ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾತೃಭೂಮಿಯ ಸುರಕ್ಷತೆ ಕುರಿತಂತೆ ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವೆ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ಸಹಕಾರ ಒಪ್ಪಂದವು ಭಾರತ ಮತ್ತು ಯು.ಎಸ್.ಎ. ನಡುವಿನ ದ್ವಿಪಕ್ಷೀಯ ಭದ್ರತಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಮತ್ತು ಎರಡೂ ರಾಷ್ಟ್ರಗಳ ನಡುವೆ ಮಾತೃಭೂಮಿ ಸುರಕ್ಷತೆ ಮಾತುಕತೆಗಾಗಿ ಸ್ಥಾಪಿಸಲುದ್ದೇಶಿಸಿರುವ ಆರು ಉಪ ಗುಂಪುಗಳ ನಡುವೆ ಸಹಯೋಗ ಮತ್ತು ಸಂವಾದಕ್ಕೆ ಸಹಕಾರಿಯಾಗಲಿದೆ.
*****
SS/VBA/AK