ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾದಕ ದ್ರವ್ಯಗಳ ಕುರಿತ ಜನರ ಅಪೇಕ್ಷೆ ತಗ್ಗಿಸುವುದು ಮತ್ತು ನಶೆ ತರಿಸುವ ವಸ್ತುಗಳ ಅಕ್ರಮ ಸಾಗಣೆ ತಡೆ ಹಾಗೂ ಪೂರ್ವಗಾಮಿ ರಾಸಾಯನಿಕಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಮಾದಕ ವಸ್ತುಗಳ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಸಹಕಾರ ಕ್ಷೇತ್ರಗಳನ್ನು ಪಟ್ಟಿ ಮಾಡುತ್ತದೆ. ಇದು ಮಾಹಿತಿಯ ವಿನಿಮಯದ ಕಾರ್ಯವಿಧಾನ ಮತ್ತು ತಿಳಿವಳಿಕೆ ಒಪ್ಪಂದದಅನುಷ್ಠಾನದ ಜವಾಬ್ದಾರಿ ಹೊಂದಿರುವ ಎರಡು ರಾಷ್ಟ್ರಗಳಲ್ಲಿನ ಸಕ್ಷಮ ಪ್ರಾಧಿಕಾರಗಳಿಗೆ ಯಾವುದೇ ಮಾಹಿತಿಯನ್ನು ವಿನಿಮಯ ಮಾಡುವ ವ್ಯವಸ್ಥೆಯನ್ನು ಸಹ ಸೂಚಿಸುತ್ತದೆ.
ಮಾದಕ ವಸ್ತುಗಳಿಗೆ ಸಂಬಂಧಿಸಿದ ವಿಚಾರಗಳ ಸಹಕಾರವು ಎರಡೂ ರಾಷ್ಟ್ರಗಳಲ್ಲಿ ಅಕ್ರಮ ಮಾದಕದ್ರವ್ಯ, ನಶೀಲಿ ಪದಾರ್ಥಗಳು ಮತ್ತು ಪೂರ್ವಗಾಮಿ ರಾಸಾಯನಿಕಗಳ ಅಕ್ರಮ ಸಾಗಾಟವನ್ನು ತಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎರಡೂ ಪಕ್ಷಕಾರರಿಗೆ ಈ ತಿಳಿವಳಿಕೆ ಒಪ್ಪಂದವು ಪ್ರಯತ್ನಶೀಲತೆಯನ್ನು ತಿಳಿಸುತ್ತದೆ: –
(i) ಮಾದಕ ದ್ರವ್ಯ, ನಶೀಲಿ ಪದಾರ್ಥ ಮತ್ತು ಅವುಗಳ ಪೂರ್ವಗಾಮಿಗಳ ತಡೆ ಹಾಗೂ ಮಾದಕ ವಸ್ತುಗಳ ಬಗ್ಗೆ ಜನರ ಅಪೇಕ್ಷೆ ತಗ್ಗಿಸಲು ನಿರ್ಬಂಧ, ಜಾಗೃತಿ, ಶಿಕ್ಷಣ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳು, ಚಿಕಿತ್ಸೆ ಮತ್ತು ಪುನರ್ವಸತಿಯ ಮೂಲಕ ಸಮರ್ಥವಾಗಿ ಪರಿಹರಿಸುವ ಕುರಿತಂತೆ ಪರಸ್ಪರ ಸಹಕಾರ ಅಭಿವೃದ್ಧಿ ಪಡಿಸಲು; ಮತ್ತು
(ii) ಮಾದಕದ್ರವ್ಯ ಕುರಿತ ವಿಚಾರಗಳಕಾರ್ಯಾಚರಣೆಯ, ತಾಂತ್ರಿಕ ಮತ್ತು ಸಾಮಾನ್ಯ ಸ್ವರೂಪದ ಮಾಹಿತಿ ವಿನಿಮಯ, ಮಾದಕ ದ್ರವ್ಯ, ನಶೀಲಿ ಪದಾರ್ಥ ಮತ್ತು ಅವುಗಳ ಪೂರ್ವಗಾಮಿಗಳ ತಡೆ ಹಾಗೂ ಮಾದಕ ವಸ್ತುಗಳ ಅಕ್ರಮ ಸಾಗಾಟ ತಡೆಯಲು ಹಾಲಿ ಇರುವ ಕಾನೂನು, ನಿಯಮ, ಪ್ರಕ್ರಿಯೆ, ಉತ್ತಮ ಪದ್ಧತಿ ಮತ್ತು ವಿಧಾನಗಳ ಕುರಿತ ಲಿಖಿತ ವಿಚಾರಗಳ ಮತ್ತು ಹಾಲಿ ಇರುವ ಕಾಯಿದೆಗಳಿಗೆ ನಂತರದ ತಿದ್ದುಪಡಿಗಳ ಕುರಿತ ವಿನಿಮಯ.
ಹಿನ್ನೆಲೆ:
ಭಾರತವು ಸದಾ, ಮಾದಕ ವಸ್ತು ಕಳ್ಳಸಾಗಣೆಯನ್ನು ಹತ್ತಿಕ್ಕುವ ಜಾಗತಿಕ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಪ್ರಯತ್ನವೂ ಸೇಹಿತಂತೆ, ಹಲವು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಉಪಕ್ರಮಗಳಿಗೆ ಪಕ್ಷಕಾರನಾಗಿದೆ. ನಶೀಲಿ ವಸ್ತುಗಳ ಕುರಿತ ವಿಶ್ವಸಂಸ್ಥೆಯ ಸಮಾವೇಶದ ಸ್ಪೂರ್ತಿಗೆ ಅನುಗುಣವಾಗಿ, ನೆರೆಯ ರಾಷ್ಟ್ರಗಳೊಂದಿಗೆ ಮತ್ತು ನಮ್ಮ ದೇಶದಲ್ಲಿ ಮಾದಕ ವಸ್ತು ಸನ್ನಿವೇಶದ ನೇರ ಹೊಣೆ ಹೊಂದಿರುವ ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದ/ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಪ್ರಯತ್ನಗಳನ್ನು ಮಾಡಲಾಗಿದೆ. ಅಂಥ ದ್ವಿಪಕ್ಷೀಯ ಒಪ್ಪಂದಗಳು/ತಿಳಿವಳಿಕೆ ಒಪ್ಪಂದಗಳನ್ನು ಈಗಾಗಲೇ ಹಲವು ರಾಷ್ಟ್ರಗಳೊಂದಿಗೆ ಮಾಡಿಕೊಳ್ಳಲಾಗಿದೆ. ನೇಪಾಳದೊಂದಿಗಿನ ಪ್ರಸ್ತಾಪಿತ ತಿಳಿವಳಿಕೆ ಒಪ್ಪಂದವನ್ನು ಮಾದಕ ವಸ್ತು ವಿಚಾರಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ಸಹಕಾರಕ್ಕಾಗಿ ಮಾಡಿಕೊಳ್ಳಲಾಗುತ್ತಿದೆ.
*****