ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಉದ್ಯೋಗಕ್ಕಾಗಿ ಇ.ಸಿ.ಆರ್. ರಾಷ್ಟ್ರಗಳಿಗೆ ಹೋಗುವ ವಲಸೆ ಪರಿಶೀಲನೆ ಅಗತ್ಯ ಇರುವ (ಇ.ಸಿ.ಆರ್).-ವರ್ಗದ ನೌಕರರ ಸಾಮಾಜಿಕ ಭದ್ರತೆ – ಸಂಬಂಧಿತ ವಿಷಯಗಳನ್ನು ನಿಭಾಯಿಸಲು 2012ರಲ್ಲಿ ಸ್ಥಾಪಿಸಲಾಗಿದ್ದು ಮಹಾತ್ಮಾಗಾಂಧಿ ಪ್ರವಾಸಿ ಸುರಕ್ಷಾ ಯೋಜನೆ (ಎಂ.ಜಿ.ಪಿ.ಎಸ್.ವೈ.) ಮುಚ್ಚಲು ತನ್ನ ಅನುಮೋದನೆ ನೀಡಿದೆ.
ಎಂ.ಜಿ. ಪಿ.ಎಸ್.ವೈ. ಅಡಿ ವಂತಿಕೆ ಬಹಳ ಕಡಿಮೆ ಇದ್ದು, ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಯಾವುದೇ ಹೊಸ ಚಂದಾದಾರಿಕೆ ಸ್ವೀಕೃತವಾಗಿರುವುದಿಲ್ಲ. ಈ ಯೋಜನೆಯನ್ನು ಮುಚ್ಚುವುದರಿಂದ ನಿವಾರಿಸಬಹುದಾದ, ಮರುಕಳಿಸಬಹುದಾದ ಆಡಳಿತಾತ್ಮಕ ವೆಚ್ಚ ಮತ್ತು ದಾಖಲೆ – ಇಡುವ ವೆಚ್ಚವನ್ನು ತಡೆಯಬಹುದಾಗಿದೆ.
AKT/VBA/SH