ಪಿಎಂಇಂಡಿಯಾ
ಎಲ್ಲರಿಗೂ ನಮಸ್ಕಾರ,
ಈ ವರ್ಷ ಆಗಸ್ಟ್ 15, ನಮ್ಮ ಎಪ್ಪತ್ತನೇ ಸ್ವಾತಂತ್ರ್ಯ ವರ್ಷವನ್ನು ಆಚರಿಸುವ ಮಹತ್ವದ ಮೈಲಿಗಲ್ಲಾಗಿದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಸ್ಮರಿಸುವ ಆಗಸ್ಟ್ 15ಕ್ಕೆ ಸ್ವಲ್ಪ ಮೊದಲು ಆರಂಭವಾಗುತ್ತಿರುವ ಈ ಅಧಿವೇಶನ ಕೂಡ ಮಹತ್ವ ಪಡೆದುಕೊಂಡಿದೆ.
ನಮ್ಮ 70 ವರ್ಷಗಳ ಪಯಣ ಈ ಅಧಿವೇಶನದಲ್ಲಿ ಹೊಸ ಎತ್ತರಕ್ಕೆ ಏರಲಿದೆ. ಈ ಉದ್ದೇಶಕ್ಕಾಗಿ, ನಾವು ಉನ್ನತ ಗುಣಮಟ್ಟದ ಚರ್ಚೆ ನಡೆಸಬೇಕು ಮತ್ತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕು ಆಗ ದೇಶ ತ್ವರಿತ ಗತಿಯಲ್ಲಿ ಮುನ್ನಡೆಯುತ್ತದೆ. ಹಾಗಾಗಿ ನಾವೆಲ್ಲರೂ ಸಂಸತ್ತಿನಲ್ಲಿ ಒಟ್ಟಾಗಿ ಹೆಗಲಿಗೆ ಹೆಗಲು ಕೊಟ್ಟು ದೇಶಕ್ಕೆ ಹೊಸ ದಿಕ್ಕು ತೋರುವ ಕಾರ್ಯ ಮಾಡಬೇಕು.
ಕಳೆದ ಕೆಲವು ದಿನಗಳಿಂದ ಎಲ್ಲ ಪಕ್ಷಗಳು ಮತ್ತು ನಾಯಕರು ವೈಯಕ್ತಿಕವಾಗಿ ಇಲ್ಲವೇ ಸಂಘಟಿತರಾಗಿ ನಾವು ದೇಶದ ಒಳಿತಿಗಾಗಿ ಉತ್ತಮ ನಿರ್ಧಾರ ಕೈಗೊಳ್ಳುವ ಬದ್ಧತೆ ಕುರಿತ ಮತ್ತು ದೇಶವನ್ನು ತ್ವರಿತ ಗತಿಯಲ್ಲಿ ಮುನ್ನಡೆಸುವ ಭಾವನೆ ಹಂಚಿಕೊಂಡಿದ್ದಾರೆ. ಎಲ್ಲರಿಗೂ ನನ್ನ ಶುಭಾಯಗಳು.
ಧನ್ಯವಾದಗಳು
The mood all around is to take good decisions and move towards the path of progress: PM at the start of Parliament session
— PMO India (@PMOIndia) July 18, 2016
Happening now: PM @narendramodi is introducing the new Ministers who took oath recently, in the Lok Sabha.
— PMO India (@PMOIndia) July 18, 2016