಿಷಯ. ಗೌರವಾನ್ವಿತ ನಜೀಬ್ ಅವರೇ, ನಾನು ಮಲೇಷ್ಯಾಕ್ಕೆ ನವೆಂಬರ್ 2015ರಲ್ಲಿ ಭೇಟಿ ನೀಡಿದಾದ ಪಡೆದ ಬೆಚ್ಚಗಿನ ಪ್ರೀತಿ ಮತ್ತು ಸ್ವಾಗತವನ್ನು ನಿಮಗೆ ಹಿಂದಿರುಗಿಸಲು ಈ ನಿಮ್ಮ ಭೇಟಿಯು ನನಗೆ ಮತ್ತು ದೇಶದ ಜನಕ್ಕೆ ಸಿಕ್ಕ ಅವಕಾಶ ಎಂದು ನಾನು ಭಾವಿಸುತ್ತೇನೆ. ಎರಡು ದೇಶಗಳ ನಡುವಿನ ಸಂಬಂಧ ಚಾರಿತ್ರಿಕ ಕಾಲಘಟ್ಟದಲ್ಲಿ ಇರುವಾಗ ನಿಮ್ಮ ಭೇಟಿ ಆಗುತ್ತಿದೆ.ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 60ನೇ ವರ್ಷಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ.ಮತ್ತು ಗೌರವಾನ್ವಿತರೇ, ನಿಮ್ಮ ವೈಯಕ್ತಿಕ ಗಮನ ಮತ್ತು ನಾಯಕತ್ವವು ನಮ್ಮ ಸಂಬಂಧವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು, ಬಲ ಮತ್ತು ಅನುರಣನಶೀಲತೆಯನ್ನು ತುಂಬಿದೆ. ಭಾರತದೊಂದಿಗೆ ವಿಶಾಲ ವ್ಯಾಪ್ತಿಯ ಸಹಭಾಗಿತ್ವವನ್ನು ಜೋಡಿಸುವಲ್ಲಿ ನೀವು ಗಮನಾರ್ಹ ಕಾಣಿಕೆ ನೀಡಿದ್ದೀರಿ.

ಗೆಳೆಯರೇ,

ಮಲೇಷ್ಯಾದೊಂದಿಗೆ ನಮ್ಮ ಕೊಂಡಿಯು ಚಾರಿತ್ರಿಕವಾದುದು ಮತ್ತು ನಾಗರಿಕತೆಯನ್ನು ಆಧರಿಸಿರುವಂಥದ್ದು. ನಮ್ಮ ಸಂಬಂಧಗಳು ಶ್ರೀಮಂತ ಮತ್ತು ವೈವಿಧ್ಯಮಯ. ನಮ್ಮ ಸಮಾಜಗಳು ಹಲವು ಹಂತದಲ್ಲಿ ಜೋಡಣೆಯಾಗಿವೆ. ನಮ್ಮ ಜನಗಳ ನಡುವಿನ ಬಲಿಷ್ಟ ಸಂಬಂಧಕ್ಕೆ ಸಂಸ್ಕೃತಿ ಮತ್ತು ಧರ್ಮಗಳು ಪ್ರಬಲ ಸಂಪರ್ಕ ಕಲ್ಪಿಸಿವೆ. ಮಲೇಷ್ಯಾದಲ್ಲಿನ ಭಾರತೀಯ ಸಮುದಾಯದ ಕಾಣಿಕೆಗಳು ವಿಶೇಷ ಮೌಲ್ಯವನ್ನು ಹೊಂದಿವೆ. ಇವು ನಮ್ಮ ಹಂಚಿಕೊಂಡ ಚಾರಿತ್ರಿಕತೆಯನ್ನು ಪೋಷಿಸಿವೆ. ಜತೆಗೆ, ಎರಡು ದೇಶಗಳ ಜನರ ನಡುವೆ ಸಂಪರ್ಕ ಪಲ್ಪಿಸಿವೆ ಮತ್ತು ಆರ್ಥಿಕತೆಯ ಪ್ರಬಲ ಚಾಲಕ ಶಕ್ತಿಯಾಗಿವೆ. ನನ್ನ ಹಿಂದಿನ ಭೇಟಿ ವೇಳೆ ಪ್ರಧಾನಿ ನಜೀಬ್ ಹಾಗೂ ತಾವು ಕ್ವಾಲಾಲಂಪುರದಲ್ಲಿ ತೋಣ ದ್ವಾರವನ್ನು ಉದ್ಘಾಟಿಸಿದ್ದೆವು. ಸಾಂಚಿ ಸ್ಥೂಪದ ತೋರಣ ದ್ವಾರವನ್ನು ಹೋಲುವ ಇದು ನಮ್ಮ ಶಾಶ್ವತವಾದ ಸ್ನೇಹದ ಸೂಚಕವಾಗಿದೆ.

ಗೆಳೆಯರೇ,

ಇಂದು ನಡೆದ ವಿಸ್ತೃತ ಮಾತುಕತೆ ವೇಳೆ ತಾವು ಹಾಗೂ ಪ್ರಧಾನಿ ನಜೀಬ್ ನಮ್ಮ ಸಾಂಸ್ಕೃತಿಕ, ಆರ್ಥಿಕ ಮತ್ತು ಯುದ್ಧತಂತ್ರದ ಕುರಿತು ಚರ್ಚೆ ನಡೆಸಿದ್ದೇವೆ. ನ.2015ರಲ್ಲಿ ತಮ್ಮ ಮಲೇಷ್ಯಾ ಭೇಟಿ ವೇಳೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಜಾರಿಯಲ್ಲಿನ ಸ್ಥಿರವಾದ ಪ್ರಗತಿಯನ್ನು ಗಮನಿಸಿದ್ದು, ನಮ್ಮ ನಡುವಿನ ಸಹಭಾಗಿತ್ವವನ್ನು ವಿಸ್ತರಿಸುವ, ಹಂಚಿಕೊಂಡ ದರ್ಶನವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ಈ ದರ್ಶನವು ಕ್ರಿಯೆಯನ್ನು ಆಧರಿಸಿದ ಮಾರ್ಗಕ್ಕೆ ಪ್ರಾಶಸ್ತ್ಯ ನೀಡುತ್ತದೆ. ಈ ಪ್ರಯತ್ನದಲ್ಲಿ, ಈಗಾಗಲೇ ಸಹಭಾಗಿತ್ವ ಇರುವ ಕ್ಷೇತ್ರಗಳಲ್ಲಿ ಇನ್ನಷ್ಟು ಗಾಢವಾಗಿಸಲು ಮತ್ತು ಹೊಸ ಗಡಿಗಳ ಶೋಧ ನಮ್ಮ ಪ್ರಮುಖ ಉದ್ದೇಶವಾಗಿದೆ.

ಗೆಳೆಯರೇ,

ಭಾರತ ಮತ್ತು ಮಲೇಷ್ಯಾ ಪ್ರವರ್ಧಿಸುತ್ತಿರುವ ಆರ್ಥಿಕ ಸಹಭಾಗಿತ್ವವನ್ನು ಹೊಂದಿವೆ. ದೇಶ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ನಡೆದಿದ್ದು, ಭಾರತವು ಸಾಟಿಯಿಲ್ಲದ ಅವಕಾಶಗಳನ್ನು ನೀಡುತ್ತಿದೆ. ಮತ್ತು ನಮ್ಮ ಸಮಾಜಗಳಲ್ಲಿ ಐಶ್ವರ್ಯ ವೃದ್ಧಿಯ ಹೊಸ ಅವಕಾಶಗಳನ್ನು ಸೃಷ್ಟಿಸಲು ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹಣಕಾಸು ಹರಿವನ್ನು ವಿಸ್ತರಿಸಲು ನಾವು ಸಿದ್ಧರಿದ್ದೇವೆ. ಮೂಲಸೌಕರ್ಯ ನಿರ್ಮಾಣವುನಮ್ಮ ನಡುವಿನ ಸಹಭಾಗಿತ್ವದ ಫಲದಾಯಕ ಕ್ಷೇತ್ರವಾಗಿದೆ.

ಆದರೆ,ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಮಾಡಲು ಸಾಧ್ಯವಿದೆ. ಭಾರತದ ಮೂಲಸೌಕರ್ಯ ಅಗತ್ಯ ಮತ್ತು ನಮ್ಮ ಮಹತ್ವಾಕಾಂಕ್ಷಿ ಚತುರ ನಗರಗಳ ಅಭಿವೃದ್ಧಿಯ ದರ್ಶನವು ಮಲೇಷ್ಯಾದ ಸಾಮಥ್ರ್ಯ ದೊಂದಿಗೆ ಹೊಂದಿಕೊಳ್ಳಲಿದೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಮಲೇಷ್ಯಾದ ಕಂಪನಿಗಳು ಮೂಲಸೌಲಭ್ಯ ನಿರ್ಮಾಣ ಯೋಜನೆಗಳಲ್ಲಿ ಪಾಲ್ಗೊಂಡಿವೆ. ಭಾರತದ ಕಂಪನಿಗಳು ಕೂಡ ಮಲೇಷ್ಯಾದ ಆರ್ಥಿಕತೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದು, ಹೂಡಿಕೆ ಮಾಡಿವೆ. ಪ್ರಧಾನಿ ನಜೀಬ್ ಅವರ ಜೊತೆ ಉನ್ನತ ಮಟ್ಟದ ವ್ಯಾಪಾರ ನಿಯೋಗ ಆಗಮಿಸಿರುವುದು ಸಂತಸಕರ. ನಮ್ಮಗಳ ವಾಣಿಜ್ಯಿಕ ಸಂಬಂಧದ ಮಟ್ಟ ಮತ್ತು ವೇಗವು ಈಗ ಸ್ಥಾಪನೆಯಾಗಲಿರುವ ಸಹಭಾಗಿತ್ವದಿಂದ ಹೆಚ್ಚಲಿದೆ ಎಂಬ ವಿಶ್ವಾಸವಿದೆ. ನಮ್ಮ ರೈತರ ಒಳಿತಿನ ಜೊತೆ ಸಂಬಂಧವಿರುವ ಆಹಾರ ಸುರಕ್ಷೆಯ ಗುರಿ ಇರುವ ಪ್ರಯತ್ನಗಳನ್ನು ನಾವು ಒಗ್ಗೂಡಿಸುತ್ತಿದ್ದೇವೆ. ಮಲೇಷ್ಯಾದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸಗೊಬ್ಬರ ಕಾರ್ಖಾನೆಗೆ ಸಂಬಂಧಿಸಿದ ಎಂಓಯು ಮತ್ತು ಮಲೇಷ್ಯಾದಿಂದ ಭಾರತಕ್ಕೆ ಯೂರಿಯಾ ರಫ್ತು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಗೆಳೆಯರೇ,

ಮಲೇಷ್ಯಾದ ಯು ಟಿ ಎ ಆರ್ ವಿಶ್ವವಿದ್ಯಾನಿಲಯವು ಮೊದಲನೇ ಬಾರಿಗೆ ಆಯುರ್ವೇದ ಪದವಿಯನ್ನು ಆರಂಭಿಸಿದೆ.ಇದೊಂದು ಸ್ವಾಗತಾರ್ಹ ಬೆಳವಣಿಗೆ. ಮತ್ತು ಅದೇ ವಿಶ್ವವಿದ್ಯಾನಿಲಯದಲ್ಲಿ ಆಯುರ್ವೇದ ಪೀಠವನ್ನು ಸ್ಥಾಪಿಸುವ ಯೋಚನೆಯಿದೆ. ಈ ಕುರಿತು ಆದಷ್ಟು ಬೇಗ ನಿರ್ಧಾರವಾದಲ್ಲಿ, ಈ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಇನ್ನಷ್ಟು ದೃಢವಾಗಲಿದೆ. ನಮ್ಮ ವಿದ್ಯಾಭ್ಯಾಸ ವಿನಿಮಯವು ಎರಡೂ ದೇಶಗಳ ಜನರ ನಡುವಿನ ಪ್ರಬಲ ಉತ್ತೇಜಕವಾಗಿದೆ. ಇಂದು ಪರಸ್ಪರರ ಪದವಿಗಳನ್ನು ಮನ್ನಿಸುವ ಎಂಓಯು ಒಂದು ಮೈಲುಗಲ್ಲು ಬೆಳವಣಿಗೆಯಾಗಿದ್ದು, ಎರಡೂ ದೇಶಗಳ ವಿದ್ಯಾರ್ಥಿಗಳು ಮತ್ತು ಸಮಾಜಕ್ಕೆ ಉಪಯುಕ್ತವಾಗಲಿದೆ.

ಗೆಳೆಯರೇ,

ನಾವು ವಾಸಿಸುತ್ತಿರುವ ವಲಯ ಮತ್ತು ಕಾಲದಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಭೀತಿಯು ನಿರಂತರವಾಗಿ ಹೆಚ್ಚುತ್ತಿದೆ. ನಮ್ಮ ದೇಶಗಳು ಹಾಗೂ ಪ್ರಾಂತ್ಯದ ಸ್ಥಿರತೆ ಮತ್ತು ಆರ್ಥಿಕ ಪ್ರಗತಿಗೆ ಇವು ಸವಾಲೊಡ್ಡುತ್ತಿವೆ ಎಂದು ಪ್ರಧಾನಿ ನಜೀಬ್ ಮತ್ತು ತಾವು ಒಪ್ಪಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ, ಜಂಟಿ ಉಗ್ರವಾದ ವಿರೋಧ ಕಾರ್ಯಾಚರಣೆಯಲ್ಲಿ ಮಲೇಷ್ಯಾ ಸರ್ಕಾರದ ಮುಂದುವರಿದ ಸಹಕಾರವನ್ನು ನಾನು ಶ್ಲಾಘಿಸುತ್ತೇನೆ.

ಗೌರವಾನ್ವಿತರೇ,

ಮೂಲಭೂತವಾದ ಮತ್ತು ಉಗ್ರವಾದದ ವಿರುದ್ಧದ ನಿಮ್ಮ ನಾಯಕತ್ವವು ಇಡೀ ಪ್ರಾಂತ್ಯಕ್ಕೇ ಸ್ಫೂರ್ತಿದಾಯಕವಾದುದು. ನಮ್ಮ ವಿಶಾಲ ವ್ಯಾಪ್ತಿಯ ರಕ್ಷಣಾ ಸಹಭಾಗಿತ್ವವು ಈಗಾಗಲೇ ನಮ್ಮ ಶಸ್ತ್ರಾಸ್ತ್ರ ದಳಗಳನ್ನು ಸನಿಹಕ್ಕೆ ತಂದಿವೆ.

ನಾವು ಸಹಕರಿಸುತ್ತಿರುವ ಕ್ಷೇತ್ರಗಳೆಂದರೆ,

* ತರಬೇತಿ ಮತ್ತು ಸಾಮಥ್ರ್ಯ ನಿರ್ಮಾಣ

* ಉಪಕರಣ ಮತ್ತು ಮಿಲಿಟರಿ ಗುರುವರಗಳ ನಿರ್ವಹಣೆ

* ಸಾಗರೋತ್ತರ ಸುರಕ್ಷೆ ಮತ್ತು

8. ಸ್ವಾಭಾವಿಕ ಅವಘಡದ ವೇಳೆ ಪ್ರತಿಕ್ರಿಯೆ

ಪ್ರಧಾನಿ ನಜೀಬ್ ಹಾಗೂ ತಾವು ಆರ್ಥಿಕ ಸಮೃದ್ಧಿ, ನೌಕಾಯಾನ ಸ್ವಾತಂತ್ರ್ಯ ಮತ್ತು ಏಷ್ಯಾ-ಪೆಸಿಫಿಕ್ ಪ್ರಾಂತ್ಯದಲ್ಲಿ ವಿಶೇಷವಾಗಿ ಸಾಗರಗಳ ಸ್ಥಿರತೆಯನ್ನು ಉತ್ತೇಜಿಸುವಲ್ಲಿ ನಮ್ಮ ಪಾತ್ರ ಹಾಗೂ ಜವಾಬ್ದಾರಿಯ ಬಗೆಗೆ ಅರಿವುಳ್ಳವರಾಗಿದ್ದೇವೆ. ನಮ್ಮ ಸಮಾಜಗಳ ಸುರಕ್ಷೆ ಹಾಗೂ ಪ್ರಾಂತ್ಯದ ಒಳಿತಿಗೆ ನಾವು ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ಬಲಗೊಳಿಸಲು ನಿರ್ಧರಿಸಿದ್ದು, ಸಮಾನ ಕಾಳಜಿ ಹಾಗೂ ಸವಾಲುಗಳಿಗೆ ಪರಿಣಾಮಕಾರಿ ಪ್ರತಿಕ್ರಿಯೆಯನ್ನು ರೂಪಿಸಲು ಒಪ್ಪಿಕೊಂಡಿದ್ದೇವೆ.

ಗೌರವಾನ್ವಿತ ಪ್ರಧಾನಿ ನಜೀಬ್ ಅವರೇ,

ನಾನು ಇನ್ನೊಮ್ಮೆ ನಿಮ್ಮನ್ನು ಭಾರತಕ್ಕೆ ಸ್ವಾಗತಿಸುತ್ತಿದ್ದೇನೆ. ನಿಮ್ಮ ಉತ್ಪಾದಕ ಚರ್ಚೆಗಳಿಗಾಗಿ ನಿಮಗೆ ಧನ್ಯವಾದ ಸೂಚಿಸುತ್ತೇನೆ. ಇಂದಿನ ನಮ್ಮ ನಿರ್ಧಾರಗಳು ನಮ್ಮ ಸಹಭಾಗಿತ್ವವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತವೆ ಎಂಬ ವಿಶ್ವಾಸ ನನಗಿದೆ. ನಮ್ಮ ಭಾರತದ ಭೇಟಿ ಫಲದಾಯಕ ಮತ್ತು ಸಂತಸಕರವಾಗಿ ಇರಲಿ ಎಂದು ಆಶಿಸುತ್ತೇನೆ.

ನಿಮಗೆ ಧನ್ಯವಾದ.